ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರಕ್ಕೆ ಮಾಜಿ ಶಾಸಕ ಕೆ.ಮಹದೇವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಖಂಡರಾದ ಗಗನ್, ಗಿರಿಗೌಡ, ಹರೀಶ್, ಉದಯಕುಮಾರ್, ಚಂದ್ರಣ್ಣ, ಗಿರೀಶ್ ಇತರರು ಇದ್ದರು.  
ಮೈಸೂರು

ರಾಗಿ ಖರೀದಿ ಕೇಂದ್ರಕ್ಕೆ ಮಾಜಿ ಶಾಸಕ ಮಹದೇವ್ ಭೇಟಿ

ಎ. ಆರ್. ರಘುರಾಮ
ಬೆಟ್ಟದಪುರ: ಬೆಟ್ಟದಪುರದ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರಕ್ಕೆ ಮಾಜಿ ಶಾಸಕ ಕೆ.ಮಹದೇವ್ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರೈತರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಎಪಿಎಂಸಿ ಆವರಣದಲ್ಲಿ ಕುಡಿಯುವ ನೀರು ಹಾಗೂ ಶೌಚಗೃಹ ಮತ್ತಿತರ ಮೂಲ ಸೌಕರ್ಯ
ಕೊರತೆ ಇದ್ದು, ಮುಂದಿನ ಬಾರಿ ರಾಗಿ ಖರೀದಿ ಕೇಂದ್ರ ಆರಂಭಕ್ಕೂ ಮೊದಲು ಎಲ್ಲಾ ಅಗತ್ಯ ಸೌಲಭ್ಯಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದರು. ಕೂಲಿ ಕಾರ್ಮಿಕರಿಗೆ ಇನ್ನೂ ಕೂಲಿ ಹಣ ಪಾವತಿ ಆಗದೇ ಇರುವ ಬಗ್ಗೆ ಗಮನಕ್ಕೆ ಬಂದಿದೆ, ಸಂಬಂಧಪಟ್ಟ ಗುತ್ತಿಗೆದಾರರು ತಕ್ಷಣವೇ ಬಾಕಿ ಹಣ ಪಾವತಿಸುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾರ್ಮಿಕರಿಗೆ ಸೂಕ್ತ ಸೌಲಭ್ಯ ಒದಗಿಸುವುದರ ಜತೆಗೆ ಶೀಘ್ರವೇ ಕೂಲಿ ಹಣ ಪಾವತಿ ಮಾಡಿಸುವ ಭರವಸೆ ನೀಡಿದರು.
ಮುಖಂಡರಾದ ಗಗನ್, ಗಿರಿಗೌಡ, ಹರೀಶ್, ಉದಯಕುಮಾರ್, ಚಂದ್ರಣ್ಣ, ಗಿರೀಶ್ ಇತರರು ಇದ್ದರು.