ಕಳೆದುಕೊಂಡಿದ್ದ ಹ್ಯಾಂಡ್‌ಬ್ಯಾಗ್ ಕಾವೇರಿ ಬಿ.ಪೈ ಅವರಿಗೆ ರೈಲ್ವೆ ಅಧಿಕಾರಿಗಳು ವಾಪಸ್ ಮಾಡಿದರು. ಆರ್. ಚಂದ್ರಶೇಖರ್ ಮತ್ತು ವಿ.ನಂದಕುಮಾರ್ ಇದ್ದರು. 
ಮೈಸೂರು

ಹಣ, ಆಭರಣವಿದ್ದ ಬ್ಯಾಗ್ ಹಿಂತಿರುಗಿಸಿದ ರೈಲ್ವೆ ಸಿಬ್ಬಂದಿ

ಪ್ರಮುಖ ಮುಖ್ಯಾಂಶಗಳು

  • ಪ್ರಯಾಣ ಟಿಕೆಟ್ ಪರಿಶೀಲಕಿ ಕಲಾಬಾಯಿ ಅವರಿಂದ ಹ್ಯಾಂಡ್‌ಬ್ಯಾಗ್ ವಾಪಸ್
ಮೈಸೂರು: ರೈಲ್ವೆ ಸಿಬ್ಬಂದಿಯ ಜಾಗರೂಕತೆ ಮತ್ತು ಪ್ರಾಮಾಣಿಕತೆಯಿಂದಾಗಿ ಪ್ರಯಾಣಿಕರೊಬ್ಬರ ಕಳೆದುಹೋದ ಹ್ಯಾಂಡ್‌ಬ್ಯಾಗ್ ಅನ್ನು ಸುರಕ್ಷಿತವಾಗಿ ಪತ್ತೆಹಚ್ಚಿ ಹಿಂತಿರುಗಿಸಲಾಗಿದೆ.
67 ವರ್ಷದ ಕಾವೇರಿ ಬಿ.ಪೈ ಅವರು ಶ್ರೀರಂಗಪಟ್ಟಣದಿಂದ ಕೆಎಸ್‌ಆರ್ ಬೆಂಗಳೂರಿನವರೆಗೆ ಸಂಚರಿಸಿದ ರೈಲು ಸಂಖ್ಯೆ 16228ರಲ್ಲಿ ಬಿ-2 ಕೋಚ್‌ನಲ್ಲಿ ಕಾಯ್ದಿರಿಸಿದ ಸೀಟು ಹೊಂದಿದ್ದರು. ಅವರು ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ಇಳಿಯುವ ವೇಳೆ ತಮ್ಮ ಹ್ಯಾಂಡ್‌ಬ್ಯಾಗ್ ಮರೆತು ಬಿಟ್ಟುಹೋದರು.
ನಗದು ಹಾಗೂ ಆಭರಣಗಳನ್ನು ಹೊಂದಿದ್ದ ಈ ಹ್ಯಾಂಡ್‌ಬ್ಯಾಗ್ ಅನ್ನು ಅದೇ ರೈಲಿನಲ್ಲಿ ಎಸ್‌ಎಂಇಟಿಯಿಂದ ಮೈಸೂರಿನವರೆಗೆ ಕರ್ತವ್ಯದಲ್ಲಿದ್ದ ಪ್ರಯಾಣ ಟಿಕೆಟ್ ಪರಿಶೀಲಕಿ  ಕಲಾಬಾಯಿ ಅವರು ಗಮನಿಸಿ ಸುರಕ್ಷಿತವಾಗಿ ಇಟ್ಟುಕೊಂಡರು.
 ಅವರು ಪ್ರಾಮಾಣಿಕತೆ ಮತ್ತು ಜವಾಬ್ದಾರಿತನವನ್ನು ಪ್ರದರ್ಶಿಸಿ, ಆ ಬ್ಯಾಗ್ ಅನ್ನು ಮೈಸೂರಿನ ಮುಖ್ಯ ಟಿಕೆಟ್ ಪರಿಶೀಲಕರಿಗೆ ಒಪ್ಪಿಸಿದರು.
ನಂತರ ಮೈಸೂರಿನಲ್ಲಿ ಮುಖ್ಯ ಟಿಕೆಟ್ ಪರಿಶೀಲಕರಾದ ಆರ್.ಚಂದ್ರಶೇಖರ್ ಮತ್ತು ವಿ.ನಂದಕುಮಾರ್ ಸಮ್ಮುಖದಲ್ಲಿ ಆ ಹ್ಯಾಂಡ್‌ಬ್ಯಾಗ್ ಅನ್ನು ಹಿಂತಿರುಗಿಸಲಾಯಿತು.
ತಮ್ಮ ವಸ್ತುಗಳನ್ನು ಸುರಕ್ಷಿತವಾಗಿ ಮರಳಿ ಪಡೆದ ನಂತರ  ಕಾವೇರಿ ಸಂತೋಷ ವ್ಯಕ್ತಪಡಿಸಿ, ಈ ಕಾರ್ಯದಲ್ಲಿ ಭಾಗಿಯಾದ ಎಲ್ಲ ರೈಲ್ವೆ ಅಧಿಕಾರಿಗಳಿಗೆ ತಮ್ಮ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.