ವೀರ ಸಾವರ್ಕರ್ ಯುವ ಬಳಗದಿಂದ ನಗರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರಾಜಮಾತೆ ಕೆಂಪನಂಜಮಣ್ಣಿ ಅವರನ್ನು ಸ್ಮರಣೆ ನಡೆಯಿತು. ಡಾ.ಈ.ಸಿ.ನಿಂಗರಾಜ್‌ಗೌಡ, ಪರಮೇಶ್‌ಗೌಡ, ಬಾಲಣ್ಣ, ಸಂದೇಶ್, ಉಮೇಶ್, ಪ್ರಮೋದ್ ಗೌಡ, ಭೈರಪ್ಪ, ಗಂಗಣ್ಣ, ಗೋಪಾಲ್, ಅಶ್ವಥ್, ಜಯಪ್ಪ, ಕೆ.ಎನ್.ಸಂತೋಷ್, ಮಂಜುನಾಥ್ ಎಸ್.ಗೌಡ, ವಸಂತ ಮನೀಶ್, ಚೇತನ್‌ಗೌಡ ಇತರರಿದ್ದರು. 
ಮೈಸೂರು

ಮೈಸೂರು ಭಾಗಕ್ಕೆ ರಾಜಮಾತೆ ಕೆಂಪನಂಜಮಣ್ಣಿ ಕೊಡುಗೆ ಅಪಾರ: ಡಾ.ಈ.ಸಿ.ನಿಂಗರಾಜ್‌ಗೌಡ

ಪ್ರಮುಖ ಮುಖ್ಯಾಂಶಗಳು

  • ನಮ್ಮ ಹೆಮ್ಮೆಯ ಕೆಂಪನಂಜಮ್ಮಣ್ಣಿ ಅವರ ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ
  • ಪುತ್ರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಬೆಂಬಲವಾಗಿ ನಿಂತು ಶಾಶ್ವತ ಕಾಮಗಾರಿ ನಡೆಸಿದರು
ಮೈಸೂರು:ವೀರ ಸಾವರ್ಕರ್ ಯುವ ಬಳಗದಿಂದ ನಗರದ ದಿವಾನ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರಾಜಮಾತೆ ಕೆಂಪನಂಜಮಣ್ಣಿ ಅವರನ್ನು ಸ್ಮರಿಸಲಾಯಿತು.
ಭಾರತ್ ಮಾತೆ ಹಾಗೂ ಕೆಂಪನಂಜಮಣ್ಣಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಬಿಜೆಪಿ ಸಹ ಪ್ರಭಾರಿ ಡಾ.ಈ.ಸಿ.ನಿಂಗರಾಜ್‌ಗೌಡ, ಮೈಸೂರು ಭಾಗಕ್ಕೆ ಕೆಂಪನಂಜಮಣ್ಣಿ (ವಾಣಿ ವಿಲಾಸ ಸನ್ನಿಧಾನ) ಕೊಡುಗೆ ಅಪಾರ. ಕೆಆರ್‌ಎಸ್ ಅಣೆಕಟ್ಟು ಕಟ್ಟುವಾಗ ಹಣಕಾಸಿನ ಕೊರತೆಯಾದಾಗ ತಮ್ಮ ಮೈ ಮೇಲಿದ್ದ ಒಡವೆ ಮಾರಿ ಅಣೆಕಟ್ಟು ಪೂರ್ಣಗೊಳ್ಳಲು ಸಹಾಯ ಮಾಡಿದ ನಮ್ಮ ಹೆಮ್ಮೆಯ ಕೆಂಪನಂಜಮ್ಮಣ್ಣಿ ಅವರ ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಪುತ್ರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಬೆಂಬಲವಾಗಿ ನಿಂತ ಅವರು, ಮೈಸೂರು ನಗರದ ವಿಸ್ತರಣೆ ಹಾಗೂ ಪೈಪ್‌ಗಳಮೂಲಕ ನೀರು ಸರಬರಾಜು ಮತ್ತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಂಕುಸ್ಥಾಪನೆ, ಭಾರತದಲ್ಲಿಯೇ ಮೊದಲ ಬಾರಿಗೆ ಶಿವನಸಮುದ್ರ ವಿದ್ಯುತ್ ಉತ್ಪಾದನೆ, ರೈತರ ಅನೂಕೂಲಕ್ಕಾಗಿ ಚೆತ್ರದುರ್ಗದಲ್ಲಿ ಮಾರಿ ಕಣಿವೆ ಅಣೆಕಟ್ಟು, ಮಹಿಳೆಯರ ವಿದ್ಯಾಭ್ಯಾಸಕ್ಕೆ ಅನುಕೂಲಕ್ಕಾಗಿ ಮಹಾರಾಣಿ ಕಾಲೇಜು ಸ್ಧಾಪನೆ, ಬೆಂಗಳೂರಿನಲ್ಲಿ ಇಂಡಿಯನ್ ಇನ್ಸೂಟ್ಯೂಟ್ ಆಫ್ ಸೈನ್ಸ್ ಪ್ರಾಂರಂಭಿಸಿರುವುದು ಇವರ ಕಾರ್ಯಕ್ಕೆ ಉತ್ತಮ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.
ಬಿಜೆಪಿ ಮೈಸೂರು ವಿಭಾಗದ ಸಹ ಪ್ರಭಾರಿಯಾಗಿ ನೇಮಕಗೊಂಡ ಈ.ಸಿ.ನಿಂಗರಾಜ್‌ಗೌಡ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಪರಮೇಶ್‌ಗೌಡ, ಬಾಲಣ್ಣ, ಸಂದೇಶ್, ಉಮೇಶ್, ಪ್ರಮೋದ್ ಗೌಡ, ಭೈರಪ್ಪ, ಗಂಗಣ್ಣ, ಗೋಪಾಲ್, ಅಶ್ವಥ್, ಜಯಪ್ಪ, ಕೆ.ಎನ್. ಸಂತೋಷ್, ಮಂಜುನಾಥ್ ಎಸ್.ಗೌಡ, ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕಿ ವಸಂತ ಮನೀಶ್, ಒಕ್ಕಲಿಗರ ಸಂಘದ ನಿರ್ದೇಶಕ ಚೇತನ್‌ಗೌಡ, ವಿವಿಧ ಸಂಘಟನೆಯ ಚಂದ್ರಕಲಾ, ರಶ್ಮಿ, ಮಧು, ಗೀತಾ, , ಪ್ರವೀಣ್, ರಾಜಣ್ಣ, ವಿಜಯ್, ಅಭಿ, ವಿನೋದ, ವಿ ಎಸ್ ಕಿರಣ್, ಬ್ರಹ್ಮಚಾರ್, ಯೋಗೇಶ್, ನಾಗೇಶ್, ಅನೋಜ್, ರಾಜೇಶ್, ಮೋಹಿತ್ ಗೌಡ, ಚೇತನ್ ಗೌಡ ಟಿಎಸ್ ಅರುಣ್, ವಿನೋದ್ ಅರಸ್, ಮಂಜುನಾಥ್, ಮೋಹನ್ ಇತರರಿದ್ದರು.