ತಿ.ನರಸೀಪುರದ ಮಸ್ಜಿದ್-ಎ-ನೂರ್ ಮಸೀದಿಯಲ್ಲಿ ಮುಸ್ಲಿಮರು ಶುಭಾಶಯ ವಿನಿಮಯ ಮಾಡಿಕೊಂಡರು. ಬಿ.ಮನ್ಸೂರ್‌ಆಲಿ, ಸೈಯದ್, ನಯಾಜ್, ರೈಸ್ ಮಿಲ್ ಸಲ್ಮಾನ್, ಬಿ.ಸಮಿಉಲ್ಲಾ ಇತರರು ಇದ್ದರು. 
ಮೈಸೂರು

ತಿ.ನರಸೀಪುರದಲ್ಲಿ ರಂಜಾನ್ ಸಂಭ್ರಮ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಈದ್ ಉಲ್ ಫಿತ್ರ್ ಹಬ್ಬ
  • ಮುಸ್ಲಿಮರು ಸಂಭ್ರಮದಿಂದ ಆಚರಿಸಿದರು
ತಿ.ನರಸೀಪುರ: ಪಟ್ಟಣದಲ್ಲಿ ಶನಿವಾರ ಈದ್ ಉಲ್ ಫಿತ್ರ್ ಹಬ್ಬವನ್ನು ಮುಸ್ಲಿಮರು ಸಂಭ್ರಮದಿಂದ ಆಚರಿಸಿದರು.
ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಮುಸ್ಲಿಮರು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಈದ್ ಆಚರಿಸಿದರು.
ಪಟ್ಟಣದ ಲಿಂಕ್ ರಸ್ತೆಯಲ್ಲಿರುವ ಮಸೀದಿಯಲ್ಲಿ ಜಮಾಯಿಸಿದ ಮುಸ್ಲಿಮರು ಬೆಳಗ್ಗೆ 10ಕ್ಕೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು. ಹೊಸ ಉಡುಪು ಧರಿಸಿ ಸಂಭ್ರಮಿಸಿದರು.
ಗುರುಗಳಾದ ಮೌಲಾನಾ ಕೌಸರ್, ಮಸೀದಿ ಅಧ್ಯಕ್ಷ ಡಾ. ಬಿ.ಮನ್ಸೂರ್ ಅಲಿ, ಕಾರ್ಯದರ್ಶಿ ಸೈಯದ್, ಖಜಾಂಚಿ ನಯಾಜ್, ರೈಸ್ ಮಿಲ್ ಮಾಲೀಕ ಸಲ್ಮಾನ್, ಸದಸ್ಯರಾದ ಬಿ.ಸಮಿಉಲ್ಲಾ ಅಲ್ತಾಫ್, ಇನಾಯತ್, ಮನ್ಸೂರ್ ಕಮಲ್, ಸಮಿ ಲೈಟ್, ಇಮ್ರಾನ್, ಅಕ್ಬರ್ ಪಾಷ, ರಿಯಾಜ್ ಇತರರಿದ್ದರು.
ಫೋಟೋ ಕ್ಯಾಪ್ಸನ್
22 ಞಚ್ಟ ಠ್ಞಿ 02