ಬೈಲುಕುಪ್ಪೆ ಗ್ರಾಮದಲ್ಲಿ ಗಣಪತಿ ದೇವಸ್ಥಾನದದ 16ನೇ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಪೂಜೆ, ರಾಜಬೀದಿ ಉತ್ಸವ ನೆರವೇರಿತು. ನೂರಾರು ಭಕ್ತರು ಮತ್ತು ಟ್ರಸ್ಟ್ ಪದಾಧಿಕಾರಿಗಳು ಭಾಗವಹಿಸಿದ್ದರು.
ಬೈಲುಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯ ಬಿ.ಎಂ. ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ 16ನೇ ವಾರ್ಷಿಕೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಉತ್ಸವದ ಅಂಗವಾಗಿ ದೇವಾಲಯವನ್ನು ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಅರ್ಚಕರಾದ ಗಣಪತಿ ಭಟ್ಟ, ಉಮೇಶ್ ಭಟ್ಟರ ತಂಡದಿಂದ ಮುಂಜಾನೆಯಿಂದಲೇ ನಾರಿಕೇಳ ಹೋಮ, ಗಣಪತಿ ಮೂಲ ವೃದ್ಧಿ ಹೋಮ, ಗೋಪುರ ಕಳಸಕ್ಕೆ ಅಭಿಷೇಕ ಸೇರಿದಂತೆ ವಿವಿಧ ಪೂಜಾದಿಗಳನ್ನು ನೆರವೇರಿಸಿ ಮಹಾಮಂಗಳಾರತಿ ಮಾಡಲಾಯಿತು. ನೂರಾರು ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಣಪತಿ ದೇವರ ಉತ್ಸವ ಮೂರ್ತಿಯ ಮೆರವಣಿಗೆ ನೆರವೇರಿತು. ಅಲಂಕೃತ ಮಂಟಪದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಿ
ವಾದ್ಯಗೋಷ್ಠಿಯೊಂದಿಗೆ ನಡೆದ ರಾಜಬೀದಿ ಉತ್ಸವ ಗಮನ ಸೆಳೆಯಿತು. ಡಿ.ಜೆ. ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿದರು. ಬಾಣ ಬಿರುಸು ಪ್ರದರ್ಶನ ಆಕರ್ಷಕವಾಗಿತ್ತು. ನೂರಾರು ಭಕ್ತರು ಮತ್ತು ಟ್ರಸ್ಟ್ ಪದಾಧಿಕಾರಿಗಳು ಭಾಗವಹಿಸಿದ್ದರು.