ನಗರದ ರೆಸಾರ್ಟ್‌ವೊಂದರ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಮತ್ತು ನಕಲಿ ಇ ಮೇಲ್ ಐಡಿ ಕ್ರಿಯೆಟ್ ಮಾಡಿ ಹಲವು ಗ್ರಾಹಕರಿಂದ 6 ಲಕ್ಷ ರೂ.ಪಾವತಿಸಿಕೊಂಡು ವಂಚಿಸಿರುವ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದರಿ ರೆಸಾರ್ಟ್ ಉದ್ಯೋಗಿ ನೀಡಿದ ದೂರಿನನ್ವಯ ಮಾರ್ಚ್ 27ರಂದು ಎಫ್‌ಐಆರ್ ದಾಖಲಾಗಿದೆ. ನಮ್ಮ ರೆಸಾರ್ಟ್‌ನ ಅಧಿಕೃತ ವೆಬ್‌ಸೈಟ್ ಬದಲಿಗೆ ನಕಲಿ ವೆಬ್‌ಸೈಟ್, ಇ-ಮೇಲ್ ಐಡಿ ಕ್ರಿಯೆಟ್ ಮಾಡಿಕೊಂಡು ಹಲವು ಮೊಬೈಲ್ ನಂಬರ್‌ಗಳನ್ನು ಬಳಸಿಕೊಂಡು ಗ್ರಾಹಕರನ್ನು ವಂಚಿಸಿದ್ದಾರೆ. ಗ್ರಾಹಕರಿಂದ ಬುಕ್ಕಿಂಗ್ ಮಾಡಿಸಿಕೊಂಡು ಅಂದಾಜು 6 ಲಕ್ಷ ರೂ.ಪಾವತಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.