ಮೈಸೂರು: ಕುಕ್ಕರಹಳ್ಳಿ ಬಳಿಯ ತನುಮನ ಸಂಸ್ಥೆ ವತಿಯಿಂದ ಮಾರ್ಚ್ 21ರಿಂದ ಏ.10ರವರೆಗೆ ಬುದ್ಧ, ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತ ಹಾಡುಗಳ ಉಚಿತ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ನಿರ್ದೇಶಕ ಲಕ್ಷ್ಮೀರಾಮ್ ತಿಳಿಸಿದರು.
ಬಾಬಾ ಸಾಹೇಬರ 135ನೇ ಜಯಂತಿ ಪ್ರಯುಕ್ತ ಆಸಕ್ತಿ ಇರುವವರಿಗೆ ಉಚಿತವಾಗಿ 20 ದಿನಗಳ ಕಾಲ ವಿವಿಧ ಕವಿಗಳು ರಚಿಸಿರುವ ಬುದ್ಧ, ಅಂಬೇಡ್ಕರ್ ಕುರಿತ ಹಾಡುಗಳನ್ನು ಕಲಾಮಂದಿರದ ಆವರಣದ ಚಿಂತನ ಚಾವಡಿಯಲ್ಲಿ ಕಲಿಸಲಾಗುವುದು. ಪ್ರತಿದಿನ ಸಂಜೆ 4 ರಿಂದ 6.30ರವರೆಗೆ ಶಿಬಿರ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.