ಹುಣಸೂರು ತಾಲೂಕು ರಂಗಯ್ಯನಕೊಪ್ಪಲು ಗ್ರಾಮದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ರೈತಸಂಘದ ರಾಜ್ಯಾಧ್ಯಕ್ಷ ಬಡಲಾಪುರ ನಾಗೇಂದ್ರ ಮಾತನಾಡಿದರು. ಹೊಸೂರು ಕುಮಾರ್, ಕುಮಾರ್, ಅಗ್ರಹಾರ ರಾಮೇಗೌಡ, ಮಹದೇವ ಇತರರಿದ್ದರು.  
ಮೈಸೂರು

ಒಂದಿಂಚು ಭೂಮಿಯನ್ನೂ ಕಳೆದುಕೊಳ್ಳಬೇಡಿ

ಎ. ಆರ್. ರಘುರಾಮ

ಭೂಮಿ ಅತಿಕ್ರಮನ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ರೈತರು ಒಂದಿಂಚು ಭೂಮಿಯನ್ನೂ ಕಳೆದುಕೊಳ್ಳಬಾರದೆಂದು ರೈತಸಂಘದ ಅಧ್ಯಕ್ಷ ಬಡಗಲ ಪುರ ನಾಗೇಂದ್ರ ಹೇಳಿದರು.

ತಾಲೂಕಿನ ರಂಗಯ್ಯನಕೊಪ್ಪಲು ಗ್ರಾಮದಲ್ಲಿ ಮಂಗಳವಾರ ರೈತಸಂಘದ ಗ್ರಾಮಶಾಖೆ ಉದ್ಘಾಟಿಸಿ ಮಾತನಾಡಿದರು.

ಭೂಮಿ ಎಂಬುದು ರೈತ ಸಮೂಹದ ಅಸ್ಮಿತೆಯಾಗಿದೆ. ವರ್ತಮಾನದಲ್ಲಿ ಭೂ ಹಗರಣಗಳು ಮಿತಿ ಮೀರಿವೆ. ಇವುಗಳ ವಿರುದ್ಧ ನೈತಿಕ ನೆಲೆಗಟ್ಟಿನಲ್ಲಿ ಚಳವಳಿಗಳನ್ನು ನಡೆಸಬೇಕಾಗಿದೆ ಎಂದರು.

ನೀಟ್ ಹಗರಣದ ವಿರುದ್ಧ ಯುವಜನರು ಚಳವಳಿ ನಡೆಸಿ ಯಶಸ್ವಿಯಾಗಿದ್ದಾರೆ. ರೈತರೂ ಒಗ್ಗಟ್ಟಾಗಿ ಹೋರಾಟ ನಡೆಸುವ ಕಾಲ ಈಗ ಎದುರಾಗಿದೆ ಎಂದರು.
ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ರೈತ ಸಂಘದ ಸಂಕೇತವಾದ ಹಸಿರು ಟವಲ್ ದುರುಪಯೋಗವಾಗಬಾರದು ಎಂದರು. ತ್ಯಾಗಮ ಬಲಿದಾನದಿಂದ ರೈತ ಚಳವಳಿ ಹುಟ್ಟಿ ಬೆಳೆದಿದೆ. ಇದನ್ನು ಅರಿತು ಸಂಘಟನೆ ಬಲಪಡಿಸಬೇಕು ಎಂದರು.
ವಿದ್ಯುತ್ ಖಾಸಗೀಕರಣದ ವಿರುದ್ಧ ರಾಜ್ಯಾದ್ಯಂತ ರೈತರು ಮತ್ತು ಕಾರ್ಮಿಕರು ಒಗ್ಗಟ್ಟಾಗಿ ಹೋರಾಟ ಮಾಡಿದ್ದರಿಂದ ಖಾಸಗಿ ಕಂಪನಿ ತನ್ನ ಬೇಡಿಕೆ ಅರ್ಜಿಯನ್ನು ಹಿಂದಕ್ಕೆ
ಪಡೆಯಿತು. ಖಾಸಗೀಕರಣದ ವಿರುದ್ಧ ರೈತರು ಹೋರಾಟ ಮುಂದುವರಿಸ ಬೇಕು ಎಂದರು.
ರೈತ ಸಂಘದ ಮಹಿಳಾ ಪ್ರಧಾನ ಕಾರ್ಯದರ್ಶಿ ನೇತ್ರಾವತಿ ಮಾತನಾಡಿದರು. ಜಿಲ್ಲಾ ಖಜಾಂಚಿ ಈಶ್ವರ್, ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಉಂಡವಾಡಿ ಚಂದ್ರೇಗೌಡ,
ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಕೆ.ಆರ್ ನಗರ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವೀಣಾ, ಹುಣಸೂರು ತಾಲೂಕು ಉಪಾಧ್ಯಕ್ಷ ಪೈಲ್ವಾನ್ ಸ್ವಾಮಿ ನಾಯಕ, ಮುಖಂಡರಾದ ಬೆಂಕಿಪುರ ಸಿದ್ದನಾಯ್ಕ, ರಾಮೇನಹಳ್ಳಿ ದೇವರಾಜ ನಾಯಕ ಉಪಸ್ಥಿತರಿದ್ದರು.
ಅಧ್ಯಕ್ಷರಾಗಿ ಕುಮಾರ್ ಆಯ್ಕೆ:
ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷರಾಗಿ ಕುಮಾರ್, ಗೌರವಾಧ್ಯಕ್ಷರಾಗಿ ಆರ್.ಎಸ್.ರೇವಣ್ಣ, ಉಪಾಧ್ಯಕ್ಷರಾಗಿ ಆರ್.ಎಸ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಮಹದೇವ್, ಕಾರ್ಯದರ್ಶಿ ಯಾಗಿ ದೊರೆಸ್ವಾಮಿ, ಸಂಘಟನಾ ಕಾರ್ಯದರ್ಶಿಯಾಗಿ ಉದಯ, ಖಜಾಂಚಿಯಾಗಿ ಭಾಸ್ಕರ್ ಆಯ್ಕೆಯಾದರು.