ರವಿ ಸಂತು ಬಳಗದ ವತಿಯಿಂದ ಕೆ.ಆರ್.ನಗರ ತಾಲೂಕಿನ ಮುದ್ದೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಾಟರ್ ಪ್ಯೂರಿಫೈಯರ್ ವಿತರಿಸಲಾಯಿತು. ರವಿ ಸಂತು, ನವೀನ್, ಸನತ್, ಎಂ.ಪಿ.ನಂಜುಂಡ, ಪ್ರಸಾದ್, ಶಿವಮೂರ್ತಿ, ಎಂ.ಕೆ.ಸಹಾನ, ಪವಿತ್ರಾ, ಅನುಭವ್ಯ, ಶ್ರೀಕಂಠ, ಶ್ರೀನಿವಾಸ್, ಲೋಕೇಶ್, ಕುಮಾರ್, ರವಿ ಹಂಸಲೇಖ, ಅನುಷಾ, ಚಂದನ, ಸುಧಾಕರ್ ಇತರರಿದ್ದರು. 
ಮೈಸೂರು

ಕೋಟ್ಯಂತರ ಜನರ ಮನಸ್ಸು ಗೆದ್ದಿದ್ದ ಎಸ್.ಜಾನಕಿ: ರವಿ ಸಂತು

ಪ್ರಮುಖ ಮುಖ್ಯಾಂಶಗಳು

  • ಗಾಯಕ ರವಿ ಸಂತು ಅಭಿಮಾನದ ನುಡಿ
  • ಗಾನ ಶಾರದೆ ಅಮರ ಸ್ಮರಣೆ ಕಾರ್ಯಕ್ರಮ
  • ಕೆ.ಆರ್.ನಗರ ತಾಲೂಕಿನ ಮುದ್ದೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲ ಸೌಕರ್ಯ ಒದಗಿಸುವ ಕಾರ್ಯಕ್ರಮ
ಗಾಯಕಿ ಎಸ್.ಜಾನಕಿ ಅವರು ಕೇವಲ ಒಬ್ಬ ಗಾಯಕಿಯಲ್ಲ, ಸಂಗೀತದ ಮೂಲಕ ಕೋಟ್ಯಂತರ ಜನರ ಮನಸ್ಸನ್ನು ಗೆದ್ದ ಮಹಾನ್ ವ್ಯಕ್ತಿತ್ವ. ಅವರ ಕಂಠಸಿರಿ ಭಾಷೆ, ಜಾತಿ, ಗಡಿಗಳನ್ನೆಲ್ಲ ಮೀರಿ ಜನರನ್ನು ಒಂದಾಗಿಸಿತು ಎಂದು ಖ್ಯಾತ ಗಾಯಕ ರವಿ ಸಂತು ಹೇಳಿದರು.
ರವಿ ಸಂತು ಬಳಗದ ವತಿಯಿಂದ ಕೆ.ಆರ್.ನಗರ ತಾಲೂಕಿನ ಮುದ್ದೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ‘ಗಾನ ಶಾರದೆ ಎಸ್.ಜಾನಕಿ ಅಮರ ಸ್ಮರಣೆ’ ಹಾಗೂ ಶಾಲೆಗೆ ಮೂಲ ಸೌಕರ್ಯ ಒದಗಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್.ಜಾನಕಿ ಅವರು ಹಾಡಿದ ಪ್ರತಿಯೊಂದು ಹಾಡು ಇಂದಿಗೂ ಹೊಸತನದಿಂದ ಕೇಳಿಸುತ್ತದೆ. ಅವರ ಸರಳತೆ, ಶಿಸ್ತು, ವಿನಯ ನಮ್ಮೆಲ್ಲರಿಗೂ ಆದರ್ಶ. ಅವರ ಸ್ಮರಣೆ ನಮ್ಮನ್ನು ಸದಾ ಸಮಾಜಮುಖಿ ಕಾರ್ಯಗಳಿಗೆ ಪ್ರೇರೇಪಿಸಲಿ ಎಂದರು.
ನಾವು ಕಟ್ಟುವ ದೊಡ್ಡ ಕಟ್ಟಡಗಳಿಗಿಂತ, ಒಬ್ಬ ಮಗುವಿನ ಭವಿಷ್ಯ ಕಟ್ಟುವುದು ದೊಡ್ಡ ಕೆಲಸ. ಸರ್ಕಾರಿ ಶಾಲೆಗಳು ಬಲಿಷ್ಠವಾದರೆ ದೇಶದ ಭವಿಷ್ಯ ಬಲಿಷ್ಠವಾಗುತ್ತದೆ. ಗ್ರಾಮೀಣ ಭಾಗದ ಸಾವಿರಾರು ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ಓದಿ ಇಂದು ವೈದ್ಯರು, ಇಂಜಿನಿಯರ್, ವಿಜ್ಞಾನಿ, ಅಧಿಕಾರಿಗಳಾಗಿದ್ದಾರೆ. ಆದ್ದರಿಂದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯೂ ಆಗಿದೆ ಎಂದರು.
