ಹನಸೋಗೆ ಗ್ರಾಮದ ನಾಯಕ ಸಮಾಜದಿಂದ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮಿಗೌಡರನ್ನು ಅಭಿನಂದಿಸಲಾಯಿತು. ಪ್ರಸನ್ನನಾಯಕ, ಚೆಲುವನಾಯಕ, ವಸಂತನಾಯಕ, ಶಿವಣ್ಣ ನಾಯಕ ಮತ್ತಿತರರಿದ್ದರು. 
ಮೈಸೂರು

ವಾಲ್ಮೀಕಿ ನಾಯಕ ಸಮಾಜದ ಅಭಿವೃದ್ಧಿ ನಿಮ್ಮೆಲ್ಲರ ಜವಾಬ್ದಾರಿ

ಸಾಲಿಗ್ರಾಮ: ವಾಲ್ಮೀಕಿ ನಾಯಕ ಸಮಾಜದ ಅಭಿವೃದ್ಧಿ ನಿಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಸಲಹೆ ನೀಡಿದರು.
ಹನಸೋಗೆ ಗ್ರಾಮದ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ವಿಧಾನಸಭಾ ಕ್ಷೇತ್ರದಲ್ಲಿ ವಾಲ್ಮೀಕಿ ಸಮಾಜದ ಮತದಾರರು ನಮ್ಮ ಚುನಾವಣೆಯಲ್ಲಿ ಹೆಚ್ಚು ಸಹಕಾರ ನೀಡುವ ಮೂಲಕ ರವಿಶಂಕರ್ ಗೆಲುವಿಗೆ ಸಹಕರಿಸಿದ್ದಾರೆ. ಸಮಾಜದ ಮತದಾರರನ್ನು ಮರೆಯುವ ಪ್ರಶ್ನೆಯೇ ಇಲ್ಲ. ವಾಲ್ಮೀಕಿ ಸಮಾಜ ವಾಸವಾಗಿರುವ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ವಾಲ್ಮೀಕಿ ನಿಗಮದಿಂದ ಬರುವ ಹಾಗೂ ಎಂಸಿಡಿಸಿಸಿ ಬ್ಯಾಂಕ್‌ಗಳಿಂದ ಬರುವ ಸೌಲಭ್ಯಗಳನ್ನು ಕೊಡಿಸುವ ಮೂಲಕ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇವೆ ಎಂದರು.
ಈಗಾಗಲೇ ಶಾಸಕ ಡಿ.ರವಿಶಂಕರ್ ಅವರೊಂದಿಗೆ ಮಾತನಾಡಿದ್ದು, ಹನಸೋಗೆ ಸಮುದಾಯ ಭವನಕ್ಕೆ ಇನ್ನು ಐದು ಲಕ್ಷ ರೂ.ಅನುದಾನ ನೀಡುವ ಮೂಲಕ ಸಮುದಾಯ ಭವನದಲ್ಲಿ ಸ್ಥಾನಗೃಹ, ಶೌಚಗೃಹ ಹಾಗೂ ಕಿಟಕಿಗಳ ನಿರ್ಮಾಣ ಸೇರಿದಂತೆ ಇನ್ನಷ್ಟು ಕೆಲಸಗಳಾಗಲು ಅನುದಾನ ನೀಡುವಂತೆ ಹೇಳಿದ್ದೇನೆ ಎಂದರು.
ನಾಯಕ ಸಮಾಜದ ಮುಖಂಡ ಪ್ರಸನ್ನನಾಯಕ ಮಾತನಾಡಿ, ದೊಡ್ಡಸ್ವಾಮೇಗೌಡರು ಮತ್ತು ಅವರ ಮಗ ಶಾಸಕ ಡಿ.ರವಿಶಂಕರ್ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ನಮ್ಮ ಸಮುದಾಯ ಭವನ ಕಾಮಗಾರಿ ಅರ್ಧಕ್ಕೆ ನಿಂತಿಹೋಗಿತು. ನಮ್ಮ ಮನವಿಗೆ ಸ್ಪಂದಿಸಿ 20 ಲಕ್ಷ ರೂ.ಅನುದಾನ ನೀಡಿ ಕೊಟ್ಟ ಮಾತಿನಂತೆ ನಡೆದು ಕೊಂಡಿದ್ದಾರೆ. ಹಾಗಾಗಿ ನಮ್ಮ ಸಮುದಾಯದ ಭವನದ ಕೆಲಸ ಪೂರ್ಣಗೊಂಡಿತು. ಸಮಾಜದ ವತಿಯಿಂದ ಮೈಸೂರು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ದೊಡ್ಡ ಸ್ವಾಮಿಗೌಡರಿಗೆ ಅಭಿನಂದಿಸುತ್ತಿದ್ದೇವೆ ಎಂದರು.
ಮುಖಂಡರಾದ ಚೆಲುವನಾಯಕ, ವಸಂತನಾಯಕ, ಶಿವಣ್ಣ ನಾಯಕ, ಕೃಷ್ಣನಾಯಕ, ರಾಮನಾಯಕ, ಗುತ್ತಿಗೆದಾರ ಅಶ್ವಥ್, ಒಕ್ಕಲಿಗ ಸಮಾಜದ ಮುಖಂಡ ನವೀನ್, ಚಂದ್ರನಾಯಕ, ಪ್ರಸನ್ನನಾಯಕ, ರವಿ, ಪರಮೇಶ್, ಲೋಕೇಶ್, ಸ್ವಾಮಿನಾಯಕ, ಡೇರಿ ಅಧ್ಯಕ್ಷ ರಾಜ ನಾಯಕ, ಸಿದ್ದಲಿಂಗ ನಾಯಕ, ಬಲರಾಮ್ ಮತ್ತಿತರರಿದ್ದರು.