ಬೆಟ್ಟದಪುರ ಸಮೀಪದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಡಾ.ಬಿ. ನಂಜುಂಡಸ್ವಾಮಿ ಮಾತನಾಡಿದರು. ರಮ್ಯಾ, ನಾಗಶೆಟ್ಟಿ, ಮಹಾದೇವಶೆಟ್ಟಿ, ರಜನಿಕಾಂತ್, ಸ್ವಾಮಿ, ದೇವರಾಜ್, ಮಾದನಾಯಕ್, ಇಂದ್ರಮ್ಮ, ಪುಷ್ಪಲತಾ, ಚಲುವರಾಜ್ ಇತರರು ಇದ್ದರು.  
ಮೈಸೂರು

ಅತ್ತಿಗೋಡು ಶಾಲೆಯಲ್ಲಿ ರಾಜ್ಯೋತ್ಸವ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಬೆಟ್ಟದಪುರ ಸಮೀಪದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ
  • ಪ್ರಾಂಶುಪಾಲ ಡಾ.ಬಿ.ನಂಜುಂಡಸ್ವಾಮಿ ಭಾಗಿ
ಬೆಟ್ಟದಪುರ : ಬೆಟ್ಟದಪುರ ಸಮೀಪದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಕನ್ನಡ ರಾಜ್ಯೋತ್ಸವ ಸಮಾರಂಭ ಆಯೋಜಿಸಲಾಗಿತ್ತು.
ಪಿರಿಯಾಪಟ್ಟಣ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ನಂಜುಂಡಸ್ವಾಮಿ ಮಾತನಾಡಿ, ಕನ್ನಡ ಭಾಷೆ, ಇಂಗ್ಲಿಷ್ ಭಾಷೆಗಿಂತ 500 ವರ್ಷಗಳ ಹಿಂದೆ ಆದಿಕವಿ ಪಂಪನನ್ನು ಕಂಡ ಭಾಷೆಯಾಗಿದೆ. ಎಲ್ಲರೂ ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಮಾತೃಭಾಷೆಯ ಪ್ರೇಮ ಋಣ ಯಾರೂ ಮರೆಯಬಾರದು. ಕನ್ನಡ ಭಾಷೆಯ ಎಲ್ಲ ಸಾಹಿತಿಗಳನ್ನು ನೆನೆಯಬೇಕು. ಬಸವಣ್ಣನವರ ವಚನ ಸಾಹಿತ್ಯ ಕರ್ನಾಟಕದ ಒಂದು ಧರ್ಮಗ್ರಂಥ ಇದ್ದಂತೆ ಅದರ ಸಾರವನ್ನು ಎಲ್ಲರೂ ಅನುಸರಿಸಬೇಕು ಎಂದು ಹೇಳಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷೆ ರಮ್ಯಾ, ಮುಖ್ಯಶಿಕ್ಷಕ ನಾಗಶೆಟ್ಟಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಹಾದೇವಶೆಟ್ಟಿ, ಶಿಕ್ಷಕರಾದ ರಜನಿಕಾಂತ್, ಸ್ವಾಮಿ, ದೇವರಾಜ್, ಮಾದನಾಯಕ್, ಇಂದ್ರಮ್ಮ, ಪುಷ್ಪಲತಾ, ಚಲುವರಾಜ್, ರವಿ, ಲಿಖಿತ್ ಇತರರು ಇದ್ದರು.