ಸರಗೂರು ತಾಲೂಕಿನ ಪಟ್ಟಣದ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಕನ್ನಡ ರಾಜ್ಯೋತ್ಸವದಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ ಪೂರ್ಣಿಮಾ ಮಾತನಾಡಿದರು.ವೈ ಡಿ ರಾಜಣ್ಣ.ಗಣೇಶ್ ಇದ್ದರು. 
ಮೈಸೂರು

ಹೊರಗಿನಿಂದ ಬಂದವರಿಗೆ ಕನ್ನಡ ಭಾಷೆ ಕಲಿಸಿರಿ

ಎಂ.ರವಿ
ಸರಗೂರು: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕನ್ನಡ ಭಾಷೆಗೆ ದೇವರ ಸ್ಥಾನ ಕೊಟ್ಟಿದ್ದೇವೆ ಎಂದು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪೂರ್ಣಿಮಾ ಅಭಿಪ್ರಾಯಪಟ್ಟರು.
ಪಟ್ಟಣದ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಶನಿವಾರ ವಿವೇಕಾನಂದ ಸ್ಮಾರಕ ಆಸ್ಪತ್ರೆ, ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ನಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಯನ್ನು ಮಾತನಾಡಿದರೆ ಸಾಲದು. ಭಾಷೆ ಉಳಿಸಲಿಕ್ಕೆ ನಾವೆಲ್ಲ ಪ್ರಯತ್ನಿಸಬೇಕು. ನಾನು ವೈದ್ಯನಾಗಿದ್ದರೂ ಕನ್ನಡ ಮಾದ್ಯಮದಲ್ಲಿ ನಾನು ಓದಿದು.್ದ ಈಗಲೂ ನಾನು ಕನ್ನಡದಲ್ಲಿಯೇ ಸಹಿ ಮಾಡುತ್ತಿದ್ದೇನೆ. ಹೊರಗಿನಿಂದ ಬಂದವರಿಗೆ ಕನ್ನಡವನ್ನು ಕಲಿಸುವಂತರಾಗಬೇಕು. ಕನ್ನಡ ಸುಂದರವಾದ ಭಾಷೆ. ನಾವು ನಮ್ಮ ಕನ್ನಡ ಭಾಷೆಗೆ ದೇವರ ಸ್ಥಾನ ಕೊಟ್ಟಿದ್ದೇವೆ. ಕನ್ನಡ ಭಾಷೆಗೆ ಅಪಾರವಾದ ಗೌರವವನ್ನು ನಾವೆಲ್ಲ ನೀಡಬೇಕು ಎಂದು ಹೇಳಿದರು.
ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ವೈ.ಡಿ.ರಾಜಣ್ಣ ಮಾತನಾಡಿ, ಕರ್ನಾಟಕ ರಾಜ್ಯ ಉದಯವಾಗಬೇಕು ಎಂಬುದು ಕನ್ನಡ ಹೋರಾಟಗಾರರ ಒತ್ತಾಸೆ. ನಾವು ನಮ್ಮ ಮಕ್ಕಳಿಗೆ ತಿಳಿಸಬೇಕಾಗಿರುವುದು ಕನ್ನಡ ಓದುವುದನ್ನು. ಕೇವಲ ಉದ್ಯೋಗಕ್ಕೆ ಮತ್ತು ಹಣ ಸಂಪಾದನೆಗೆ ಮಾತ್ರ ಸೀಮಿತವಾಗಬಾರದು. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಹೆಚ್ಚುತ್ತಿದ್ದು ಮನೆಗಳಲ್ಲಿ ಮಕ್ಕಳಿಗೆ ದಿನಪತ್ರಿಕೆ ಓದಲಿಕ್ಕೆ ಅಭ್ಯಾಸ ಮಾಡಿಸಿ. ಕಲೆ, ಸಂಸ್ಕೃತಿ, ಸಂಪ್ರದಾಯಗಳನ್ನು ಮಕ್ಕಳು ಕಲಿಯುವಂತಾಗಬೇಕು. ಕನ್ನಡವನ್ನು ಉಳಿಸಿ, ಪ್ರೀತಿಸಿ. ಕನ್ನಡವನ್ನು ಬೆಳೆಸುವ ಮೂಲಕ ನವೆಂಬರ್‌ಗೆ ಮಾಸಕ್ಕೆ ಮಾತ್ರ ಕನ್ನಡಿಗರಾಗದಿರಿ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸ್ವಾಮಿ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಫೆಥಾಲಜಿಸ್ಟ್ ಡಾ.ಗಣೇಶ್ ಮಾತನಾಡಿ, ಕನ್ನಡವು ದೈವ ಸ್ವರೂಪವಾದ ಭಾಷೆ. ನಮ್ಮ ತಂದೆ ತಾಯಿ ನಿಕಟವರ್ತಿಗಳಾಗಿ ಸಂಭಾಷಣೆ, ಸಂವಹನ, ಸಂತೋಷವನ್ನು ಹೃದಯಪೂರ್ವಕವಾಗಿ ಹಂಚಿಕೊಳ್ಳುವ ಭಾಷೆಯೇ ಕನ್ನಡ ಭಾಷೆೆ. ಕನ್ನಡ ನೆಲ ಜಲದ ಉಳಿವಿಗೆ ನಾವೆಲ್ಲರೂ ಹೋರಾಡಬೇಕು. ಪರಭಾಷೆಯನ್ನು ಗೌರವಿಸಬೇಕು. ನಮ್ಮ ಕನ್ನಡ ಮಾತೃಭಾಷೆಯನ್ನು ಉಳಿಸಬೇಕು ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದ ಆಸ್ಪತ್ರೆಯ ವ್ಯವಸ್ಥಾಪಕರಾದ ಬಿ.ಜಿ.ಸಂಧ್ಯಾ, ಡಾ.ಎಚ್.ಕೆ.ಶಂಕರ್, ಡಾ.ನಾಗೇಶ್. ಬೀನಾ, ನಿಂಗರಾಜು. ರಮೇಶ ಎಂ.ಪಿ.ಗೋಪಾಲಕೃಷ್ಣ, ಶ್ರೀಕಾಂತ್. ರೇಚಣ್ಣ ಪ್ರಸಾದ್, ಸುರೇಂದ್ರ, ಮಂಜುಳಾ ಜಯರಾಮ್, ನವೀನ್‌ಕುಮಾರ್, ಪ್ರವೀಣ್, ನಂಜುಂಡಸ್ವಾಮಿ, ಸುಧಾರಾಣಿ ಗೋಪಾಲಕೃಷ್ಣ, ಅನಿತಾ, ಸ್ಫೂರ್ತಿ ಕೃಷ್ಣಕುಮಾರ್ ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.