ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸುವಂತೆ ಆಗ್ರಹಿಸಿ ಎಡಪಕ್ಷಗಳು ಹಾಗೂ ಪ್ರಗತಿಪರ ಸಂಘಟನೆಗಳಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಮೈಸೂರು: ಅಮೆರಿಕ-ಇಸ್ರೇಲ್ ಯುದ್ಧಕೋರ ನೀತಿ ಖಂಡಿಸಿ, ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸುವಂತೆ ಆಗ್ರಹಿಸಿ ಎಡಪಕ್ಷಗಳು ಹಾಗೂ ಪ್ರಗತಿಪರ ಸಂಘಟನೆಗಳಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ರಾಮಸ್ವಾಮಿ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶ್ರೀಮಂತ ಬಂಡವಾಳಶಾಹಿ ದೇಶಗಳಿಂದು ಸಂಕಷ್ಟದಲ್ಲಿ ಇವೆ. ಇದರಿಂದ ಹೊರಬರಲು ಇತರ ರಾಷ್ಟ್ರಗಳ ಮೇಲೆ ದಾಳಿ ನಡೆಸಿ ಅಲ್ಲಿನ ತೈಲ ಸೇರಿದಂತೆ ಇತರ ಸಂಪತ್ತನ್ನು ಲೂಟಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಅದರ ಭಾಗವಾಗಿ ಪ್ರಜಾಪ್ರಭುತ್ವ ಸ್ಥಾಪನೆ ಹೆಸರಿನಲ್ಲಿ ಮತ್ತು ಅಣುಶಕ್ತಿ ನೆಪದಲ್ಲಿ ತಮ್ಮ ಮಾತುಗಳನ್ನು ಕೆಳದ ಸಾರ್ವಭೌಮ ದೇಶಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಶಾಲೆ-ಆಸ್ಪತ್ರೆಗಳ ಮೇಲೆ, ನಾಗರಿಕರ ಮೇಲೆ ದಾಳಿ ಮಾಡಿ ಹತ್ಯೆ ಮಾಡಲಾಗಿದೆ. ಈ ಯುದ್ಧಗಳಿಂದ ಮೊದಲು ಬಲಿಯಾಗುವುದು ಮಕ್ಕಳು, ಮಹಿಳೆಯರು ಹಾಗೂ ತೊಂದರೆಗೊಳಗಾಗುವವರು ರೈತ-ಕಾರ್ಮಿಕ, ಸಾಮಾನ್ಯ ಜನರು ಅಧಿಕ.
ಆದ್ದರಿಂದ ಈ ಯುದ್ಧ ಕೂಡಲೇ ನಿಲ್ಲಬೇಕು. ವಿಶ್ವ ಸಂಸ್ಥೆ, ಅಂತಾರಾಷ್ಟ್ರೀಯ ನ್ಯಾಯಾಲಯ ಮಧ್ಯಪ್ರದೇಶ ಮಾಡಬೇಕೆಂದು ಆಗ್ರಹಿಸಿದರು.
ಇರಾನ್ ಮೇಲಿನ ಅಮೆರಿಕ, ಇಸ್ರೇಲ್ ದಾಳಿಯಿಂದ ಭಾರತ ದೇಶವೂ ಸಂಕಷ್ಟ ಎದುರಿಸುವಂತಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಪೂರೈಕೆ ಮೇಲೆ ಪರಿಣಾಮ ಬೀರಿದೆ.
ಅಡುಗೆ ಅನಿಲದ ಕೊರತೆ ಉಂಟಾಗಿದೆ. ಬೆಲೆಗಳೂ ಏರಿಕೆ ಆಗುತ್ತಿವೆ. ಕೂಡಲೇ ಕೇಂದ್ರ ಸರ್ಕಾರ ಯುದ್ಧ ನಿಲ್ಲಿಸುವಂತೆ ಅಮೆರಿಕವನ್ನು ಒತ್ತಡ ಹೇರಬೇಕು. ದೇಶ ನಾಗರಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಸಿಪಿಐ ಕಾರ್ಯದರ್ಶಿ ರಾಮಕೃಷ್ಣ, ಸಿಪಿಎಂಎಲ್ ಕಾರ್ಯದರ್ಶಿ ಜವರಯ್ಯ, ಎಸ್‌ಯುಸಿಐ ಕಾರ್ಯದರ್ಶಿ ರವಿ, ಪ್ರಗತಿಪರರಾದ ಸವಿತಾ ಮಲ್ಲೇಶ್, ಒಡನಾಡಿ ಸಂಸ್ಥೆಯ ಸ್ಟಾೃನ್ಲಿ, ಲಕ್ಷ್ಮಣ್ ಹೊಸಕೋಟೆ, ರಾಜ್ಯ ರೈತ ಸಂಘದ ಹೊಸಕೋಟೆ ಬಸವರಾಜ್, ಪ್ರೊ.ಕಾಳಚನ್ನೇಗೌಡ, ಕೆ.ಬಸವರಾಜ್, ಎನ್.ವಿಜಯ್‌ಕುಮಾರ್, ಜಯರಾಮ್, ನೆಲೆ ಹಿನ್ನೆಲೆ ಸಂಸ್ಥೆಯ ಗೋಪಾಲ್ ಕೃಷ್ಣ, ಶಾಕುಂತಲ, ಬಾಲಾಜಿರಾವ್, ಪ್ರಭಾಕರ್, ಯಶೋಧರ, ಸೋಮರಾಜೇ ಅರಸ್, ರಾಜೇಂದ್ರ, ಶ್ರೀಕಾಂತ್, ಸುಬ್ರಹ್ಮಣ್ಯ, ರಾಘವೇಂದ್ರ, ಬಾಲಕೃಷ್ಣ ಪ್ರತಿಭಟನೆಯಲ್ಲಿದ್ದರು