ತಿ.ನರಸೀಪುರದ ಸಾಮಾಜಿಕ ಅರಣ್ಯ ವಲಯದ ಆರ್‌ಎಫ್‌ಒ ಕಾಂತರಾಜ್ 
ಮೈಸೂರು

ಆರ್‌ಎಫ್‌ಒ ಅನುಮಾನಾಸ್ಪದ ಸಾವು

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಗ್ರಾಮಾಂತರ ಬಸ್ ನಿಲ್ದಾಣದ ಸಮೀಪ ಶವ ಪತ್ತೆ
  • ತಿ.ನರಸೀಪುರದ ಸಾಮಾಜಿಕ ಅರಣ್ಯ ವಲಯದ ಆರ್‌ಎಫ್‌ಒ, ವಿಜಯಪುರದ ಇಂಡಿ ಮೂಲದ ಕಾಂತರಾಜ್ ಚೌಹಾಣ್ (32) ಮೃತರು.
  • ಮೃತದೇಹದ ಮೂಗಿನಲ್ಲಿ ರಕ್ತ ಕಂಡುಬಂದಿದೆ. ಉಳಿದಂತೆ ಯಾವುದೇ ಗಾಯಗಳು ಪತ್ತೆಯಾಗಿಲ್ಲ.
ಮೈಸೂರು: ನಗರದ ಗ್ರಾಮಾಂತರ ಬಸ್ ನಿಲ್ದಾಣದ ಸಮೀಪದಲ್ಲಿರುವ ಲಾಡ್ಜ್‌ನ ಹಿಂಭಾಗದ ಕಾರಿಡಾರ್‌ನಲ್ಲಿ ಆರ್‌ಎಫ್‌ಒ ಮೃತದೇಹ ಪತ್ತೆಯಾಗಿದೆ.
ತಿ.ನರಸೀಪುರದ ಸಾಮಾಜಿಕ ಅರಣ್ಯ ವಲಯದ ಆರ್‌ಎಫ್‌ಒ, ವಿಜಯಪುರದ ಇಂಡಿ ಮೂಲದ ಕಾಂತರಾಜ್ ಚೌಹಾಣ್ (32) ಮೃತರು.
ಇವರು 15 ದಿನಗಳ ಹಿಂದೆ ತಿ.ನರಸೀಪುರಕ್ಕೆ ವರ್ಗಾವಣೆಗೊಂಡಿದ್ದರು. ಲಷ್ಕರ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
ಗಂಗಾವತಿ ಮೂಲದ ಮಲ್ಲನಗೌಡ ಪಾಟೀಲ್ ಅವರು ನಗರದ ಲಾಡ್ಜ್ ಒಂದರಲ್ಲಿ ಕೊಠಡಿ ಬಾಡಿಗೆಗೆ ಪಡೆದಿದ್ದರು. ಅಲ್ಲಿಗೆ ಕಾಂತರಾಜ್ ಸಹ ಬಂದಿದ್ದಾರೆ. ರಾತ್ರಿ ಪಾನಮತ್ತರಾದ ಬಳಿಕ ಕೊಠಡಿಯಲ್ಲಿ ಗಲೀಜು ಮಾಡಿದ್ದಾರೆ ಎಂಬ ಕಾರಣಕ್ಕೆ ಲಾಡ್ಜ್‌ನ ಸಿಬ್ಬಂದಿ, ತಡರಾತ್ರಿ 2.30ಕ್ಕೆ ಎಲ್ಲರನ್ನೂ ತೆರಳುವಂತೆ ತಿಳಿಸಿದ್ದಾರೆ. ಬೆಳಗ್ಗೆ ಕಾಂತರಾಜ್ ಮೃತದೇಹ ಪತ್ತೆಯಾಗಿದೆ.
ಮೃತದೇಹದ ಮೂಗಿನಲ್ಲಿ ರಕ್ತ ಕಂಡುಬಂದಿದೆ. ಉಳಿದಂತೆ ಯಾವುದೇ ಗಾಯಗಳು ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.