ಮೈಸೂರು - ಚಾಮರಾಜನಗರ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮಿಗೌಡ ಅವರನ್ನು ಹನಸೋಗೆ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ನವೀನ್, ಕರ್ತಾಳ್ ಮಹದೇವಪ್ಪ, ಮೀನಾಕ್ಷಮ್ಮ, ಎಚ್.ಎಸ್.ಪಾಂಡುರಂಗ ಮತ್ತಿತರರಿದ್ದರು.
ಸಾಲಿಗ್ರಾಮ: ಸಹಕಾರ ಸಂಘಗಳ ಅಭಿವೃದ್ಧಿಗೆ ಸದಸ್ಯರು ಮತ್ತು ಆಡಳಿತ ಮಂಡಳಿ ರಾಜಕೀಯ ಪಕ್ಷಗಳಿಂದ ದೂರವಿದ್ದು, ಸಂಘದ ಅಭಿವೃದ್ಧಿಗೆ ಎಲ್ಲರೊಂದಿಗೆ ಬೆರೆತು ಕೆಲಸ ಮಾಡುವಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮಿಗೌಡ ತಿಳಿಸಿದರು.
ಹನಸೋಗೆ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರಿಂದ ಬುಧವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಸಂಘಗಳಲ್ಲಿ ಯಾವುದೇ ಪಕ್ಷಗಳನ್ನು ಮಾಡದೆ ಎಲ್ಲರೂ ಒಗ್ಗಟ್ಟಿನಿಂದ ಸಂಘದ ಅಭಿವೃದ್ಧಿಗೆ ಸ್ಪಂದಿಸಿ, ಜಿಲ್ಲಾ ಡಿಸಿಸಿ ಬ್ಯಾಂಕ್‌ನಿಂದ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸುವುದರ ಜತೆಗೆ ನಿಮ್ಮೊಂದಿಗೆ ಎಲ್ಲ ರೀತಿಯಲ್ಲೂ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.
ಸಹಕಾರ ಸಂಘದ ನಿರ್ದೇಶಕ ಹನಸೋಗೆ ನವೀನ್ ಮಾತನಾಡಿ, ಸಂಘದಲ್ಲಿ ನೂತನ ಸದಸ್ಯರಿಗೆ ಸಾಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಆಡಳಿತ ಮಂಡಳಿ ಶ್ರಮಿಸಬೇಕಾಗಿದೆ. ಹಾಗಾಗಿ ಜಿಲ್ಲಾ ಡಿಸಿಸಿ ಬ್ಯಾಂಕ್ ವತಿಯಿಂದ ಹೆಚ್ಚಿನ ಸಾಲವನ್ನು ನಮ್ಮ ಸಂಘಕ್ಕೆ ಕೊಡಿಸುವಂತೆ ಮನವಿ ಮಾಡಿದರು.
ನಂತರ ನೂತನ ಅಧ್ಯಕ್ಷ ದೊಡ್ಡ ಸ್ವಾಮಿಗೌಡ ಅವರನ್ನು ನಿರ್ದೇಶಕರು ಅಭಿನಂದಿಸಿದರು. ಹನಸೋಗೆ ಕೃಷಿ ಸಹಕಾರ ಸಂಘದ ಅಧ್ಯಕ್ಷ ಕರ್ತಾಳ್ ಮಹದೇವಪ್ಪ, ಉಪಾಧ್ಯಕ್ಷೆ ಮೀನಾಕ್ಷಮ್ಮ, ನಿರ್ದೇಶಕರಾದ ಎಚ್. ಎಸ್.ಪಾಂಡುರಂಗ, ಅಮ್ಜದ್ ಪಾಷಾ , ಎಚ್.ಪಿ.ಕರಿಗೌಡ, ಎಚ್. ಕೆ.ತಿಮ್ಮೇಗೌಡ, ಎಚ್.ಎನ್.ನವೀನ್, ಎಚ್.ಪಿ.ಮೋಹನ್, ನೀಲಮ್ಮ, ಎಚ್.ಕೆ.ರಾಜಯ್ಯ, ಎಚ್.ಟಿ.ರಾಜೇಗೌಡ, ಎಚ್.ಟಿ. ನಾಗರಾಜನಾಯಕ, ಸಹಕಾರ ಸಂಘದ ಜಿಲ್ಲಾ ಪ್ರತಿನಿಧಿ ದಿನೇಶ್, ಹನಸೋಗೆ ನಾಯಕ ಸಮಾಜದ ಯ.ಚೆಲುವನಾಯಕ, ಕೃಷ್ಣನಾಯಕ, ಚಂದ್ರನಾಯಕ, ಒಲೆ ರಾಮನಾಯಕ, ಸಿದ್ದಲಿಂಗನಾಯಕ , ರಂಜನ್, ಶಶಾಂಕ್ ಹಾಗೂ ಹನಸೋಗೆ ಗ್ರಾಮದ ಮುಖಂಡರು ಹಾಜರಿದ್ದರು.