ಸರಗೂರು ತಾಲೂಕಿನ ಕಿತ್ತೂರು (ಬಸಾಪುರ) ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಯಾದ ಅಧ್ಯಕ್ಷ ಎಂ.ಮಲ್ಲೇಶ್, ಉಪಾಧ್ಯಕ್ಷ ಸ್ವಾಮಿಗೌಡ ಅವರನ್ನು ಮುಖಂಡ ಅಭಿನಂದಿಸಿದರು. ನರಸಿಂಹಮೂರ್ತಿ, ರವಿ, ಶಿವರಾಜು, ನಾಗರಾಜು, ಮಣಿ ಇದ್ದರು.
ಸರಗೂರು: ಕಿತ್ತೂರು (ಬಸಾಪುರ) ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಮಲ್ಲೇಶ್, ಉಪಾಧ್ಯಕ್ಷರಾಗಿ ಸ್ವಾಮಿಗೌಡ ಆಯ್ಕೆಯಾಗಿದ್ದಾರೆ.
ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಎಂ.ಮಲ್ಲೇಶ್ ಹಾಗೂ ಟಿ.ಕಾಳಸ್ವಾಮಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಮಲ್ಲೇಶ್ 7 ಮತ ಪಡೆದು ಆಯ್ಕೆಯಾದರು. ಕಾಳಸ್ವಾಮಿ 6 ಮತ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ವಾಮಿಗೌಡ 7 ಮತ ಪಡೆದು ಗೆಲುವು ಸಾಧಿಸಿದರು. ಶಿವಸಿದ್ದಯ್ಯ 6 ಮತ ಪಡೆದು ಪರಾಭಗೊಂಡರು.
ಚುನಾವಣಾಧಿಕಾರಿ ಸುರೇಶ್, ನಿರ್ದೇಶಕರಾದ ಸಣ್ಣ ಸೋಮಯ್ಯ, ನಾಗರಾಜು, ಪುಟ್ಟನಾಯಕ, ಪುಟ್ಟಮಣ್ಣಮ್ಮ, ಮುಖಂಡರಾದ ಪುರಸಭೆ ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ಮನುಗನಹಳ್ಳಿ ಗುರುಸ್ವಾಮಿ, ಪಪಂ ಸದಸ್ಯ ಶ್ರೀನಿವಾಸ, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಮಣಿ, ನಾಗರಾಜು ಉಯ್ಯಂಬಳಿ, ಬಸಾಪುರ ರವಿ, ಗುರುರಾಜ್, ಶಿವಣ್ಣ, ಕಾಳಸ್ವಾಮಿ, ಬಸವರಾಜು, ಬಸವಯ್ಯ, ಮಾರಕಂಡಯ್ಯ, ವೀಕೇಶ, ಪಾಪು, ಪಿ.ನಂದೀಶ್, ಮಂಜುನಾಥ, ಮಾದಪ್ಪ, ಸುರೇಶ್, ಗಿರೀಶ್, ಬಸವರಾಜು, ಬಿ.ಸಿ.ರಾಜು, ಲಂಕೆ ಮಹೇಶ್, ಶಕಲೇಶ್, ಡಿ.ಮಹೇಶ್, ಗೋಪಾಲಯ್ಯ ಇದ್ದರು.