ಎಲ್ಲರೂ ಸಾಧ್ಯವಾದಷ್ಟು ಕುಡಿಯುವ ನೀರು, ಶೌಚಾಗೃಹ, ಪೀಠೋಪಕರಣ, ಗ್ರಂಥಾಲಯ, ಕ್ರೀಡಾ ಸಾಮಗ್ರಿ, ಡಿಜಿಟಲ್ ಶಿಕ್ಷಣ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಪ್ರತಿಯೊಬ್ಬರೂ ವರ್ಷಕ್ಕೊಂದು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಸಣ್ಣ ಸಹಾಯ ಮಾಡಿದರೂ ದೊಡ್ಡ ಬದಲಾವಣೆ ಸಾಧ್ಯ ಎಂದರು.
ನಮ್ಮ ರವಿ ಸಂತು ಬಳಗ ಇದೇ ಉದ್ದೇಶದಿಂದ ನಿರಂತರವಾಗಿ ಈ ಕೆಲಸ ಮಾಡುತ್ತಿದೆ. ಇಂದು 69ನೇ ಶಾಲೆಗೆ ಸೇವೆ ಸಲ್ಲಿಸಿದ್ದೇವೆ. ಇದು ಅಂತ್ಯವಲ್ಲ, ಆರಂಭ. ನೂರಾರು ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗುವವರೆಗೂ ನಮ್ಮ ಸೇವೆ ನಿರಂತರವಾಗಿರುತ್ತದೆ ಎಂದರು.
ರವಿ ಸಂತು ಬಳಗದ ವತಿಯಿಂದ ಕೆ.ಆರ್.ನಗರ ತಾಲೂಕಿನ ಮುದ್ದೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನವೀನ್ ಅವರನ್ನು ಅಭಿನಂದಿಸಲಾಯಿತು. ರವಿ ಸಂತು, ಸನತ್, ಎಂ.ಪಿ.ನಂಜುಂಡ, ಪ್ರಸಾದ್, ಶಿವಮೂರ್ತಿ, ಎಂ.ಕೆ.ಸಹಾನಾ, ಪವಿತ್ರಾ, ಅನುಭವ್ಯಾ, ಶ್ರೀಕಂಠ, ಶ್ರೀನಿವಾಸ್, ಲೋಕೇಶ್, ಕುಮಾರ್, ರವಿ ಹಂಸಲೇಖ, ಅನುಷಾ, ಚಂದನಾ, ಸುಧಾಕರ್ ಇತರರಿದ್ದರು.
ಇದೇ ವೇಳೆ ಎಸ್.ಜಾನಕಿ ಅವರ ಆಪ್ತ ಅಭಿಮಾನಿ ನವೀನ್ ಅವರನ್ನು ಗೌರವಿಸಲಾಯಿತು. ರವಿ ಸಂತು ಬಳಗದ ವತಿಯಿಂದ ಶಾಲೆಗೆ ವಾಟರ್ ಪ್ಯೂರಿಫೈಯರ್, ಕ್ರೀಡಾ ಸಾಮಾಗ್ರಿ, ಪುಸ್ತಕ, ನೋಟ್‌ಬುಕ್ಸ್ ಸೇರಿ ಇತರೆ ವಸ್ತುಗಳನ್ನು ವಿತರಿಸಲಾಯಿತು. ದುಬೈಯಿಂದ ಆಗಮಿಸಿದಂತ ಸನತ್, ಮುಖ್ಯ ಶಿಕ್ಷಕ ಎಂ.ಪಿ.ನಂಜುಂಡ, ಶಿಕ್ಷಕರಾದ ಪ್ರಸಾದ್, ಶಿವಮೂರ್ತಿ, ಎಂ.ಕೆ.ಸಹಾನ, ಪವಿತ್ರಾ, ಬಳಗ ಸದಸ್ಯರಾದ ಅನುಭವ್ಯ, ಶ್ರೀಕಂಠ, ಶ್ರೀನಿವಾಸ್, ಲೋಕೇಶ್, ಕುಮಾರ್, ರವಿ ಹಂಸಲೇಖ, ಅನುಷಾ, ಚಂದನ, ಸುಧಾಕರ್ ಇತರರಿದ್ದರು.