ಮೈಸೂರಿನ ವಿಜ್ಞಾನ ಭವನದಲ್ಲಿ ಗುರುವಾರ ಅಭಿನಂದನಾ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ.ಕೆ.ಎಸ್. ರಂಗಪ್ಪ, ಪ್ರೊ. ಶರಣಪ್ಪ ವಿ. ಹಲಸೆ, ಡಾ.ಸಿ.ಎನ್. ಆನಂದ್ ಕುಮಾರ್, ಪ್ರೊ. ಹೇಮಂತ್ ಕುಮಾರ್, ಎಚ್. ಶ್ರೀನಿವಾಸ್ ಹಾಗೂ ಇತರರು ಇದ್ದರು.
ಮೈಸೂರು: ಪ್ರೊ.ಕೆ.ಎಸ್. ರಂಗಪ್ಪ ಅಭಿಮಾನಿ ಬಳಗ ವತಿಯಿಂದ ನಗರದ ವಿಜ್ಞಾನ ಭವನದಲ್ಲಿ ಗುರುವಾರ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.
ನಿವೃತ್ತ ಪ್ರಾಧ್ಯಾಪಕ ಪ್ರೊ. ಶ್ರೀಕಂಠಸ್ವಾಮಿ ಮಾತನಾಡಿ, ಸಾಧನೆ ತೋರಲು ಬಯಸುವ ಪ್ರತಿಯೊಬ್ಬರಿಗೆ ಪ್ರೊ.ಕೆ.ಎಸ್. ರಂಗಪ್ಪ ಸ್ಫೂರ್ತಿ. ಅವರೇನು ಶ್ರೀಮಂತ ಮನೆತನದಿಂದ ಬಂದವರಲ್ಲ. ಗ್ರಾಮೀಣ ಹಿನ್ನೆಲೆಯಿಂದ ಬಂದ ಅವರು ಪ್ರತಿನಿತ್ಯ 10 ಮೈಲಿ ನಡೆದುಕೊಂಡು ವಿದ್ಯಾಭ್ಯಾಸ ಪಡೆದರು. ಸಂಶೋಧನ ಕ್ಷೇತ್ರದಲ್ಲಿ ಅವರು ತೋರಿದ ಸಾಧನೆ ಅಪಾರ ಎಂದರು.
ಸಾಕಷ್ಟು ಜನರು ನಿವೃತ್ತಿ ಅಂಚಿಗೆ ಬಂದಾಗ ಸಂಶೋಧನೆ ನಿಲ್ಲಿಸುತ್ತಾರೆ. ಆದರೆ, ಪ್ರೊ.ರಂಗಪ್ಪ ನಿವೃತ್ತಿಯ ನಂತರವೂ ಸಕ್ರಿಯವಾಗಿ ಸಂಶೋಧನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂಶೋಧನಾ ಪ್ರಬಂಧ ಮಂಡಿಸುವುದು ಅತ್ಯಂತ ಸವಾಲಿನ ವಿಚಾರ. ಆದರೆ, ರಂಗಪ್ಪ ಅವರು ಹಲವಾರು ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದಾರೆ ಎಂದು ಹೇಳಿದರು.
ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಪರೀಕ್ಷಾಂಗ ಕುಲಸಚಿವ ಡಾ.ಸಿ.ಎನ್. ಆನಂದ್ ಕುಮಾರ್, ವಿಶ್ರಾಂತ ಕುಲಪತಿಗಳಾದ ಪ್ರೊ.ಕೆ.ಎಸ್.ರಂಗಪ್ಪ, ಪ್ರೊ. ಹೇಮಂತ್ ಕುಮಾರ್, ರಂಗಪ್ಪ ಅಭಿಮಾನಿ ಬಳಗ ಅಧ್ಯಕ್ಷ ಎಚ್. ಶ್ರೀನಿವಾಸ್, ಉಪಾಧ್ಯಕ್ಷ ಎಸ್. ರವಿಕುಮಾರ್, ಪ್ರಾಧ್ಯಾಪಕರಾದ ಪ್ರೊ.ಎಂ.ಎಸ್. ಚಂದ್ರಶೇಖರ್, ಪ್ರೊ.ಚಂದ್ರನಾಯಕ್ ಹಾಗೂ ಇತರರು ಇದ್ದರು.