ರಂಜಾನ್ ಹಿನ್ನೆಲೆ ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.  
ಮೈಸೂರು

ನಂಜನಗೂಡಿನಲ್ಲಿ ರಂಜಾನ್ ಆಚರಣೆ

ರವಿಕುಮಾರ್ ಪಿ. ಕೆ
ನಂಜನಗೂಡು: ನಗರದಲ್ಲಿ ಶನಿವಾರ ಮುಸ್ಲಿಮರು ಪವಿತ್ರ ರಂಜಾನ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕಳೆದ ಒಂದು ತಿಂಗಳಿನಿಂದ ರಂಜಾನ್ ಹಿನ್ನೆಲೆ ಮುಸ್ಲಿಮರು ಉಪವಾಸ ವ್ರತವನ್ನು ಕೈಗೊಂಡಿದ್ದರು. ನಗರದ ಈದ್ಗಾ ಮೈದಾನದಲ್ಲಿ ಶನಿವಾರ ಬೆಳಗ್ಗೆ 7.30 ರಿಂದ 8.30ರ ವರೆಗೆ ಹಾಗೂ 10.30 ರಿಂದ 11.30ವರೆಗೆ ನಮಾಜ್ ಮಾಡಿ, ಕುರಾನ್ ಬಗ್ಗೆ ಮಸೀದಿಯ ಧರ್ಮಗುರುಗಳು ಬೋಧಿಸಿ, ದೇಶದಲ್ಲಿ ಮಳೆ, ಬೆಳೆ ಶಾಂತಿ ದೊರಕಲಿ ಎಂದು ಹಾರೈಸಿದರು.
ಮುಸ್ಲಿಮರು ಹೊಸ ಉಡುಗೆಗಳನ್ನು ತೊಟ್ಟು ಶುಭಾಶಯ ವಿನಿಮಯ ಮಾಡಿಕೊಂಡರು. ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.