ಬಸ್‌ನಲ್ಲಿ ಕಳೆದುಕೊಂಡಿದ್ದ ಲಕ್ಷರೂ ಹಣವನ್ನು ವಾರಸುದಾರ ರೈತ ಬಸವರಾಜು ದಂಪತಿಗೆ ಹುಣಸೂರು ಡಿಪೋ ಮ್ಯಾನೇಜರ್ ಶೇಷುಮೂರ್ತಿಯವರ ಸಮ್ಮುಖದಲ್ಲಿ ನಿರ್ವಾಹಕ ಮಹೇಶ್-ಚಾಲಕ ರವಿಕುಮಾರ್ ಹಸ್ತಾಂತರಿಸಿದರು. ಸಿಬ್ಬಂದಿ ಇದ್ದರು.  
ಮೈಸೂರು

ಪ್ರಾಮಾಣಿಕತೆ ಮೆರೆದ ಚಾಲಕ-ನಿರ್ವಾಹಕರು

ಎ. ಆರ್. ರಘುರಾಮ
ರೈತನಿಗೆ ಒಂದು ಲಕ್ಷ ರೂ. ಹಣ ವಾಪಸ್
ಹುಣಸೂರು : ಬಸ್‌ನಲ್ಲಿ ಒಂದು ಲಕ್ಷ ರೂ. ನಗದು ಕಳೆದುಕೊಂಡಿದ್ದ ರೈತನಿಗೆ ಚಾಲಕ-ನಿರ್ವಾಹಕರು ಮರಳಿ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.
ನಿರ್ವಾಹಕ ಬಿ.ಎಸ್.ಮಹೇಶ್ ಹಾಗೂ ಚಾಲಕ ಎಂ.ರವಿಕುಮಾರ್ ಅವರು ದೊಡ್ಡಕೊಪ್ಪಲಿನ ರೈತ ಬಸವರಾಜು ಅವರಿಗೆ ಬಸ್‌ನಲ್ಲಿ ಸಿಕ್ಕಿದ್ದ ಹಣವನ್ನು ಹಿಂದಿರುಗಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಎರಡು ದಿನಗಳ ಹಿಂದೆ ರೈತ ಬಸವರಾಜು ಹುಣಸೂರಿನ ಎಂಡಿಸಿಸಿ ಬ್ಯಾಂಕಿನಲ್ಲಿ ಒಂದು ಲಕ್ಷರೂ. ನಗದು ಡ್ರಾ ಮಾಡಿಕೊಂಡು, ಹಣದ ಕಟ್ಟುಗಳಿಗೆ ಪೇಪರ್ ಸುತ್ತಿ ಪಂಚೆಯಲ್ಲಿ ಸುತ್ತಿಕೊಂಡು ಬಸ್ ಹತ್ತಿದ್ದರು.
ಹುಣಸೂರು ಡಿಪೋಗೆ ಸೇರಿದ ಹುಣಸೂರು-ವಾರಂಚಿ-ಊಯಿಗೊಂಡನಹಳ್ಳಿ (ರೂಟ್‌ನಂ.68)ರಿಂದ
ಗ್ರಾಮದಲ್ಲಿ ಇಳಿಯುವ ಸಂದರ್ಭ ಪಂಚೆಯಿಂದ ಹಣ ಕೆಳಗೆ ಬಿದ್ದಿದೆ. ಬಸ್‌ನೊಳಗೆ ಬಂಡಲ್ ನಿರ್ವಾಹಕ ಮಹೇಶ್ ಕೈಗೆ ಸಿಕ್ಕಿದೆ. ಚಾಲಕ ರವಿಕುಮಾರ್‌ರೊಂದಿಗೆ ಚರ್ಚಿಸಿ, ಡಿಪೋ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದಾರೆ.
ಹಣ ಕಳೆದುಕೊಂಡಿದ್ದ ರೈತ ಮರುದಿನ ಕಂಡಕ್ಟರ್‌ಗೆ ವಿಚಾರಿಸಿದಾಗ, ಡಿಪೋಗೆ ಬಂದು ಸೂಕ್ತ ದಾಖಲೆ ನೀಡಿ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಮಂಗಳವಾರ ದಾಖಲಾತಿಗಳೊಂದಿಗೆ ರೈತ ಬಸವರಾಜು ಡಿಪೋ ವ್ಯವಸ್ಥಾಪಕ ಎಂ.ಶೇಷುಮೂರ್ತಿ ಅವರ ಸಮ್ಮಖದಲ್ಲಿ ಹಣ ಪಡೆದುಕೊಂಡು ಕೃತಜ್ಞತೆ ಸಲ್ಲಿಸಿದ್ದಾರೆ. ಚಾಲಕ-ನಿರ್ವಾಹಕರಿಬ್ಬರ ಬದ್ಧತೆಗೆ ಶೇಷುಮೂರ್ತಿ ಹಾಗೂ ಅಧಿಕಾರಿಗಳು ಅಭಿನಂದಿಸಿದ್ದಾರೆ.