ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಎಸ್.ಬಸವರಾಜು, ಸಾಗರ್, ಪುರುಷೋತ್ತಮ್ ಇತರರು ಇದ್ದರು. 
ಮೈಸೂರು

ಬಸವಮಾರ್ಗ ಸಂಸ್ಥೆಯಲ್ಲಿ ಮೇಳೈಸಿದ ಧಾರ್ಮಿಕ ಕೈಂಕರ್ಯ

ಪ್ರಮುಖ ಮುಖ್ಯಾಂಶಗಳು

  • ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆ
  • ಇಷ್ಟಾರ್ಥ ಸಿದ್ಧಗಾಗಿ ಪ್ರಾರ್ಥನೆ
ಮೈಸೂರು:ಹುಣ್ಣಿಮೆ ಹಿನ್ನೆಲೆಯಲ್ಲಿ ನಗರದ ಹೆಬ್ಬಾಳದಲ್ಲಿರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಿಂದ ವಿಶೇಷ ಧಾರ್ಮಿಕ ಪೂಜೆ, ದಾಸೋಹ ಆಯೋಜಿಸಲಾಗಿತ್ತು.
ಶಿಬಿರಾರ್ಥಿಗಳು, ಅವರ ಕುಟುಂಬ ವರ್ಗ ಹಾಗೂ ಲೋಕ ಕಲ್ಯಾಣಾರ್ಥವಾಗಿ ಸಂಸ್ಥೆಯ ಆವರಣದಲ್ಲಿ ಶಿವ, ಬಸವ ಹಾಗೂ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ವಿಶೇಷ ಕೈಂಕರ್ಯ ನಡೆಸಲಾಯಿತು.
ಗಣಪತಿ ಪೂಜೆ, ಮಹಾ ಮೃತ್ಯುಂಜಯ ಪೂಜೆ, ಧನ್ವಂತರಿ ಪೂಜೆ, ನವಗ್ರಹ ಪೂಜೆ, ಶಿವ ಅಷ್ಟೋತ್ತರ ಪೂಜೆ, ಲಕ್ಷ್ಮೀ ಪೂಜೆ, ಶಾರದಾ ಪೂಜೆ, ದುರ್ಗಾಪೂಜೆ ಸೇರಿದಂತೆ ಇಷ್ಟಾರ್ಥ ಸಿದ್ಧಿಗಾಗಿ ಮಹಾ ಪೂಜೆಗಳನ್ನು ಪುರೋಹಿತರಾದ ಸಾಗರ್ ಶರ್ಮ ಮತ್ತು ಪುರುಷೋತ್ತಮ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಾವಿರಾರು ಜನರಿಗೆ ಅನ್ನ ದಾಸೋಹ ನೆರವೇರಿಸಲಾಯಿತು. ಬಸವಮಾರ್ಗ ಸಂಸ್ಥೆಯಿಂದ ಚಿಕಿತ್ಸೆ ಪಡೆದು ಉತ್ತಮ ಜೀವನ ನಡೆಸುತ್ತಿರುವ ಶಿಬಿರಾರ್ಥಿಗಳು ಮತ್ತು ಅವರ ಕುಟುಂಬಸ್ಥರು ಈ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
ಬಸವಮಾರ್ಗ ಸಂಸ್ಥೆಯ ಅಧ್ಯಕ್ಷ ಎಸ್. ಬಸವರಾಜು, ಸಂಸ್ಥೆಯ ವ್ಯವಸ್ಥಾಪಕ ಮಹೇಶ್, ಸಿಬ್ಬಂದಿ ರಾಕೇಶ್, ಮಂಜುನಾಥ್, ಮಧು, ರಾಘವೇಂದ್ರ, ಅಭಿಷೇಕ್, ಶ್ರೀಧರ್, ಸಂಜಯ್, ಗಗನ್, ನಿಶ್ಚಿತಾ, ಉಷಾರಾಣಿ, ಮೋನಿಷಾ, ಅರ್ಚಿತ್ ರಾಮ್, ಮನೋಜ್, ವಸಂತ್, ನೇತ್ರಾವತಿ, ನಂದೀಶ್, ಬಸವರಾಜು, ಗೋವಿಂದ್, ಆಕಾಶ್, ಪವನ್, ಮಲ್ಲಿಕಾರ್ಜಿನ್, ಅಭಿ, ಗಗನ್, ಪ್ರಜ್ವಲ್, ರಾಜು ಇತರರು ಇದ್ದರು.