ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾನಾ ಪಿಂಚಣಿದಾರರ ಸಂಘಟನೆಗಳಿಂದ ಬುಧವಾರ ಜಯಲಕ್ಷ್ಮೀಪುರಂನ ಬಿಎಸ್‌ಎನ್‌ಎಲ್ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು. ಎಸ್.ವಿಷಕಂಠಮೂರ್ತಿ, ಬಸವರಾಜು, ಎಂ.ಎನ್.ರಾಮಕೃಷ್ಣ ಇತರರು ಇದ್ದರು.
- ಪೆನ್ಷನ್ ಕಾಯ್ದೆಗಳ ಕ್ರಮಬದ್ಧಗೊಳಿಸುವಿಕೆಯನ್ನು ತಕ್ಷಣ ಹಿಂಪಡೆಯಬೇಕು
- ಪಿಂಚಣಿ ಪರಿಷ್ಕರಣೆಗೆ 2026ಕ್ಕಿಂತಲೂ ಹಿಂದಿನ ಪಿಂಚಣಿದಾರರನ್ನು ಸೇರಿಸಬೇಕು
ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾನಾ ಪಿಂಚಣಿದಾರರ ಸಂಘಟನೆಗಳಿಂದ ಜಯಲಕ್ಷ್ಮೀಪುರಂನ ಬಿಎಸ್‌ಎನ್‌ಎಲ್ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಪೆನ್ಷನ್ ಕಾಯ್ದೆಗಳ ಕ್ರಮಬದ್ಧಗೊಳಿಸುವಿಕೆಯನ್ನು ತಕ್ಷಣ ಹಿಂಪಡೆಯಬೇಕು, 8ನೇ ವೇತನ ಆಯೋಗದ ಉಲ್ಲೇಖಕ್ಕೆ ತಿದ್ದುಪಡಿ ತರುವ ಮೂಲಕ ಪಿಂಚಣಿ ಪರಿಷ್ಕರಣೆಗೆ 2026ಕ್ಕಿಂತಲೂ ಹಿಂದಿನ ಪಿಂಚಣಿದಾರರನ್ನು ಸೇರಿಸಬೇಕು ಎಂದು ಒತ್ತಾಯಿಸಲಾಯಿತು.
8ನೇ ವೇತನ ಆಯೋಗದ ಉಲ್ಲೇಖದಲ್ಲಿ ಜಾರಿ ದಿನಾಂಕವನ್ನು 2026 ಜನವರಿ 1ರಿಂದ ಬಾಕಿ ಸಮೇತ ಅನ್ವಯವಾಗುವಂತೆ ಸೇರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಎಸ್‌ಎನ್‌ಎಲ್ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಎಸ್‌ಎನ್‌ಪಿಡಬ್ಲುಎ ಜಿಲ್ಲಾ ಕಾರ್ಯದರ್ಶಿ ಎಸ್.ವಿಷಕಂಠಮೂರ್ತಿ, ಎಐಬಿಡಿಪಿಎ ಜಿಲ್ಲಾ ಕಾರ್ಯದರ್ಶಿ ಬಸವರಾಜು, ಎಸ್‌ಎನ್‌ಪಿಡಬ್ಲ್ಯುಎ ಜಿಲ್ಲಾಧ್ಯಕ್ಷ ಎಂ.ಎನ್.ರಾಮಕೃಷ್ಣ ಇತರರು ಇದ್ದರು.