ಸರಗೂರು ತಾಲೂಕಿನ ಪಟ್ಟಣದ ಚೌಡೇಶ್ವರಿ ಭವನದಲ್ಲಿ ತೋಟವೀರ ಸೌಹಾರ್ದ ಸಹಕಾರ ಸಂಘವನ್ನು ಗಣ್ಯರು ಉದ್ಘಾಟಿಸಿದರು. ಜಿ.ವಿಜಯಕುಮಾರ್, ಶ್ರೀದಿವ್ಯ ಜ್ಞಾನನಂದಗಿರಿ ಸ್ವಾಮೀಜಿ, ಎಸ್.ವಿ.ಸುಬ್ಬರಾಮ ಮತ್ತಿತರರಿದ್ದರು.
ಸರಗೂರು: ಪರಸ್ಪರ ಸಹಕಾರ, ನಂಬಿಕೆ, ವಿಶ್ವಾಸ ಹಾಗೂ ಆಡಳಿತ ಮಂಡಳಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದರೆ ಸಹಕಾರ ಸಂಘಗಳು ಯಶಸ್ಸು ಹೊಂದಲು ಸಾಧ್ಯ ಎಂದು ಬೆಂಗಳೂರು ಚೌಡೇಶ್ವರಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಜಿ.ವಿಜಯಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ 10ನೇ ವಾರ್ಡಿನ ವ್ಯಾಪ್ತಿಯ ಚೌಡೇಶ್ವರಿ ಸಮುದಾಯದ ಭವನದಲ್ಲಿ ಇತ್ತೀಚೆಗೆ ತೊಗಟವೀರ ನೇಕಾರರ ಸೌಹಾರ್ದ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸೌಹಾರ್ದ ಸಹಕಾರ ಸಂಘಗಳು ಸರಳ ನಿಯಮಗಳೊಂದಿಗೆ ಜನರಿಗೆ ಉತ್ತಮ ಸೇವೆ ನೀಡುತ್ತಿವೆ. ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲೂ ಸಹಕಾರ ಸಂಘಗಳದ್ದು ಪ್ರಮುಖ ಪಾತ್ರವಿದೆ ಎಂದರು.
ಸಹಕಾರಿ ಸಂಘಗಳ ಬೆಳವಣಿಗೆಗೆ ಮಾನಸಿಕ ಗಟ್ಟಿತನ, ಚಾಕಚಕ್ಯತೆ, ಸಾರ್ವಜನಿಕರ ಸಂಪರ್ಕ ಮುಖ್ಯವಾಗಿದೆ. ಇವೆಲ್ಲವನ್ನೂ ಬೆಳೆಸಿಕೊಂಡಿರುವ ತೋಟವೀರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರು ಜನರೊಂದಿಗೆ ಪಕ್ಷಾತೀತವಾಗಿ ಬೆರತರೆ ಸಂಘವೂ ಉತ್ತಮವಾಗಿ ಬೆಳೆಯಲು ಸಾಧ್ಯ ಎಂದರು.
ದೊಡ್ಡಬಳ್ಳಾಪುರ ತಪಸಿಹಳ್ಳಿಯ ಶ್ರೀದಿವ್ಯ ಜ್ಞಾನನಂದಗಿರಿ ಸ್ವಾಮೀಜಿ ಆಶೀರ್ವಚನ ನೀಡಿದರು. ತೊಗಟವೀರ ನೇಕಾರರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎಸ್.ವಿ.ಸುಬ್ಬರಾಮ ಅಧ್ಯಕ್ಷತೆ ವಹಿಸಿದ್ದರು.
ಮಹಾಮಂಡಳ ಅಧ್ಯಕ್ಷ ಗೋವಿಂದಪ್ಪ, ಕಾರ್ಯದರ್ಶಿ ದೇವನಹಳ್ಳಿ ಮುನಿರಾಜು, ಉಪಾಧ್ಯಕ್ಷ ಮೋಹನ್‌ಕುಮಾರ್, ರಾಜ್ಯ ತೊಗಟವೀರ ಸಮಾಜದ ಮುಖಂಡ ಅಚ್ಚಪ್ಪ ನಾಗರಾಜು, ಶಿವಪ್ಪ, ತೊಗಟವೀರ ಸಮಾಜದ ಯಜಮಾನರಾದ ಜಿ.ರಘುರಾಮ, ಮುಖಂಡ ಎಸ್.ವಿ.ರಾಧಾಕೃಷ್ಣ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಆರ್.ನಾಗರಾಮ್, ಎಸ್.ವಿ.ವೇಣುಗೋಪಾಲ್, ಕೆ.ಆರ್.ಪೇಟೆ ತೊಗಟವೀರ ಸಮಾಜದ ಅಧ್ಯಕ್ಷ ಚಂದ್ರಶೇಖರ್, ವಾಸು, ನೀಲಕಂಠ, ಮಧು, ವಕೀಲ ನಾರಾಯಣಗೌಡ, ದಿನೇಶ್, ತೊಗಟವೀರ ನೇಕಾರರ ಸೌಹಾರ್ದ ಸಹಕಾರ ಸಂಘದ ಉಪಾಧ್ಯಕ್ಷ ಎಸ್.ವಿ.ಜನಾರ್ದನ್ ಮತ್ತಿತರರು ಹಾಜರಿದ್ದರು.