32ನೇ ರಾಜ್ಯ ಮಟ್ಟದ ಭಜನಾ ಮತ್ತು ಏಕತಾರಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 
ಮೈಸೂರು

ಭಜನಾ, ಏಕತಾರಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಪ್ರಮುಖ ಮುಖ್ಯಾಂಶಗಳು

  • 750 ಪುರುಷ, ಮಹಿಳಾ, ಮಕ್ಕಳ ಮಹಿಳಾ ತಂಡಗಳು ಭಾಗಿ
  • ವಿಜೇತ ತಂಡಗಳಿಗೆ ಪ್ರತಿ ವಿಭಾಗಕ್ಕೂ ಪ್ರತ್ಯೇಕ ಬಹುಮಾನ
ಮೈಸೂರು: ಸುತ್ತೂರು ಜಾತ್ರೆಗೆ ಆಗಮಿಸಿದ ಜನರಿಗೆ ಭಕ್ತಿ ಸಂಗೀತ ಉಣಬಡಿಸಿದ 32ನೇ ರಾಜ್ಯ ಮಟ್ಟದ ಭಜನಾ ಮತ್ತು ಏಕತಾರಿ ಸ್ಪರ್ಧಾ ವಿಜೇತರಿಗೆ ಸೋಮವಾರ ಬಹುಮಾನ ವಿತರಿಸಲಾಯಿತು.
ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸುಮಾರು 750 ಪುರುಷ, ಮಹಿಳಾ, ಮಕ್ಕಳ ತಂಡಗಳು ಭಾಗವಹಿಸಿದ್ದವು. ಏಳು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆದಿತ್ತು. ವಿಜೇತ ತಂಡಗಳಿಗೆ ಪ್ರತಿ ವಿಭಾಗಕ್ಕೂ ಪ್ರತ್ಯೇಕ ಬಹುಮಾನ ನೀಡಿ ನೆನಪಿನ ಕಾಣಿಕೆ, ಪ್ರಶಂಸನಾ ಪತ್ರ ನೀಡಲಾಯಿತು. 

ಪುರುಷರ ವಿಭಾಗ: 

ಗದಗ ಜಿಲ್ಲೆ ಶ್ರೀರಾಮ ಭಜನಾ ಸಂಘ(ಪ್ರ), ಗುಂಡ್ಲುಪೇಟೆಯ ಬೆಟ್ಟಮಾದಹಳ್ಳಿ ಬಸವೇಶ್ವರ ಭಜನಾ ಸಂಘ(ದ್ವಿ), ಮೈಸೂರಿನ ಜೆ.ಎಸ್.ಎಸ್. ಬಡಾವಣೆ ಶ್ರೀಶಿವರಾತ್ರಿ ರಾಜೇಂದ್ರ ಭಜನಾ ಕಲಾತಂಡ( ತೃ), ನಂಜನಗೂಡು ತಾಲೂಕಿನ ದೇವನೂರಿನ ಶ್ರೀ ಗುರು ಮಲ್ಲೇಶ್ವರ ಭಜನಾ ಸಂಘ(4ನೇ ಸ್ಥಾನ), ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿವಾನಂದ ಭಜನಾ ಸಂಘ(5ನೇ ಸ್ಥಾನ), ಮೈಸೂರಿನ ಕುಪ್ಪಲೂರಿನ ಶಿವರಾತ್ರೀಶ್ವರ ಹವ್ಯಾಸಿ ಭಜನಾ ಮಂಡಳಿ, ಬೆಳಗಾವಿಯ ಜಿಲ್ಲೆಯ ರಾಯಭಾಗದ ಮಲ್ಲಿಕಾರ್ಜುನ ಜಾನಪದ ಭಜನಾ ಮಂಡಳಿ, ಶಿಕಾರಿಪುರ ತಾಲೂಕಿನ ನೆಲವಾಗಿಲು ವಿನಾಯಕ ಭಜನಾ ಸಂಘ, ವರುಣ ಹೋಬಳಿಯ ಆಯರಹಳ್ಳಿ ಗುರುಮಲ್ಲೇಶ್ವರ ಭಜನಾ ಸಂಘ, ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೆಣ್ಣೂರಿನ ಬಸವೇಶ್ವರ ಭಜನಾ ಸಂಘ(ಸಮಾಧಾನಕರ ಬಹುಮಾನ).

