ಮೈಸೂರು ಜಿಲ್ಲಾ ಅಧಿವೇಶನದಲ್ಲಿ ಸಂಕ್ರಾಂತಿ ಉಪನ್ಯಾಸ
ಮೈಸೂರು: ಭಾರತ ಹಬ್ಬಗಳ ತವರು, ಇಲ್ಲಿ ಸಂಸ್ಕೃತಿ ಸಂಪನ್ನತೆಗಳು ನಮ್ಮ ರಕ್ತದಲ್ಲಿ ಹಾಸು ಹೊಕ್ಕಾಗಿವೆ. ನಮ್ಮ ಹಬ್ಬಗಳಲ್ಲಿ ಸಂಭ್ರಮದ ಜತೆಗೆ ಸಂಸ್ಕೃತಿಯ ಸೊಬಗು ಮನೆ ಮಾಡಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮೈಸೂರು ಜಿಲ್ಲಾ ಸಮಿತಿಯು ಭಾನುವಾರ ಸಿದ್ಧಾರ್ಥನಗರದಲ್ಲಿನ ಡಾ.ರಾಘವೇಂದ್ರ ಅವರ ಬೃಂದಾವನ ನಿವಾಸದ ಸಭಾಂಗಣದಲ್ಲಿ ಆಯೋಜಿಸಿದ್ದ ಮೈಸೂರು ಜಿಲ್ಲಾ ಅಧಿವೇಶನದಲ್ಲಿ ಸಂಕ್ರಾಂತಿ ಕುರಿತು ಉಪನ್ಯಾಸ ನೀಡಿ, ಸಮಗ್ರ ಕ್ರಾಂತಿ ಎಂಬುದೇ ಸಂಕ್ರಾಂತಿ. ಬದಲಾವಣೆ ಎಂಬುದು ಕ್ರಮೇಣ ಆಗುವಂತಹ ಪ್ರಕ್ರಿಯೆ ಎಂದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ವಿರಚಿತ ಚರಿತ ಚಂಪಕ, ಸಾಹಿತ್ಯದ ಸತ್ವ, ಕೊ.ಲಾ.ನಾಗರಾಜು ವಿರಚಿತ ಕೊಪ್ಪಲಿನ ಕತೆಗಳು ಎಂಬ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಗೂಗಲ್ ಉಪನ್ಯಾಸ ಮಾಲಿಕೆಯ ಐವತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಪ್ರಾಂತ ಸಂಪರ್ಕ ಪ್ರಮುಖ್ ಡಾ.ವಿ.ರಂಗನಾಥ್, ರಾಜ್ಯ ಉಪಾಧ್ಯಕ್ಷ ಬೆಳಗೋಡು ರಮೇಶ್ ಭಟ್,ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ಡಾ.ಎಸ್.ಮುರಳಿ, ಡಾ.ರಾಘವೇಂದ್ರ ಶೆಟ್ಟಿ, ಜಿಲ್ಲಾ ಅಧ್ಯಕ್ಷ ಸುಬ್ರಹ್ಮಣ್ಯ, ಕಾರ್ಯದರ್ಶಿ ಸು.ಸುಬ್ರಹ್ಮಣ್ಯ ಇದ್ದರು.