ಪರಿಶಿಷ್ಟ ಜಾತಿ, ಪಂಗಡದ ಎಲ್ಲ ಸಂಶೋಧನಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ನಗರದಲ್ಲಿ ಪ್ರತಿಭಟನೆೆ ನಡೆಯಿತು. ಹರಿಹರ ಆನಂದಸ್ವಾಮಿ, ದೇವನೂರು ಪುಟ್ಟನಂಜಯ್ಯ ಚೋರನಹಳ್ಳಿ ಶಿವಣ್ಣ, ಎಡತೊರೆ ಮಹದೇವಯ್ಯ, ನಾಗರಾಜ ಇತರರು ಇದ್ದರು.
- ಲ್ಯಾಪ್‌ಟ್ಯಾಪ್ ಕೊಡಬೇಕು, ಮಾಸಿಕ ಬಾಡಿಗೆಯನ್ನು ರದ್ದುಗೊಳಿಸಬೇಕು. ಭೊಜನ ವ್ಯವಸ್ಥೆಯನ್ನು ಮುಂದುವರಿಸಬೇಕು
- ಮಹಿಳಾ ಸಂಶೋಧಕಿಯರ ಮೇಲಾಗುತ್ತಿರುವ ದೌರ್ಜನ್ಯ ತಡೆಯಬೇಕು. ಪಿಎಚ್.ಡಿ ಪ್ರವೇಶ ಶುಲ್ಕ, ನೋಂದಣಿ ಶುಲ್ಕ, ವಾರ್ಷಿಕ ಶುಲ್ಕಗಳನ್ನು ಕಡಿತಗೊಳಿಸಬೇಕು
ಮೈಸೂರು:ಪರಿಶಿಷ್ಟ ಜಾತಿ, ಪಂಗಡದ ಎಲ್ಲ ಸಂಶೋಧನಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ನಗರದ ಪುರಭವನದಿಂದ ಮೈಸೂರು ವಿಶ್ವವಿದ್ಯಾಲಯದ ಕಾರ್ಯಸೌಧದ ವರೆಗೆ ಮೆರವಣಿಗೆ ನಡೆಸಿದ ಸಂಘಟನೆಗಳು, ತಕ್ಷಣ ಶಿಷ್ಯವೇತನ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಶಿಷ್ಯವೇತನಕ್ಕೆ ಆಗ್ರಹಿಸಿ 15 ದಿನಗಳಿಂದ ಮೈಸೂರು ವಿವಿ ಕಾರ್ಯಸೌಧದ ಎದುರು ಪ್ರತಿಭಟನೆ ನಡೆಸುತ್ತಿದ್ದರೂ ವಿಶ್ವವಿದ್ಯಾಲಯ ಇದುವರೆಗೂ ಸ್ಪಂದಿಸಿಲ್ಲ. 90 ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳಲ್ಲಿ ಕೇಲವ 20 ಜನರಿಗಷ್ಟೆ ಶಿಷ್ಯ ವೇತನ ನೀಡುವುದಾಗಿ ವಿಶ್ವವಿದ್ಯಾಲಯ ತಿಳಿಸುತ್ತಿದೆ. ಇದು ಎಸ್‌ಸಿ, ಎಸ್‌ಟಿ ಇತರೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿಲಿದೆ ಎಂದು ದೂರಿದರು.
ಶಿಷ್ಯವೇತನ ನೀಡುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ, ಶಿಷ್ಯವೇತನ ಪಡೆಯುವುದು ನಮ್ಮ ಹಕ್ಕು ಎಂಬಿತ್ಯಾದಿ ಫಲಕಗಳನ್ನು ಹಿಡಿದು ವಿವಿಧ ಘೋಷಣೆ ಕೂಗಿದರು.
ಪರಿಶಿಷ್ಟ ಜಾತಿ, ಪಂಗಡದ ಎಲ್ಲ ಸಂಶೋಧಕರಿಗೆ 2 ಕೋಟಿ ರೂ. ಶಿಷ್ಯವೇತನ ಮಂಜೂರು ಮಾಡಬೇಕು, ಲ್ಯಾಪ್‌ಟ್ಯಾಪ್ ಕೊಡಬೇಕು, ಮಾಸಿಕ ಬಾಡಿಗೆಯನ್ನು ರದ್ದುಗೊಳಿಸಬೇಕು. ಭೊಜನ ವ್ಯವಸ್ಥೆಯನ್ನು ಮುಂದುವರಿಸಬೇಕು, ಮಹಿಳಾ ಸಂಶೋಧಕಿಯರ ಮೇಲಾಗುತ್ತಿರುವ ದೌರ್ಜನ್ಯ ತಡೆಯಬೇಕು. ಪಿಎಚ್.ಡಿ ಪ್ರವೇಶ ಶುಲ್ಕ, ನೋಂದಣಿ ಶುಲ್ಕ, ವಾರ್ಷಿಕ ಶುಲ್ಕಗಳನ್ನು ಕಡಿತಗೊಳಿಸಬೇಕು ಎಂದು ಪ್ರತಿಭಟನಾಕರರು ಒತ್ತಾಯಿಸಿದರು.
ಹಿರಿಯ ಹೋರಾಟಗಾರ ಹರಿಹರ ಆನಂದಸ್ವಾಮಿ, ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ ನಟ ಚೇತನ್, ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಎಡತೊರೆ ಮಹದೇವಯ್ಯ, ಕೆಆರ್‌ಎಸ್ ಪಕ್ಷದ ನಾಗರಾಜ, ವೆಂಕಟಪ್ಪ, ಶಂಕರ್ ರಾಮಲಿಂಗ, ಸೋಸಲೆ ಸಿದ್ದರಾಜು, ಸೋಮಯ್ಯ ಮಲೆಯೂರು, ದೇವನೂರು ಪುಟ್ಟನಂಜಯ್ಯ,ಪಿ.ಮರಂಕಯ್ಯ ಇತರರು ಇದ್ದರು.