ಗ್ರಾಮೀಣ ಮಹಿಳಾ ಭಜನಾ ತಂಡ: 

ಗುಂಡ್ಲುಪೇಟೆ ತಾಲೂಕಿನ ಕೆಲಸೂರಪುರದ ಶರಣೆ ಗಂಗಾಂಬಿಕೆ ಮಹಿಳಾ ಭಜನಾ ಸಂಘ(ಪ್ರ), ನಂಜನಗೂಡು ತಾಲೂಕಿನ ಸೋನಹಳ್ಳಿ ಶಿವರಾತ್ರೀಶ್ವರ ಮಹಿಳಾ ಭಜನಾ ಸಂಘ(ದ್ವಿ), ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೋಟೆನಾಯಕನಹಳ್ಳಿ ಬನಶಂಕರಿ ಮಹಿಳಾ ಕಲಾ ತಂಡ(ತೃ), ಬನ್ನೂರು ಹೋಬಳಿಯ ಯಾಚೇನಹಳ್ಳಿ ಶ್ರೀಸಿದ್ದೇಶ್ವರ ಕಲಾ ತಂಡ(4ನೇ ಸ್ಥಾನ), ತಿಪಟೂರು ತಾಲೂಕಿನ ಹರಚನಹಳ್ಳಿ ಸಿದ್ದಶ್ರೀ ಮಹಿಳಾ ಭಜನಾ ತಂಡ(5ನೇ ಸ್ಥಾನ), ಬಾಗಲಕೋಟೆ ಜಿಲ್ಲೆಬೀಳಗಿ ತಾಲೂಕಿನ ನಾಗರಾಳ ಮಹಿಳೆಯರ ಭಜನಾ ತಂಡ, ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ವಡೆಯರಹಳ್ಳಿ ದುರ್ಗಾಂಬ ಭಜನಾ ಮಂಡಳಿ, ಜಾವೂರಿನ ಬಸವೇಶ್ವರ ಮಹಿಳಾ ಭಜನಾ ತಂಡ, ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕೊಣ್ಣೂರಿನ ಯಾಯಕ್ಕದೇವಿ ಭಜನಾ ಮಂಡಳಿ, ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗಂಗೂರಿನ ರಂಗನಾಥಸ್ವಾಮಿ ಭಜನಾ ಮಂಡಳಿ (ಸಮಾಧಾನಕರ).

ಮಹಿಳೆಯರ ನಗರ ವಿಭಾಗ: 

ಮೈಸೂರಿನ ಬೋಗಾದಿಯ ಅಮೃತ ವಿದ್ಯಾಲಯ( ಪ್ರ), ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕುಶಾವತಿಯ ಮಾರುತಿ ಭಜನಾ ಮಂಡಳಿ (ದ್ವಿ), ಮೈಸೂರಿನ ಬೋಗಾದಿಯ ರಾಜರಾಜೇಶ್ವರಿ ಅಕ್ಕನ ಬಳಗ(ತೃ), ಮಂಡಿ ಮೊಹಲ್ಲಾದ ಹಂಸಧ್ವನಿ ಭಜನಾ ಮಂಡಳಿ(4ನೇ ಸ್ಥಾನ ), ನಂಜನಗೂಡಿನ ಚಾಮುಂಡೇಶ್ವರಿ ಭಜನಾ ತಂಡ (5ನೇ ಸ್ಥಾನ), ಮೈಸೂರಿನ ಸ್ವರ ಸಂಗಮ ಭಜನಾ ಮಂಡಳಿ, ಸಕಲೇಶಪುರದ ಸ್ವರರಾಗ ಮಹಿಳಾ ಭಜನಾ ಮಂಡಳಿ, ಕುವೆಂಪುನಗರದ ನೀಲಗಂಗಾ ಮಹಿಳಾ ಬಳಗ, ನಜರ್‌ಬಾದ್‌ನ ನಿಂಬುಜಾದೇವಿ ಭಜನಾ ಮಂಡಳಿ, ಖಿಲ್ಲೆ ಮೊಹಲ್ಲಾದ ದೈವಜ್ಞ ಮಹಿಳಾ ಭಜನಾ ಮಂಡಳಿ (ಸಮಾಧಾನಕರ).

ಪುರುಷರ ಏಕತಾರಿ ವಿಭಾಗ:

ಬೈಲಹೊಂಗಲ ತಾಲೂಕಿನ ಕಾಳಿಕಾದೇವಿ ಏಕತಾರಿ ತಂಡ(ಪ್ರ), ಅರಸೀಕೆರೆ ತಾಲೂಕಿನ ರಾಂಪುರದ ನಿರ್ಮಾಣ ಸಿದ್ದೇಶ್ವರ ಭಜನಾ ಸಂಘ(ದ್ವಿ), ಚಿಕ್ಕಮಗಳೂರು ತಾಲೂಕಿನ ಬೆಳವಾಡಿಯ ಬಸವೇಶ್ವರ ಭಜನಾ ಕಲಾ ಸಂಘ(ತೃ), ಚನ್ನರಾಯಪಟ್ಟಣ ತಾಲೂಕಿನ ರಾಂಪುರದ ರೇವಣ್ಣ ಸಿದ್ದೇಶ್ವರ ಭಜನಾ ಮಂಡಳಿ(4ನೇ ಸ್ಥಾನ), ಹಾಸನ ತಾಲೂಕಿನ ದೊಡ್ಡ ಹೊನ್ನೆನಹಳ್ಳಿ ಲಕ್ಷ್ಮೀ ಭಜನೆ ತಂಡ(5ನೇ ಸ್ಥಾನ).

