ರೈತ ಎ.ಎಸ್ ಮೋಹನ್ 
ಮೈಸೂರು

ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಎ. ಆರ್. ರಘುರಾಮ
ಬೆಟ್ಟದಪುರ: ಬೆಟ್ಟದಪುರ ಸಮೀಪದ ಅಡುಗೂರು ಗ್ರಾಮದ ರೈತ ಎ.ಎಸ್ ಮೋಹನ್ (60) ಸಾಲ ಬಾಧೆಗೆ ಹೆದರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರಿಗಿದ್ದ ಎರಡು ಎಕರೆ ಜಮೀನಿನಲ್ಲಿ ತಂಬಾಕು, ಶುಂಠಿ ಬೆಳೆಯನ್ನು ಬೆಳೆಯಲೆಂದು, ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಣಗಾಲು ಶಾಖೆಯಲ್ಲಿ ನಾಲ್ಕು ಲಕ್ಷ ರೂ ಹಾಗೂ ವಿವಿಧ ಸಂಘ ಸಂಸ್ಥೆ ಮತ್ತು ಕೈ ಸಾಲವಾಗಿ ಆರು ಲಕ್ಷ ರೂ ಸಾಲ ಮಾಡಿದರು. ತಂಬಾಕು ದರ ಕುಸಿತ ಹಿನ್ನೆಲೆ, ಬೆಳೆ ಸರಿಯಾಗಿ ಬಾರದಿರುವುದರಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಮಗ ಧನಂಜಯ್ ಬುಧವಾರ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.