ಕ್ರೈಮ್  
ಮೈಸೂರು

3.29 ಕೋಟಿ ರೂ. ವಂಚನೆ ದೂರು

ಆರ್.ಕೃಷ್ಣ

ಪ್ರಮುಖ ಮುಖ್ಯಾಂಶಗಳು

  • ಉದ್ಯಮಿಗೆ ವಂಚನೆ ದೂರು
  • ಸಕ್ಕರೆ ಪೂರೈಸುವುದಾಗಿ ಮೋಸ
ಮೈಸೂರು: ಕಡಿಮೆ ಬೆಲೆಗೆ 25 ಸಾವಿರ ಮೆಟ್ರಿಕ್ ಟನ್ ಸಕ್ಕರೆ ಪೂರೈಸುವುದಾಗಿ ನಂಬಿಸಿ ಉದ್ಯಮಿಯೊಬ್ಬರು 3.29 ಕೋಟಿ ರೂ. ವಂಚಿಸಿದ್ದಾರೆ ಎಂದು ವಂಚನೆಗೆ ಒಳಗಾದವರು ಪೊಲೀಸರಿಗೆ ದೂರು ನೀಡಿದ್ದಾರೆ.
 ನಗರದ ಡಿ.ಸುಬ್ಬಯ್ಯ ರಸ್ತೆಯ ಟಿಆರ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ವಿನಯ್ ವಿರುದ್ಧ ಛತ್ತೀಸ್‌ಗಢದ ರಾಯ್ಪುರದ ಉದ್ಯಮಿ ಅಮಿತ್ ಕುಮಾರ್ ರಕೇಚಾ ಅವರು ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 
ವಿನಯ್ ಅವರು 2023ರಲ್ಲಿ ಸಕ್ಕರೆ ಪೂರೈಕೆ ಮಾಡುವುದಾಗಿ 3.29 ಕೋಟಿ ರೂ. ಪಡೆದಿದ್ದು, ಒಪ್ಪಂದ ಮಾಡಿಕೊಂಡಿದ್ದರೆನ್ನಲಾಗಿದೆ. ಆದರೆ ಇದುವರೆಗೂ ಸಕ್ಕರೆ ಪೂರೈಕೆ ಮಾಡಿಲ್ಲ ಅಥವಾ ಹಣವನ್ನೂ ವಾಪಸ್ ಕೊಟ್ಟಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.