ಎಚ್.ಡಿ. ಕೋಟೆ ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಜಾನ್ ಭಗಿದರಿ ಶಬ್ಸ್ ದೂರ, ಶಬ್ಸೆ ಪೆಹ್ಲೆ ಅಭಿಯಾನಕ್ಕೆ ಇಒ ಧರಣೇಶ್ ಚಾಲನೆ ನೀಡಿದರು. ಡಾ.ರವಿಕುಮಾರ್, ನಾಗರಾಜು ಇದ್ದರು. 
ಮೈಸೂರು

ಜನಜಾಗೃತಿ ಅಭಿಯಾನಕ್ಕೆ ಚಾಲನೆ

ನಾಗೇಶ ಎಸ್
ಎಚ್.ಡಿ.ಕೋಟೆ: ಜನಜಾತೀಯ ಕಾರ್ಯಕ್ರಮದ ಅಡಿಯಲ್ಲಿ ಜಾನ್ ಭಗಿದರಿ ಶಬ್ಸ್ ದೂರ, ಶಬ್ಸೆ ಪೆಹ್ಲೆ ಅಭಿಯಾನಕ್ಕೆ ಸೋಮವಾರ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಇಒ ಧರಣೇಶ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಬುಡಕಟ್ಟು ಸಮುದಾಯದವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಯನ್ನು ತಿಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಪಡೆಯಬೇಕಾದರೆ ದಾಖಲಾತಿ ಬಹುಮುಖ್ಯ. ಹಾಗಾಗಿ ಯೋಜನೆಯ ಲಾಭ ಪಡೆಯಲು ಬೇಕಾಗುವ ದಾಖಲಾತಿಗಳನ್ನು ಒದಗಿಸುವ ಬಗ್ಗೆ ಸಂಬಂಧಿಸಿದ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸುವ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಹಾಡಿಯ ಜನರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು. ಮೇ 18ರಿಂದ ಮೇ 25ರವರಿಗೆ ಜಾನ್ ಭಗಿದರಿ ಶಬ್ಸ್ ದೂರ, ಶಬ್ಸೆ ಪೆಹ್ಲೆ ಅಭಿಯಾನ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎನ್.ಬೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶೈಲೇಂದ್ರ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ ಅಧೀಕ್ಷಕ ನಾಗರಾಜು, ತಾಲೂಕು ಪಂಚಾಯತಿ ಕಚೇರಿ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.