ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸೋಮವಾರ ಬನ್ನೂರಿನಲ್ಲಿ 2026-27ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮರು ವಿತರಣೆ ಮಾಡಿ, ಅಭಿನಂದಿಸಿ ಮಾತನಾಡಿದ ಅವರು ಕ್ರೀಡೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಮಹತ್ವದ ಪಾತ್ರವಹಿಸುತ್ತದೆ. ಆದ್ದರಿಂದ ವಿದ್ಯೆ ಜೊತೆಗೆ ಕ್ರೀಡೆಯಲ್ಲಿ ತೊಡಿಸಿ
ಕ್ರೀಡಾ ಮೇಲ್ವಿಚಾರಕ, ಹಿರಿಯ ಉಪನ್ಯಾಸಕ ಎನ್. ಜವರಯ್ಯ ಮಾತನಾಡಿ, ಗ್ರಾಮೀಣ ಹಾಗೂ ದೇಸಿ ಕ್ರೀಡೆಗಳನ್ನು ಉಳಿಸಿ ಬೆಳೆಸುವಂತಹಾಗಬೇಕು, ಆರೋಗ್ಯವಂತರಾಗಿರಲು ಕ್ರೀಡೆ ಅತ್ಯವಶ್ಯಕ, ಕ್ರೀಡೆಗಳು ಮಾನವನ ಪ್ರಗತಿಗೆ ಹೆಚ್ಚು ಸಹಕಾರಿ ಯಾಗಲಿದೆ ಎಂದರು,
ಕ್ರೀಡಾಕೂಟದಲ್ಲಿ ವಿಜೇತರಾದ ವಾಲಿಬಾಲ್(ಬಾಲಕರ ವಿಭಾಗ ) ಪ್ರಥಮ ಸ್ಥಾನ ಜೀವನ್ ಹಾಗೂ ತಂಡ, ಯಶಸ್ವಿನಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ, ಪ್ರಶಾಂತ್ ಪ್ರಥಮ ಸ್ಥಾನ ಹಾಗೂ ಪ್ರೀತಮ್ ತ್ರಿವಿಧ ಜಿಗಿತ ತೃತೀಯ ಸ್ಥಾನ, ಗಾನವಿ 100 ಮೀಟರ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಸೋಲು ಎತ್ತರ ಜಿಗಿತ ದ್ವಿತೀಯ ಸ್ಥಾನ, ಮಣಿಕಂಠ ಉದ್ದ ಜಿಗಿತ ಪ್ರಥಮ ಸ್ಥಾನ ಗಳಿಸಿ, ಬಹುಮಾನಗಳನ್ನು ಪಡೆದಿದ್ದಾರೆ. ಕಾಲೇಜಿನ ಉಪನ್ಯಾಸಕರ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.