ಸರಗೂರು ತಾಲೂಕಿನ ಕಟ್ಟೆ ಹುಣಸೂರು ಗ್ರಾಮದ ಮಹದೇವಮ್ಮ ಎಂಬವರ ಮನೆಯ ಶಿಟ್ ಗಾಳಿ ಮಳೆ ಗೆ ಹಾರಿಹೋಗಿದೆ.
ಸರಗೂರು : ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಸೋಮವಾರ ಸಂಜೆ ಸಂಜೆ ಸುರಿದ ಭಾರಿ ಮಳೆ ಹಾಗೂ ಗಾಳಿಗೆ ಹಲವು ಮನೆಯ ಚಾವಣಿ, ಶೀಟ್‌ಗಳು ಹಾರಿ ಹೋಗಿ ಅಪಾರ ನಷ್ಟವಾಗಿದೆ. ಕಲ್ಲಂಬಾಳು ಗ್ರಾ.ಪಂ.ವ್ಯಾಪ್ತಿಯ ಕಟ್ಟೆಹುಣಸೂರು ಗ್ರಾಮದ ಮಹದೇವಮ್ಮ ಅವರ ಮನೆ ಚಾವಣಿಯ ಸಿಮೆಂಟ್‌ಶೀಟುಗಳು ಗಾಳಿಯ ರಭಸಕ್ಕೆ ಹಾರಿ ಹೋಗಿವೆ. ನಂತರ ಸುರಿದ ಮಳೆಗೆ ಮನೆ ಒಳಗೆ ಇದ್ದ ಧಾನ್ಯಗಳು, ಬಟ್ಟೆ, ಟಿವಿ ಸೇರಿದಂತೆ ಅಗತ್ಯ ವಸ್ತುಗಳು
ನೀರುಪಾಲಾಗಿವೆ. ಶೌಚಾಲಯದ ಗೋಡೆ ಬುಡ ಸಮೇತ ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಗ್ರಾಮ ಲೆಕ್ಕಿಗರು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸರ್ಕಾರದ ವತಿಯಿಂದ ಪರಿಹಾರ ದೊರಕಿಸಿ ಕೊಡಬೇಕು ಎಂದು ನೊಂದವರು ಒತ್ತಾಯಿಸಿದ್ದಾರೆ.