ಮಹಿಳಾ ಏಕತಾರಿ ವಿಭಾಗ: 

ಚನ್ನರಾಯಪಟ್ಟಣ ತಾಲೂಕಿನ ರೇವಣ್ಣ ಸಿದ್ದೇಶ್ವರ ಭಜನಾ ಮಂಡಳಿ (ಪ್ರ), ಮಂಡ್ಯ ತಾಲೂಕಿನ ಕಸರವಾಡಿಯ ಈಶ್ವರಮ್ಮ ಕಲಾ ಸಂಘ(ದ್ವಿ), ಪಾಂಡವಪುರ ತಾಲೂಕಿನ ಹಳೇಬೀಡಿನ ರೇವಣ್ಣ ಸಿದ್ದೇಶ್ವರ ಭಜನಾ ಮಂಡಳಿ (ತೃ), ಮಂಡ್ಯದ ಹೊಸಳ್ಳಿಯ ಜ್ಞಾನಾನಂದ ಕಲಾ ಬಳಗ(4ನೇ ಸ್ಥಾನ), ಮಂಡ್ಯದ ಶಾರದಾಂಬ ಕಲಾ ಬಳಗ(5ನೇ ಸ್ಥಾನ).

ಹೊರರಾಜ್ಯಗಳ ಪುರುಷರ ವಿಭಾಗ: 

ಈರೋಡ್ ಜಿಲ್ಲೆಯ ತಾಳವಾಡಿ ಕೊಡಿಪುರ ಗ್ರಾಮದ ಬಸವೇಶ್ವರ ಭಜನಾ ಸಂಘ(ಪ್ರ), ಇದೇ ತಾಲೂಕಿನ ಚಿಕ್ಕಳ್ಳಿಯ ಗುರುಮಲ್ಲೇಶ್ವರ ಭಜನಾ ಸಂಘ(ದ್ವಿ), ಮಲ್ಲನಗುಳಿ ಗ್ರಾಮದ ಶ್ರೀಗುರುಮಲ್ಲೇಶ್ವರ ಭಜನಾ ಸಂಘ(ತೃ).
ಹೊರ ರಾಜ್ಯಗಳ ಮಹಿಳಾ ವಿಭಾಗ: ಕೇರಳದ ಕಾಸರಗೂಡು ಜಿಲ್ಲೆಯ ನಾರಾಯಣಮಂಗಲ ನಾಪೊಕ್ಲು ಗ್ರಾಮದ ಮಹಾವಿಷ್ಣು ಮಹಿಳಾ ಭಜನಾ ಸಂಘ(ಪ್ರ), ಕೇರಳದ ಮಂಜುಂಗಾವು ಗ್ರಾಮದ ಪಾರ್ಥಸಾರಥಿ ಮಹಿಳಾ ಭಜನಾ ಸಂಘ(ದ್ವಿ), ಕಾಸರಗೂಡು ಜಿಲ್ಲೆಯ ಕುಂಬಳೆಯ ಮಹಾವಿಷ್ಣು ಮಹಿಳಾ ಭಜನಾ ಸಂಘ(ತೃ).

ಮಕ್ಕಳ ವಿಭಾಗ: 

ಮೈಸೂರು ಬೋಗಾದಿಯ ಅಮೃತ ವಿದ್ಯಾಲಯಂ(ಪ್ರ), ಬೋಗಾದಿಯ ಜಯಮಾಲ ತಂಡ(ದ್ವಿ), ಧಾರವಾಡ ಜಿಲ್ಲೆಯ ಬಾಡ ಗ್ರಾಮದ ಶ್ರೀಕರಿಯಮ್ಮದೇವಿ ಭಜನಾ ಸಂಘ(ತೃ), ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರಸ್ವಾಮಿ ಭಜನಾ ತಂಡ(4ನೇ ಸ್ಥಾನ), ಬೆಳಗಾವಿಯ ಅಕ್ಕಮಹಾದೇವಿ ಮಕ್ಕಳ ಭಜನಾತಂಡ(5ನೇ ಸ್ಥಾನ).