ತಿ.ನರಸೀಪುರ ತಾಲೂಕಿನ ಮುಡುಕುತೊರೆಯಲ್ಲಿರುವ ಯಾತ್ರಿ ಭವನದಲ್ಲಿ ತಲಕಾಡು ಶ್ರೀ ವೈದ್ಯನಾಥೇಶ್ವರ ಸ್ವಾಮಿ ಹಾಗೂ ಸಮೂಹ ದೇವಾಲಯಗಳ ಹುಂಡಿಗಳ ಹಣದ ಎಣಿಕೆ ಕಾರ್ಯ ನಡೆಯಿತು. ಗೀತಾ, ಈ. ಕುಮಾರ್, ಎಸ್.ಎಂ.ವೆಂಕಟೇಶ್ ಪ್ರಸಾದ್ ಇತರರು ಇದ್ದರು.
- ತಲಕಾಡು ಶ್ರೀ ವೈದ್ಯನಾಥೇಶ್ವರ ಸ್ವಾಮಿ ಹಾಗೂ ಸಮೂಹ ದೇವಾಲಯ
ತಿ.ನರಸೀಪುರ: ತಾಲೂಕಿನ ಮುಡುಕುತೊರೆ ಯಾತ್ರಿ ಭವನದಲ್ಲಿ ಮಂಗಳವಾರ ನಡೆದ ತಲಕಾಡು ಶ್ರೀ ವೈದ್ಯನಾಥೇಶ್ವರ ಸ್ವಾಮಿ ಹಾಗೂ ಸಮೂಹ ದೇವಾಲಯಗಳ ಹುಂಡಿಗಳ ಹಣ ಎಣಿಕೆಯಲ್ಲಿ 33,23,790 ರೂ. ಸಂಗ್ರಹವಾಗಿದೆ.
ಶ್ರೀ ಭ್ರಮರಾಂಬ ಸಮೇತ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯ ಸೇರಿದಂತೆ ತಲಕಾಡು ಶ್ರೀ ವೈದ್ಯನಾಥೇಶ್ವರ ಸ್ವಾಮಿ ಹಾಗೂ ಇನ್ನಿತರ ದೇವಾಲಯಗಳ ಹುಂಡಿಗಳನ್ನು ಎಣಿಕೆ ಮಾಡಲಾಯಿತು. 2025ರ ಆಗಸ್ಟ್ ನಿಂದ ಡಿಸೆಂಬರ್ ವರೆಗೆ ಹುಂಡಿಗಳಲ್ಲಿ ಒಟ್ಟು 33,23,790 ರೂ. ಹಣ ಸಂಗ್ರಹವಾಗಿತ್ತು.
ಮುಜರಾಯಿ ತಹಸೀಲ್ದಾರ್ ಗೀತಾ ನೇತೃತ್ವದಲ್ಲಿ ನಡೆದ ಎಣಿಕಾ ಕಾರ್ಯದಲ್ಲಿ ಉಪ ತಹಸೀಲ್ದಾರ್ ಈ.ಕುಮಾರ್, ಸಮೂಹ ದೇವಾಲಯಗಳ ಕಾರ್ಯನಿರ್ವಾಹಕ ಎಸ್.ಎಂ. ವೆಂಕಟೇಶ್ ಪ್ರಸಾದ್, ರಾಜಸ್ವ ನಿರೀಕ್ಷಕ ಅನಿಲ್, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಆರ್.ಮಾದೇಶ, ಬುಲೆಟ್ ಶ್ರೀನಿವಾಸ ಸೇರಿದಂತೆ ಗ್ರಾಮಲೆಕ್ಕಿಗರು, ಮುಜರಾಯಿ ಇಲಾಖೆಯ ಸಿಬ್ಬಂದಿ ಹಾಗೂ ಕೋಟಕ್ ಮಹೀಂದ್ರ ಬ್ಯಾಂಕ್ ಸಿಬ್ಬಂದಿ ಕಾರ್ಯ ನಿರ್ವಹಿಸಿದರು.