ಸುಗ್ಗನಹಳ್ಳಿ ವಿಜೇತ ಇಂಟರ್ನ್ಯಾಷನಲ್ ಶಾಲೆಯಲ್ಲಿ ಮಕ್ಕಳ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದರು.ನವೀನ್,ಬೇಬಿಮಹೇಶ್,ರಾಮೇಗೌಡ, ಮಹೇಶ್, ಪ್ರಕಾಶ್ ಇತರರು ಇದ್ದರು.
- ನ್ಯಾಚುರಲ್ ದೇಸಿರಿ ಗಾಣದ ಎಣ್ಣೆ ಉತ್ಪಾದನ ವ್ಯವಸ್ಥಾಪಕ ನವೀನ್ ಸಂಕ್ರಾಂತಿ ಹಬ್ಬಕ್ಕೆ ಚಾಲನೆ
ಸಾಲಿಗ್ರಾಮ: ಪಟ್ಟಣದ ವಿಜೇತ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ನ್ಯಾಚುರಲ್ ದೇಸಿರಿ ಗಾಣದ ಎಣ್ಣೆ ಉತ್ಪಾದನ ವ್ಯವಸ್ಥಾಪಕ ನವೀನ್ ಸಂಕ್ರಾಂತಿ ಹಬ್ಬಕ್ಕೆ ಚಾಲನೆ ನೀಡಿದರು.
ಇತಿಹಾಸ ಪೂರ್ವದಿಂದ ಗುರು ಹಿರಿಯರು ಆಚರಿಸಿಕೊಂಡು ಬರುತ್ತಿರುವ ಹಬ್ಬ ಹರಿದಿನಗಳ ಆಚರಣೆ ಹಿಂದೆ ಅದ್ಭುತ ಇತಿಹಾಸಗಳಿವೆ. ಗ್ರಾಮೀಣ ಭಾಗದ ಜನರಲ್ಲಿ ಅಡಗಿರುವ ಅದ್ಭುತ ಕಲೆ ಇದಕ್ಕೆ ಸಾಕ್ಷಿ. ಶಾಲೆಯಲ್ಲಿ ಸಂಕ್ರಾಂತಿ ಹಬ್ಬ ಆಚರಿಸುತ್ತಿರುವುದು ಗ್ರಾಮೀಣ ಸೊಗಡು ಮರುಕಳಿಸಿದಂತೆ ಭಾವವಾಗುತ್ತಿದೆ ಎಂದರು.
ಶಾಲಾ ಆವರಣದಲ್ಲಿ ಗ್ರಾಮೀಣ ವಾತಾವರಣ ನಿರ್ಮಾಣವಾಗಿತ್ತು. ಸಾಂಪ್ರದಾಯಿಕ ಶೈಲಿಯ ಬಟ್ಟೆ ಧರಿಸಿದ ಮಕ್ಕಳು ಹಾಗೂ ಶಿಕ್ಷಕರು ಸಂಭ್ರಮಿಸಿದರು. ಗುಡಿಸಲು ನಿರ್ಮಿಸಿ ಒಂದು ಕುಟುಂಬ ವಾಸ ಮಾಡುವ ಎಲ್ಲ ಸಲಕರಣೆಗಳನ್ನು ಇಟ್ಟು, ಕಣದಲ್ಲಿ ಭತ್ತ, ರಾಗಿಯನ್ನು ರಾಶಿ ಹಾಕಿ ಮಾವಿನ ತೋರಣಗಳಿಂದ ಅಲಂಕರಿಸಿ ಪೂಜಿಸಿದ್ದರು. ಸಿರಿ ಧಾನ್ಯಗಳ ಪ್ರದರ್ಶನವನ್ನು ಮೇಳದಲ್ಲಿ ಗಮನ ಸೆಳೆಯಿತು. ರೈತರು ಬೆಳೆದ ಧಾನ್ಯಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ್, ವಿಜೇತ ಇಂಟರ್‌ನ್ಯಾಷನಲ್ ಶಾಲೆಯ ಸಂಸ್ಥಾಪಕ ಎಚ್.ಸಿ. ಮಹೇಶ್, ವಿಜೇತ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷೆ ಬೇಬಿ ಮಹೇಶ್, ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಸಿ.ಸಿ.ಮಹದೇವ್, ಹೊಸ ಅಗ್ರಹಾರ ವಿ ಎಸ್‌ಎಸ್ ಅಧ್ಯಕ್ಷ ರಾಮೇಗೌಡ, ಉದ್ಯಮಿ ಪ್ರಕಾಶ್, ರಘು, ರಾಘವೇಂದ್ರ, ಆಕಾಶ್, ಶಾಲೆಯ ಎಲ್ಲ ಶಿಕ್ಷಕಿಯರು ಪಾಲಕರು ಮತ್ತು ಶಿಕ್ಷಕರು ಇದ್ದರು.