ಜೆಎಸ್‌ಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಎಂ.ಎಸ್. ಮಹೇಶ್, ಎಂ. ಎಂ. ಸ್ವಾಮಿ, ಸಿ.ಜ್ಞಾನೇಶ್ವರಿ ಇದ್ದರು. 
ಮೈಸೂರು

ಪರಿಸರ ಸಮತೋಲನ ಕಾಪಾಡಲು ಹಾವುಗಳನ್ನು ರಕ್ಷಿಸಿ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ವನ್ಯಜೀವಿ ಸಂರಕ್ಷಕ ಎಂ.ಎಸ್.ಮಹೇಶ್ ಸಲಹೆ
  • ಪ್ರಾಣಿಶಾಸ್ತ್ರ: ಹಾವುಗಳ ಗುರುತಿಸುವಿಕೆ ಮತ್ತು ಸುರಕ್ಷಣಾ ಶಿಷ್ಟಾಚಾರಗಳ ಕುರಿತು ಜಾಗೃತಿ ಕಾರ್ಯಕ್ರಮ
ಮೈಸೂರು: ಪರಿಸರ ಸಮತೋಲನ ಕಾಪಾಡಲು ಹಾವುಗಳನ್ನು ರಕ್ಷಿಸಬೇಕು ಎಂದು ಹಾವು ರಕ್ಷಕ ಮತ್ತು ವನ್ಯಜೀವಿ ಸಂರಕ್ಷಕ ಎಂ.ಎಸ್. ಮಹೇಶ್ ಹೇಳಿದರು
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಾಣಿಶಾಸ್ತ್ರ: ಹಾವುಗಳ ಗುರುತಿಸುವಿಕೆ ಮತ್ತು ಸುರಕ್ಷಣಾ ಶಿಷ್ಟಾಚಾರಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಹಾವುಗಳು ರೈತ ಮಿತ್ರ ಎನಿಸಿದೆ. ಪ್ರಪಂಚಾದ್ಯಂತ 2600 ರೀತಿಯ ಹಾವುಗಳಿದ್ದು, ಭಾರತದಲ್ಲಿ 300 ರೀತಿಯ ಹಾವುಗಳಿವೆ ಎಂದರು. 
ಹಾವುಗಳ ವೈವಿಧ್ಯತೆ ಪರಿಚಯಿಸಿದ ಅವರು, ನಾಗರಹಾವು, ಮಂಡಲದ ಹಾವು ಹಾಗೂ ಕಾಳಿಂಗಸರ್ಪ ಹಾವುಗಳ ವಿಶಿಷ್ಟತೆ  ತಿಳಿಸಿದರು. 
ಹಾವು ಕಚ್ಚಿದಾಗ ನಿಯಂತ್ರಿಸಲು ಬಹಳಷ್ಟು ಔಷಧಗಳಿದ್ದು, ಹಾವಿನ ವಿಷದಿಂದ ಸಾಯುವುದಕ್ಕಿಂತ ಭಯದಲ್ಲೇ ಸಾಯುವವರ ಸಂಖ್ಯೆ ಹೆಚ್ಚಿದೆ. ಯಾವುದೇ ರೀತಿಯ ಮೂಢನಂಬಿಕೆಗಳಿಗೆ ಒಳಗಾಗದೆ ಹಾವು ಕಚ್ಚಿದಾಗ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ವಿಭಿನ್ನ ರೀತಿಯ ಹಾವುಗಳ ಭಾವಚಿತ್ರಗಳನ್ನು ಪ್ರದರ್ಶಿಸಿದರು. 
ಕಾಲೇಜಿನ ಪರೀಕ್ಷಾ ನಿಯಂತ್ರಣಾಧಿಕಾರಿ ಎಂ. ಎಂ.ಸ್ವಾಮಿ, ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥೆ ಸಿ.ಜ್ಞಾನೇಶ್ವರಿ ಇದ್ದರು.