ಮೈಸೂರು-ಚಾಮರಾಜನಗರ ರೈಲು ಮಾರ್ಗ ಕೋಣನೂರಿನ ಬಳಿ ರೈಲ್ವೆ ಗೇಟ್‌ನಲ್ಲಿ ಸಿಗ್ನಲ್ ಲೈಟ್ ಅಳವಡಿಸುವಂತೆ ಭಾರತೀಯ ತೆಂಗುಬೆಳೆಗಾರರ ಒಕ್ಕೂಟ ಮತ್ತು ಕರ್ನಾಟಕ ರಾಜ್ಯತೆಂಗು ಬೆಳೆಗಾರರ ಸಂಘದಿಂದ ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಜಿ.ಕಾಶಿವಿಶ್ವನಾಥ್, ಕೆ.ಜಿ.ನಾಗಣ್ಣ, ಸೋಮೇಶ್ವರಪುರ ಎಸ್.ಎನ್.ಗುರುಸ್ವಾಮಿ, ಕೆ.ಸಿ.ಶಿವಕುಮಾರ್, ಕೆ.ಎನ್.ಮಹೇಶ್ ಇದ್ದರು. 
ಮೈಸೂರು

ರೈಲ್ವೆ ಗೇಟ್‌ನಲ್ಲಿ ಸಿಗ್ನಲ್ ಲೈಟ್ ಅಳವಡಿಸುವಂತೆ ಮನವಿ

ಆರ್.ಕೃಷ್ಣ

ಪ್ರಮುಖ ಮುಖ್ಯಾಂಶಗಳು

  • ಸಿಗ್ನಲ್ ಲೈಟ್ ಇಲ್ಲದ ಕಾರಣ ವಾಹನಗಳು, ಜನರಿಗೆ ತೊಂದರೆ ಆಗುತ್ತಿದೆ
  • ಕೋಣನೂರು ರೈಲ್ಚೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮೂಲಸೌಲಭ್ಯ ಒದಗಿಸಬೇಕು
ಮೈಸೂರು:ಮೈಸೂರು-ಚಾಮರಾಜನಗರ ರೈಲು ಮಾರ್ಗ ಕೋಣನೂರಿನ ಬಳಿ ರೈಲ್ವೆ ಗೇಟ್‌ನಲ್ಲಿ ಸಿಗ್ನಲ್ ಲೈಟ್ ಅಳವಡಿಸುವಂತೆ ಭಾರತೀಯ ತೆಂಗು ಬೆಳೆಗಾರರ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ತೆಂಗು ಬೆಳೆಗಾರರ ಸಂಘದಿಂದ ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಿಗ್ನಲ್ ಲೈಟ್ ಇಲ್ಲದ ಕಾರಣ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು, ಜನರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ತಕ್ಷಣ ಸಿಗ್ನಲ್ ಲೈಟ್ ಅಳವಡಿಸಬೇಕು. ಕೋಣನೂರು ನಿಲ್ದಾಣದಲ್ಲಿ ಪ್ರಯಾಣಿಕರ ತಂಗುದಾಣ, ಕುಡಿಯುವ ನೀರು, ಶೌಚಗೃಹ ಸೇರಿದಂತೆ ಮೂಲಸೌಲಭ್ಯ ಒದಗಿಸಬೇಕು ಎಂದು ಕೋರಿದರು.
ಸಂಘದ ಅಧ್ಯಕ್ಷ ಜಿ.ಕಾಶಿ ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಕೆ.ಜಿ.ನಾಗಣ್ಣ, ರಾಜ್ಯ ಉಪಾಧ್ಯಕ್ಷ ಸೋಮೇಶ್ವರಪುರ ಎಸ್.ಎನ್.ಗುರುಸ್ವಾಮಿ, ಮುಖಂಡರಾದ ಕೆ.ಸಿ.ಶಿವಕುಮಾರ್, ಕೆ.ಎನ್.ಮಹೇಶ್, ಕೆ.ಎಸ್.ನವೀನ, ಸುತ್ತೂರು ಸಿದ್ದರಾಜು ಇತರರು ಇದ್ದರು.