ಬೆಟ್ಟದಪುರ ಸಮೀಪದ ಅಂಬಲಾರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ಆರ್. ಶಂಕರೇಗೌಡ ಹಾಗೂ ಉಪಾಧ್ಯಕ್ಷರಾಗಿ ರಾಜೇಶ್ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನಿರ್ದೇಶಕರು, ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು. 
ಮೈಸೂರು

ಅಂಬಲಾರೆ ಡೇರಿಗೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ

ಬೆಟ್ಟದಪುರ: ಸಮೀಪದ ಅಂಬಲಾರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ಆರ್.ಶಂಕರೇಗೌಡ ಹಾಗೂ ಉಪಾಧ್ಯಕ್ಷರಾಗಿ ರಾಜೇಶ್ ಅವಿರೋಧವಾಗಿ ಆಯ್ಕೆಯಾದರು.
ನೂತನ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಈ ವೇಳೆ ಎರಡು ಸ್ಥಾನಗಳಿಗೂ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಆಯ್ಕೆಯಾದ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಿಹಿ ತಿನಿಸಿ, ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಜವರೇಗೌಡ, ವಸಂತಕುಮಾರ್, ಕರೀಶೆಟ್ಟಿ, ವೀರಭದ್ರ, ಪ್ರಸನ್ನ, ಗೌರಮ್ಮ, ಕಲಾವತಿ, ಪ್ರಭಾಕರ, ಮುಖಂಡರಾದ ಟಿ.ಹರೀಶ್, ಕೆ.ಮಹೇಶ್, ಅಭಿಲಾಶ್, ರಘು, ಗೋವಿಂದ, ನಂದೀಪ್, ಗಣೇಶ್, ದೊಡ್ಡೇಗೌಡ, ಬಸವರಾಜು, ವೆಂಕಟೇಗೌಡ, ಸತೀಶ್, ಮಹದೇವ್, ಶಿವಣ್ಣಚಾರಿ, ರವಿ, ಸಂಘದ ಸಿಇಒ ವೆಂಕಟೇಶ್, ಸಿಬ್ಬಂದಿ ಸತೀಶ್, ಲೋಕೇಶ್, ಅವಿನಾಶ್ ಇದ್ದರು.