ಮೈಸೂರು ಜಿಲ್ಲಾ ಕೇಂದ್ರ ಕಾರಾಗೃಹ
ಮೈಸೂರು: ಜೈಲು ಕೈದಿಗಳು ತಮ್ಮ ಕುಟುಂಬಸ್ಥರು ಅಥವಾ ವಕೀಲರೊಂದಿಗೆ ಮಾತನಾಡಲು ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಅಳವಡಿ ಸಿದ್ದ ಪ್ರಿಸನ್ ಕಾಲ್ ಸಿಸ್ಟಮ್‌ವೊಂದನ್ನು ಕೈದಿಯೊಬ್ಬ ನಾಶ ಪಡಿಸಿದ್ದಾನೆ.
ಪ್ರಿಸನ್ ಕಾಲ್ ಸಿಸ್ಟಮ್ ಪೂರ್ವ-ಅನುಮೋದಿತ ಫೋನ್ ಸಂಖ್ಯೆಗಳಿಗೆ ಮಾತ್ರ ಕರೆ ಮಾಡಲು ಅವಕಾಶ ನೀಡುತ್ತದೆ. ಕಾರಾಗೃಹದಲ್ಲಿ ಒಟ್ಟು 10 ಪ್ರಿಸನ್ ಕಾಲ್ ಸಿಸ್ಟಮ್ ಅಳವಡಿಸಲಾಗಿದ್ದು, ಪ್ರತಿಯೊಂದು ಪ್ರಿಸನ್ ಕಾಲ್ ಸಿಸ್ಟಮ್‌ನ ಮೌಲ್ಯ 1,68,695 ರೂ.ಗಳಾಗಿದೆ. ಬುಧವಾರ ಪ್ರಿಸನ್ ಕಾಲ್ ಸಿಸ್ಟಮ್ ಮೂಲಕ ಕರೆ ಕುಟುಂಬದವರಿಗೆ ಪ್ರಮೋದ್ ಎಂಬ ಕೈದಿಯು ಕರೆ ಮಾಡಿದ್ದ. ಆದರೆ, ಕುಟುಂಬ ದವರ ಮಾತು ಸರಿಯಾಗಿ ಕೇಳಿಸದೆ ಹಿನ್ನೆಲೆಯಲ್ಲಿ ಕೋಪಗೊಂಡು ಪ್ರಿಸನ್ ಕಾಲ್ ಸಿಸ್ಟಮ್‌ಗೆ ಕೈಯಿಂದ ಗುದ್ದಿ ಹಾನಿ ಮಾಡಿದ್ದಾನೆ. ಈ ಕುರಿತು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸಿ ಯಂತ್ರ ಕಳವು: ರಾಜೀವ್‌ನಗರ ರಿಂಗ್ ರಸ್ತೆಯ ಬಳಿ ನಿರ್ಮಾಣ ಹಂತದಲ್ಲಿರುವ ಸಮಸ್ತ ಹೊಟೇಲ್ನ ಕಟ್ಟಡದ ಪಶ್ಚಿಮ ಭಾಗದ ಗೋಡೆಯಲ್ಲಿ ಅಳವಡಿಸಿದ್ದ 3 ಎಸಿ ಯಂತ್ರಗಳ ಪೈಕಿ 2 ಯಂತ್ರಗಳು ಇತ್ತೀಚೆಗೆ ಕಳುವಾಗಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಕಳವು: ನಗರದ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗ ನಿಲ್ಲಿಸಿದ್ದ ನಾಗನಹಳ್ಳಿಯ ಕೌಶಿಕ್ ಗೌಡ ಅವರ ಬೈಕ್ ಇತ್ತೀಚೆಗೆ ಕಳುವಾಗಿದೆ. ಬಸ್ ನಿಲ್ದಾಣ ಮುಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿ ಶಾಪಿಂಗ್ ಮುಗಿಸಿ ವಾಪಾಸ್ ಬರುವಷ್ಟರೊಳಗೆ ಬೈಕ್ ಕಳುವಾಗಿದೆ. ಈ ಕುರಿತು ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.