ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಗೌರವ ತೋರಿರುವ ಘಟನೆಯನ್ನು ಖಂಡಿಸಿ ಆದಿ ಕರ್ನಾಟಕ ಮಹಾಸಂಸ್ಥೆಯಿಂದ ಪ್ರತಿಭಟನೆ ನಡೆಯಿತು. ಪುರುಷೋತ್ತಮ್, ನಾಗರಾಜು, ಮಹದೇವು ಇನ್ನಿತರರಿದ್ದರು. 
ಮೈಸೂರು

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಹೇಳನ ಖಂಡಿಸಿ ಪ್ರತಿಭಟನೆ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಖರ್ಗೆ ಭಾಷಣ ಮಾಡಿದ ಸ್ಥಳ ಸ್ವಚ್ಛಗೊಳಿಸಿದ್ದಕ್ಕೆ ಆಕ್ರೋಶ
  • ಆದಿಕರ್ನಾಟಕ ಮಹಾಸಂಸ್ಥೆಯಿಂದ ಪ್ರತಿಭಟನೆ

ಮೈಸೂರು: 

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿ ಅಸ್ಪಶ್ಯತೆ ಆಚರಿಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಆದಿ ಕರ್ನಾಟಕ ಮಹಾಸಂಸ್ಥೆಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ  ಪ್ರತಿಭಟನೆ ನಡೆಯಿತು.

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯ ಜಾಗವನ್ನು ಸಗಣಿ, ಗೋಮೂತ್ರದಿಂದ ಶುಚಿಗೊಳಿಸಿ, ಹೋಮ-ಹವನ ನಡೆಸುವ ಮೂಲಕ ಅಸ್ಪಶ್ಯತೆ ಆಚರಿಸಿದವರನ್ನು ಕೂಡಲೇ ಬಂಧಿಸಬೇಕು ಎಂದೂ ಪ್ರತಿಭಟನಾಕಾರರು ಆಗ್ರಹಿಸಿದರು.
ಸಾರ್ವಜನಿಕ ಸ್ಥಳದಲ್ಲಿ ಇಂತಹ ಕೃತ್ಯವೆಸಗಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುವುದು ಭಾರತೀಯ ಸಂವಿಧಾನದ 17ನೇ ವಿಧಿಯ (ಅಸ್ಪಶ್ಯತೆ ನಿಷೇಧ)ಉಲ್ಲಂಘನೆಯಾಗಿದೆ.
 ಶತಮಾನಗಳಿಂದ ಆಚರಿಸಿಕೊಂಡು ಬಂದಿರುವ ಜಾತಿ ವರ್ಣಗಳ ಆಧಾರದ ಮೇಲೆ ಮನುಷ್ಯನನ್ನು ಕೀಳಾಗಿ ಕಾಣುವ ಇಂತಹ ಮನಸ್ಥಿತಿ ಶೋಷಿತ ಸಮುದಾಯವನ್ನು ದೈಹಿಕವಾಗಿ, ಮಾನಸಿಕವಾಗಿ ಕುಗ್ಗಿಸುವ ಯತ್ನವಾಗಿದೆ. ಅಸಹಿಷು ಹಾಗೂ ಜಾತಿ ನಿಂದನೆ ಉತ್ತೇಜಿಸುವ ಇಂತಹ ಕೃತ್ಯಗಳು ಮನುಷ್ಯತ್ವಕ್ಕೆ ಮಾರಕ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನುಷ್ಯರೆಲ್ಲರೂ ಸಮಾನರು ಎಂಬ ಸಾಂವಿಧಾನಿಕ ತತ್ವವನ್ನು ಉಲ್ಲಂಘಿಸಿ ಬಹಿರಂಗವಾಗಿ ಅಸ್ಪಶ್ಯತೆ ಆಚರಿಸಿದವರನ್ನು  ಬಂಧಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮಾಜಿ ಮೇಯರ್ ಪುರುಷೋತ್ತಮ್, ನಾಗರಾಜು, ಮಹದೇವು ಇನ್ನಿತರರಿದ್ದರು