ಶ್ರೀರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿ ಮೈಸೂರು ಕನ್ನಡ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಎಸ್.ಬಾಲಕೃಷ್ಣ, ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗೋಪಿ, ಪ್ಯಾಲೆಸ್ ಬಾಬು ಇತರರು ಇದ್ದರು.
- ಶ್ರೀರಾಮಮಂದಿರದಲ್ಲಿ ಅವ್ಯವಹಾರ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಕನ್ನಡ ವೇದಿಕೆ ಹೋರಾಟ
- ರಾಮನ ರಾಜ್ಯದಲ್ಲಿ ರಾವಣರಿಂದ ಹಣ ಲೂಟಿ
- ಇಷ್ಟೆಲ್ಲ ಲೂಟಿ ನಡೆದರೂ ಪ್ರಧಾನಿ ನರೇಂದ್ರ ಮೋದಿ ಏಕೆ ಮೌನ
- ಯೋಗಿ ಆದಿತ್ಯನಾಥ್ ರಾಮಮಂದಿರ ವಿಚಾರದಲ್ಲಿ ಬುಲ್ಡೋಜರ್ ಮಾತುಗಳನ್ನು ಏಕೆ ಆಡುತ್ತಿಲ್ಲ?
ಮೈಸೂರು: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿ ಮೈಸೂರು ಕನ್ನಡ ವೇದಿಕೆಯಿಂದ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಉತ್ತರ ಪ್ರದೇಶದಲ್ಲಿರುವ ಶ್ರೀರಾಮಮಂದಿರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿರುವುದು ಇಡೀ ಹಿಂದೂ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಈ ಮಂದಿರ ನಿರ್ಮಾಣಕ್ಕಾಗಿ ನಡೆದ ಸುದೀರ್ಘ ಹೋರಾಟದಲ್ಲಿ ಅನೇಕ ಹಿಂದೂ ಕರಸೇವಕರ ಬಲಿದಾನವಾಗಿದ್ದು, ಅನೇಕರು ಅರೆಸೇನೆ ಪಡೆಗಳಿಂದ ಲಾಠಿ ಏಟು ತಿಂದಿದ್ದಾರೆ.
ಗೋಲಿಬಾರ್‌ನಲ್ಲಿ ಅನೇಕರು ಮೃತಪಟ್ಟಿದ್ದಾರೆ. ಇಂಥ ಕಷ್ಟ ದಾರಿಯಲ್ಲಿ ಕ್ರಮಿಸಿದ ಬಳಿಕವೇ ಮಂದಿರ ನಿರ್ಮಾಣವಾಗಿದ್ದರಿಂದ ಹಿಂದೂಗಳು ಸಂತೋಷಪಟ್ಟಿದ್ದರು. ಆದರೀಗ ರಾಮನ ರಾಜ್ಯದಲ್ಲಿ ರಾವಣರಿಂದ ಹಣ ಲೂಟಿ ಮಾಡಲಾಗಿದೆ.
ಇಷ್ಟೆಲ್ಲ ಲೂಟಿ ನಡೆದರೂ ಪ್ರಧಾನಿ ನರೇಂದ್ರ ಮೋದಿ ಏಕೆ ಮೌನ ವಹಿಸಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಮಮಂದಿರ ವಿಚಾರದಲ್ಲಿ ಬುಲ್ಡೋಜರ್ ಮಾತುಗಳನ್ನು ಏಕೆ ಆಡುತ್ತಿಲ್ಲ? ಎಂದು ಪ್ರತಿಭಟನಾಕಾರರು ಪ್ರಶ್ನಿಸದರು.
ಭಕ್ತರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು, ಶ್ರೀಮಂತರು, ವಿದೇಶದಲ್ಲಿರುವ ಹಿಂದೂಗಳು ದೇಣಿಗೆ ನೀಡುವ ಮೂಲಕ ಮಂದಿರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ.
ಇಂತಹ ಪವಿತ್ರ, ಶ್ರದ್ಧಾಭಕ್ತಿಯ ಕೇಂದ್ರವಾಗಿರುವ ರಾಮಮಂದಿರದಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿರುವುದು ಇಡೀ ಹಿಂದೂ ಸಮಾಜಕ್ಕೆ, ರಾಮನ ಭಕ್ತರ ಬೆನ್ನಿಗೆ ಚೂರಿ ಹಾಕಿದಂತಾಗಿದೆ. ಇಂತಹ ಧರ್ಮದ್ರೋಹಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಭಕ್ತರ ನಂಬಿಕೆಗೆ ವಿಶ್ವಾಸಕ್ಕೆ ದ್ರೋಹ ಎಸಗಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಮುಖಂಡರಾದ ನಾಲಾಬೀದಿರವಿ, ಬೋಗಾದಿ ಸಿದ್ದೇಗೌಡ, ಗೋಪಿ, ಪ್ಯಾಲೆಸ್ ಬಾಬು, ಸಿದ್ದಪ್ಪ, ಹೊನಕೆರೆಸ್ವಾಮಿ, ಗೋವಿಂದರಾಜು, ಕಾವೇರಿಮ್ಮ, ಮಾಲಿನಿ, ಸಾಯಿಚಾಮರಾಜು, ಅರುಣ್ ಕುಮಾರ್, ಸ್ವಾಮಿಗೈಡ್, ರಮೇಶ್ ಇತರರು ಇದ್ದರು.