ಬಿಸಿ ಊಟ ತಯಾರಿಸುವ ಸಿಬ್ಬಂದಿಗೆ ಉಚಿತ ಸಮವಸ್ತ್ರಗಳನ್ನು ಮಡಿಲು ಸೇವಾ ಸಂಸ್ಥೆಯ ಅಧ್ಯಕ್ಷೆ ಡಿ.ಎಂ.ತ್ರಿವೇಣಿ ವಿತರಿಸಿದರು. ಮಂಜುಳಾ, ಜಯರಾಮ್, ಪಿ.ಪಿ.ಚಲುವರಾಜ್, ಪ್ರಸನ್ನಕುಮಾರ್, ಅಶೋಕ್‌ರಾಜ್ ಲಿಂಗಯ್ಯ ಇತರರಿದ್ದರು.
ಬನ್ನಿಕುಪ್ಪೆ: ನಿತ್ಯ ಬಿಸಿಯೂಟ ತಯಾರಿಸುವ ಶ್ರಮಜೀವಿಗಳ ನೆರವಿಗೆ ಮಡಿಲು ಸೇವಾ ಸಂಸ್ಥೆ ಸಹಾಯಕ್ಕೆ ಸ್ಪಂದಿಸಲಿದೆ ಎಂದು ಮಡಿಲು ಸೇವಾ ಸಂಸ್ಥೆ ಅಧ್ಯಕ್ಷೆ ಡಿ.ಎಂ.ತ್ರಿವೇಣಿ ಭರವಸೆ ನೀಡಿದರು.
ತಾಲೂಕಿನ ಬನ್ನಿಕುಪ್ಪೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ 24 ಸರ್ಕಾರಿ ಶಾಲೆಗಳ 110 ಅಡಿಗೆ ತಯಾರಿಸುವ ಮಹಿಳಾ ಸಿಬ್ಬಂದಿಗೆ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಸೀರೆ ವಿತರಿಸಿ ಮಾತನಾಡಿದ ಅವರು, ಸಂಸ್ಥೆಯ ವತಿಯಿಂದ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯಿಂದ ಸಮವಸ್ತ್ರ ಬ್ಯಾಗ್ ಹಾಗೂ ತಟ್ಟೆ ಲೋಟ ಹಾಗೂ ಇನ್ನಿತರ ವಿದ್ಯಾಭ್ಯಾಸ ಪರಿಕರಗಳನ್ನು ನೀಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಬಿಸಿ ಊಟ ತಯಾರಿಸುವ ಸಿಬ್ಬಂದಿಗೆ ಸೀರೆ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಮೊದಲ ಹಂತವಾಗಿ ಕ್ಲಸ್ಟರ್ ಮಟ್ಟದ 110 ಮಹಿಳಾ ಸಿಬ್ಬಂದಿಗೆ ಸೀರೆ ವಿತರಿಸಲಾಗಿದೆ ಮುಂದಿನ ದಿನಗಳಲ್ಲಿ ಹಂತಹಂತವಾಗಿ ತಾಲೂಕಿನ ಎಲ್ಲ ಕ್ಲಸ್ಟರ್ ಮಟ್ಟದ ಸರ್ಕಾರಿ ಶಾಲೆಗಳ ಬಿಸಿ ಊಟ ತಯಾರಿಸುವ ಸಿಬ್ಬಂದಿಗೆ ಸೀರೆ ವಿತರಿಸಲಾಗುವುದು ಎಂದರು.
ಬಿಸಿ ಊಟ ನೌಕರರ ಸಂಘದ ಅಧ್ಯಕ್ಷೆ ಮಂಜುಳಾ, ಪ್ಯಾಕ್ಸ್ ಸಂಸ್ಥೆ ಅಧ್ಯಕ್ಷ ಜಯರಾಮ್, ನಿರ್ದೇಶಕ ಪಿ.ಪಿ.ಚಲುವರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್, ಉದ್ಯಮಿ ಅಶೋಕ್‌ರಾಜ್ ಲಿಂಗಯ್ಯ, ಯಜಮಾನ ಕೂಸಪ್ಪ, ಮುಖಂಡರಾದ ರಾಮಚಂದ್ರ ನಾಯಕ, ಕೃಷ್ಣೇಗೌಡ, ಬಸವರಾಜು, ಶಿಕ್ಷಕ ಶಿವಕುಮಾರ್ ಸೇರಿದಂತೆ ಊರಿನ ಮುಖಂಡರು. ಗ್ರಾಮಸ್ಥರು ಇದ್ದರು.
ಬಿಸಿ ಊಟ ತಯಾರಿಸುವ ಸಿಬ್ಬಂದಿಗೆ ಉಚಿತ ಸಮವಸ್ತ್ರಗಳನ್ನು ಮಡಿಲು ಸೇವಾ ಸಂಸ್ಥೆಯ ಅಧ್ಯಕ್ಷೆ ಡಿ.ಎಂ.ತ್ರಿವೇಣಿ ವಿತರಿಸಿದರು. ಮಂಜುಳಾ, ಜಯರಾಮ್, ಪಿ.ಪಿ.ಚಲುವರಾಜ್, ಪ್ರಸನ್ನಕುಮಾರ್, ಅಶೋಕ್‌ರಾಜ್ ಲಿಂಗಯ್ಯ ಇತರರಿದ್ದರು.