ಜೈನ ಸಮುದಾಯದವರ ಹಾಗೂ ಮುನಿಗಳ ಮೇಲೆ ದೌರ್ಜನ್ಯ, ಹತ್ಯೆ ಖಂಡಿಸಿ ಶ್ರೀದಿಗಂಬರ ಜೈನ ಸಮಾಜದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಎಂ.ಆರ್.ಸುನೀಲ್‌ಕುಮಾರ್, ಬಿ.ಭರತ್‌ರಾಜ್, ಪಿ.ಎಸ್.ಲಕ್ಷ್ಮೀಶ್‌ಬಾಬು, ಬಿ.ಜ್ವಾಲೇಂದ್ರಕುಮಾರ್, ಎನ್.ಜಿನೇಂದ್ರ ಪ್ರಕಾಶ್ ಇತರರು ಇದ್ದರು
- ಅಹಿಂಸಾ ತತ್ವ ಪಾಲನೆ ಮಾಡುವ ಜೈನ ಮುನಿಗಳ ಮೇಲಿನ ಹಲ್ಲೆ ತೀವ್ರ ನೋವಿನ ಸಂಗತಿ
- ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕವಾಗಿ ಸೇವಾನಿರತ ಸಮಾಜದ ಮೇಲೆ ದಬ್ಬಾಳಿಕೆ ನಿಲ್ಲಲಿ
ಮೈಸೂರು:ಜೈನ ಸಮುದಾಯದವರ ಹಾಗೂ ಮುನಿಗಳ ಮೇಲೆ ದೌರ್ಜನ್ಯ, ಹತ್ಯೆ ನಡೆಯುತ್ತಿದೆ ಎಂದು ಶ್ರೀ ದಿಗಂಬರ ಜೈನ ಸಮಾಜದಿಂದ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ವಿಶ್ವದಲ್ಲಿ ಮಾನವ ಕುಲಕ್ಕೆ ಅಹಿಂಸಾ ಧರ್ಮ ಸಾರಿದ ಅತೀ ಪುರಾತನ ಧರ್ಮ ಜೈನ ಧರ್ಮ. ಯಾರನ್ನೂ ಹಿಂಸಿಸದೆ ತನ್ನ ಧರ್ಮ ಪಾಲಿಸಿಕೊಂಡು ಬರುತ್ತಿದೆ. ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕವಾಗಿ ಸೇವಾನಿರತವಾಗಿದೆ ಎಂದು ಹೇಳಿದರು.
ಇಂತಹ ಧರ್ಮದ ಮೇಲೆ ದೌರ್ಜನ್ಯ, ಕೊಲೆಗಳು ನಡೆಯುತ್ತಿವೆ. ಮಧ್ಯಪ್ರದೇಶದ ರೇವಾ ಪಟ್ಟಣದಲ್ಲಿ ಶೃತಮತಿ ಮಾತಾಜಿ, ಉಪದ್ಮತಿ ಮಾತಾಜಿ ಅವರು ವಿಹಾರ ಮಾಡುತ್ತಿದ್ದಾಗ ಅಪರಿಚಿತ ವಾಹನವೊಂದು ಉದ್ದೇಶಪೂರ್ವಕವಾಗಿ ಅಪಘಾತವೆಸಗಿ ಹತ್ಯೆ ಮಾಡಲಾಗಿದೆ ಎಂದು ದೂರಿದರು.
ಈ ಘಟನೆ ಮಾಸುವ ಮುನ್ನವೇ ಗುಜರಾತಿನ ರಾಜ್‌ಕೋಟ್‌ನಲ್ಲಿ ಇಂತಹುದೇ ಅಪಘಾತದಿಂದ ಮುನಿಗಳಾದ ಆಚಾರ್ಯ ಅಜಿತ್ ಮಹಾರಾಜರು, ಮುನಿ ವಿಜಯ್ ಮಹಾರಾಜರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಗಳಿಂದಾಗಿ ಜೈನ ಸಮಾಜಕ್ಕೆ ತುಂಬಾ ನೋವಾಗಿದೆ. ಅಹಿಂಸಾ ತತ್ವ ಪಾಲನೆ ಮಾಡುವವರಿಗೆ ಇಂತಹ ಗತಿ ಮುಂದುವರಿದರೆ ಜೈನ ಸಮಾಜ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಅಧ್ಯಕ್ಷ ಎಂ.ಆರ್.ಸುನೀಲ್‌ಕುಮಾರ್, ಉಪಾಧ್ಯಕ್ಷ ಬಿ.ಭರತ್‌ರಾಜ್, ಕಾರ್ಯದರ್ಶಿ ಪಿ.ಎಸ್.ಲಕ್ಷ್ಮೀಶ್‌ಬಾಬು, ಕೋಶಾಧ್ಯಕ್ಷ ಬಿ.ಜ್ವಾಲೇಂದ್ರ ಕುಮಾರ್, ಸಹ ಕಾರ್ಯದರ್ಶಿ ಎನ್.ಜಿನೇಂದ್ರ ಪ್ರಕಾಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎ.ಎನ್.ಧರಣೇಂದ್ರನ್, ಚಂದ್ರಶೇಖರ್ ಆರಿಗ, ಪದ್ಮಶ್ರೀ ಮಹಿಳಾ ಸಮಾಜದ ಅಧ್ಯಕ್ಷೆ ನಂದಿನಿ ಸಂಜಯ್, ಉಪಾಧ್ಯಕ್ಷೆ ಜಯಲಲಿತಾ, ಕಾರ್ಯದರ್ಶಿ ಸುಮಾ ದಯಾಕರ್, ಜೈನ ತೀರ್ಥ ಕ್ಷೇತ್ರ ಕಮಿಟಿ ಅಧ್ಯಕ್ಷ ವಿನೋದ್ ಬಾಕ್ಲಿವಾಲಾ ಇತರರು ಇದ್ದರು.