ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಸಾವಿತ್ರಿಬಾಯಿ ಫುಲೆ ಟ್ರಸ್ಟ್ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಗಣ್ಯರು ಉದ್ಘಾಟಿಸಿದರು. ಶ್ರೀತೋತಾಪುರಿ ಸೋಮಶೇಖರ ಗುರೂಜಿ, ಮಡ್ಡೀಕೆರೆ ಗೋಪಾಲ್, ಅಂಶಿ ಪ್ರಸನ್ನಕುಮಾರ್, ಸಿ.ಎಲ್.ಜಗದೀಶ್, ಡಿ.ಎಂ.ಪ್ರೀತಿ ಇತರರಿದ್ದರು. 
ಮೈಸೂರು

ಸಾಧಕರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ

ಅವಿನಾಶ್ ಜೈನಹಳ್ಳಿ
ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಂಡ್ಯದ ಸಾವಿತ್ರಿಬಾಯಿ ಫುಲೆ ಟ್ರಸ್ಟ್ ಹಾಗೂ ಸಾವಿತ್ರಿ ಬಾಯಿ ವೃದ್ಧಾಶ್ರಮದ ವತಿಯಿಂದ ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಕನ್ನಡ ರಾಜ್ಯೋತ್ಸವ, ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಮೈಸೂರಿನ ಬಿ.ಎಂ.ಮೂರ್ತಿ, ಜಿ. ಪ್ರವೀಣ್‌ಕುಮಾರ್, ಲಯನ್ ಕುಮಾರ್, ರವೀಂದ್ರ, ನಾಗರತ್ನಮ್ಮ, ನಾಗೇಶ್, ಎಸ್.ಪ್ರಜ್ವಲ್, ಶ್ರೀಕಾಂತ್, ಸರಳಾದೇವಿ, ರಾಯಚೂರಿನ ಮಂಜುನಾಥ್ ಗಾಣೇಗೇರ, ಸಿಂಧನೂರಿನ ಹೊಸಗೇರಪ್ಪ ಗೊರೆಬಾಳ, ಹೂವಿನ ಹಡಗಲಿಯ ಚಮನ್ ಸಾಬ್, ಬೆಂಗಳೂರಿನ ಮಲ್ಲಿಕಾರ್ಜುನ ಕೊಂಗೆ, ಮೂರ್ತಿ, ಲಕ್ಷ್ಮೀಕಾಂತ ಪೂಜಾರಿ, ನವೀನ್‌ಕುಮಾರ್, ಸಿ.ಪಿಳ್ಳರಾಜು, ವಸಂತಕುಮಾರ್, ಅಂದಲಿ, ಬಿ.ಎಸ್.ಅನಿಲ್‌ಕುಮಾರ್, ಜಿ.ಜೆ.ನಂಜುಂಡಪ್ಪ, ಎಂ.ಸಾವಿತ್ರಮ್ಮ, ಹಾಸನದ ರೂಪತಾರಾ, ಚಿತ್ರದುರ್ಗದ ರತ್ನಾ, ಬಾಗಲಕೋಟೆಯ ಮುತ್ತಯ ವಡ್ಡರ, ಕೊಣನೂರಿನ ಜಮೀರ್ ಅಹಮದ್, ನಂದೀಶ್ ಈಚರೆಗೆ, ಮಮತಾ ಗೆಜ್ಜಗಳ್ಳಿ, ಗುರುಮಲ್ಲು, ಎಚ್.ಡಿ.ಕೋಟೆಯ ಮಣಿಕಂಠ, ರಾಮನಗರದ ರೇಣುಕಾಪ್ರಸಾದ್, ಲೋಕೇಶ್, ಬಸವರಾಜು ಬಸಪ್ಪ ಹುಣಸೆಮರ ಅವರಿಗೆ ಸಾವಿತ್ರಿಬಾಯಿ ಫುಲೆ, ಹೆಮ್ಮೆಯ ಕನ್ನಡಿಗ, ಹೆಮ್ಮೆಯ ಕನ್ನಡತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ವೇಳೆ ಡೊಳ್ಳು ಕುಣಿತ, ಸಮರ್ಥನಾ ಸೇವಾ ಟ್ರಸ್ಟ್ ಅಂಧ ಮಕ್ಕಳಿಂದ ನೃತ್ಯ, ಮೈಸೂರಿನ ಅರುಣೋದಯ ಟ್ರಸ್ಟ್, ಕೂಗು ಸೇವಾ ಟ್ರಸ್ಟ್ ಮಕ್ಕಳಿಂದ ಕಾರ್ಯಕ್ರಮ, ಚನ್ನರಾಯಪಟ್ಟಣ ಉಗ್ರನರಸಿಂಹ ಯೋಗ ನೃತ್ಯರೂಪಕ, ಕೊರಿಯೋಗ್ರಾಫರ್ ಮಂಜುನಾಥ್ ಕೆ.ಅಡಗೂರು ತಂಡದ ವಿಸ್ಮಿತಾ, ತಾರುಣ್ಯ, ಮಿಥುನ್, ಮೋನಿಷಾ, ನಿಸರ್ಗ ಲಿಪಿ ಅವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಬಸವೇಶ್ವರ ರಾಜಯೋಗ ಮಠದ ಶ್ರೀ ತೋತಪುರಿ ಸೋಮಶೇಖರ ಗುರೂಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಸಾವಿತ್ರಿಬಾಯಿ ಫುಲೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಿ.ಎಲ್.ಜಗದೀಶ್, ಉಪಾಧ್ಯಕ್ಷೆ ಡಿ.ಎಂ.ಪ್ರೀತಿ ನೇತೃತ್ವದಲ್ಲಿ ನಡೆದ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ.ಬೈರಿ, ಜಿಲ್ಲಾ ಕಸಾಪ ಉಪಾಧ್ಯಕ್ಷ ಟಿ.ತ್ಯಾಗರಾಜು, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ನಟ ಶಿವಕುಮಾರ್ ಆರಾಧ್ಯ, ಅಲೆಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲ ಎಸ್.ವೆಂಕಟೇಶ್, ಮಂಡ್ಯ ಮಮತಾ ನರ್ಸಿಂಗ್ ಹೋಮ್‌ನ ಡಾ.ಆನಂದ್, ಬೆಂಗಳೂರಿನ ಡಾ.ಉಮಾ ಬುಗ್ಗಿ, ಕೇಂದ್ರ ಕಾರಾಗೃಹ ಸಂದರ್ಶಕ ಮಂಡಳಿ ಸದಸ್ಯ ಪವನ್ ಸಿದ್ದರಾಮ ಭಾಗವಹಿಸಿದ್ದರು.