ಕೆ.ಆರ್.ನಗರದ ರೋಟರಿ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಜಿ.ಶೇಷಾದ್ರಿ, ಸಿ.ಇ.ತ್ರಿವೇಣಿ ಅವರನ್ನು ಸನ್ಮಾನಿಸಲಾಯಿತು. ಡಿಂಡಿಮ ಶಂಕರ್, ಸಿ.ಆರ್.ಉದಯಕುಮಾರ್, ಭಾಸ್ಕರ್, ಟಿ.ಎನ್.ದಯಾನಂದ್, ಹೆಗ್ಗಂದೂರು ಪ್ರಭಾಕರ್ ಇದ್ದರು. 
ಮೈಸೂರು

ಸರಳ ವಿವಾಹಕ್ಕೆ ಬುನಾದಿ ಹಾಕಿದ ಕುವೆಂಪು

ಕೆ.ಆರ್.ನಗರ: ರಾಷ್ಟ್ರಕವಿ ಕುವೆಂಪು ಅವರು ಕೇವಲ ಒಬ್ಬ ವ್ಯಕ್ತಿಯಾಗಿರದೆ ತಮ್ಮ ಸಾಧನೆಗಳ ಮೂಲಕ ಇಡೀ ನಾಡು ಮೆಚ್ಚಿದ ಶಕ್ತಿಯಾಗಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿಂಡಿಮ ಶಂಕರ್ ಹೇಳಿದರು.
ಪಟ್ಟಣದ ರೋಟರಿ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ಅಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಅವರ 122ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುಗದ, ಜಗದ ಕವಿಯಾಗಿ, ರಾಷ್ಟ್ರಕವಿಯಾಗಿ ವಿಶ್ವಮಾನವ ಸಂದೇಶ ಸಾರಿದ ಸಂತರಾಗಿದ್ದಾರೆೆ. ಇಡೀ ಜಗತ್ತಿಗೆ ಸರ್ವಜನಾಂಗದ ಶಾಂತಿಯ ತೋಟ ಎಂದು ಸಾರಿದ ಕುವೆಂಪು ಅಕ್ಷರ ಜಗತ್ತಿನಲ್ಲಿ ಬೆಲೆ ಕಟ್ಟಲಾಗದ ಮುತ್ತಾಗಿದ್ದಾರೆ. ನಾಡಗೀತೆ, ರೈತ ಗೀತೆಯನ್ನು ನೀಡುವ ಮೂಲಕ ರೈತರ ಜೀವನವನ್ನು ಜಗತ್ತಿಗೆ ಪರಿಚಯಿಸಿದ ಕುವೆಂಪುರವರ ಹೃದಯ ವೈಶಾಲ್ಯತೆ ಮರೆಯಲಾಗದು. ಮಂತ್ರಮಾಂಗಲ್ಯದ ಮೂಲಕ ಸರಳ ವಿವಾಹ ಮಾಡಿಕೊಳ್ಳುವ ಮೂಲಕ ಸರಳ ವಿವಾಹಕ್ಕೆ ಭದ್ರ ಬುನಾದಿ ಹಾಕಿಕೊಟ್ಟವರಾಗಿದ್ದಾರೆ ಎಂದರು.
ಕವಯಿತ್ರಿ ಸಿ.ಇ.ತ್ರಿವೇಣಿ ಮಾತನಾಡಿ, ಕುವೆಂಪು ಅವರ ಸಂದೇಶಗಳನ್ನು ಜನತೆಗೆ ಸಾರುತ್ತಾ ಎಲ್ಲರಲ್ಲೂ ಓದುವ ಹವ್ಯಾಸ ಬೆಳೆಸಬೇಕು ಎಂದು ಹೇಳಿದರು.
ರೋಟರಿ ಅಧ್ಯಕ್ಷ ಟಿ.ಎನ್.ದಯಾನಂದ್, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಸಿ.ಆರ್.ಉದಯಕುಮಾರ್, ಕೋಶಾಧ್ಯಕ್ಷ ಭಾಸ್ಕರ್, ಚುಟುಕು ಸಾಹಿತಿ ಹೆಗ್ಗಂದೂರು ಪ್ರಭಾಕರ್, ಸೋಮಶೇಖರ್, ಸುರೇಶ್‌ರಾವ್ ಚವ್ಹಾಣ್, ಕೃಷ್ಣ, ನಿವೃತ್ತ ಉಪನ್ಯಾಸಕ ಕೃಷ್ಣಯ್ಯ ಮಾತನಾಡಿದರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಜಿ.ಶೇಷಾದ್ರಿ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಿ.ಇ.ತ್ರಿವೇಣಿ ಅವರನ್ನು ಸನ್ಮಾನಿಸಲಾಯಿತು. ಕಸಾಪ ನಗರಾಧ್ಯಕ್ಷ ಸಿ.ವಿ.ಮೋಹನ್‌ಕುಮಾರ್, ಹೆಬ್ಬಾಳು ವೇಣುಗೋಪಾಲ್, ಸಿ.ಕೆ.ರವೀಂದ್ರ, ಗೋಪಾಲ್‌ರಾಜ್, ಪುರುಷೋತ್ತಮ್, ಅಶೋಕ್, ಬಾಲೂರು ನಂಜುಂಡೇಗೌಡ, ವರದಯ್ಯ, ಮಂಜುನಾಥ್, ರಾಮಶೆಟ್ಟಿ, ರಂಗಣ್ಣ, ನಿಂಗಣ್ಣ, ಪ್ರಭಾಕರ ಜೈನ್, ಸೌತನಹಳ್ಳಿ ಸದಾನಂದ್ ಪಾಲ್ಗೊಂಡಿದ್ದರು.