ಸರಗೂರು ತಾಲೂಕಿನ ಕುಂದೂರು ಮತ್ತು ದಡದಹಳ್ಳಿ ಚಿಕ್ಕ ದೇವಮ್ಮ ನಾ ದೇವಸ್ಥಾನದ ಆವರಣದಲ್ಲಿ ಚಿಕ್ಕದೇವಮ್ಮನವರ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮೋಹನಕುಮಾರಿ ಮಾತನಾಡಿದರು. ರಘು, ಮಹದೇವಸ್ವಾಮಿ, ಚಿನ್ನಸ್ವಾಮಿ, ಮೂರ್ತಿ ಇತರರು ಇದ್ದರು. 
ಮೈಸೂರು

ಚಿಕ್ಕದೇವಮ್ಮನವರ ಜಾತ್ರೆಗೆ ಸಿದ್ಧತೆ ಕೈಗೊಳ್ಳಿ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಮೋಹನಕುಮಾರಿ ಸೂಚನೆ
ಸರಗೂರು : ಶ್ರೀಕ್ಷೇತ್ರ ಕುಂದೂರು ಶ್ರೀ ಚಿಕ್ಕದೇವಮ್ಮನವರ ಜಾತ್ರಾ ಮಹೋತ್ಸವ ಜ.2 ರಿಂದ 5 ರ ತನಕ ನಡೆಯುಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ತಹಸೀಲ್ದಾರ್ ಮೋಹನಕುಮಾರಿ ಮುಜರಾಯಿ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಕಲ್ಲಂಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದೂರು ದಡದಹಳ್ಳಿ ಬಳಿ ಇರುವ ಚಿಕ್ಕದೇವಮ್ಮನ ದೇವಸ್ಥಾನದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಶ್ರೀ ಚಿಕ್ಕದೇವಮ್ಮನವರ ಜಾತ್ರೆ ಯಶಸ್ವಿಯಾಗಬೇಕಾದರೆ ಸಾರ್ವಜನಿಕರು ಹಾಗೂ ಮುಖಂಡರು ಸಹಕಾರ ನೀಡಬೇಕು. ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಬೇಕು, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದರ ಜತೆಗೆ ಮೂಲಸೌಲಭ್ಯ ಕಲ್ಪಿಸುವಂತೆ ಸಂಬಂದ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಕಲ್ಲಂಬಾಳು ಗ್ರಾಮ ಪಂಚಾಯಿತಿ ವತಿಯಿಂದ ಜಾತ್ರೆ ಹೊರಾಂಗಣ ಸ್ವಚ್ಛತೆ ಕಾಪಾಡಬೇಕು. ಜಾತ್ರೆಗೆ ಬರಲು ವಿವಿಧೆಡೆಯಿಂದ ಹೆಚ್ಚು ಬಸ್ ವ್ಯವಸ್ಥೆ, ಅಂಗಡಿ ಮುಂಗಟ್ಟು, ಹಾಗೂ ವಾಹನಗಳಿಗೆ ಪಾಕಿರ್ಂಗ್ ವ್ಯವಸ್ಥೆ, ಕುಡಿಯುವ ನೀರು ಸರಬರಾಜು, ಭಕ್ತರಿಗೆ ಅನ್ನದಾಸೋಹ, ಸ್ನಾನ ಗೃಹ, ಶೌಚಗೃಹ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಿಳಿಸಿದರು.
ಗ್ರಾಪಂ ಸದಸ್ಯ ದಡದಹಳ್ಳಿ ಚಿನ್ನಸ್ವಾಮಿ ಮಾತನಾಡಿ, ಕಳೆದ ಬಾರಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಹಾಗೂ ಭಕ್ತರಿಗೆ ತೊಂದರೆ ಉಂಟಾಗಿತ್ತು .ಈ ಬಾರಿ ಬಸ್ ವ್ಯವಸ್ಥೆ ಹೆಚ್ಚಿನ ರೀತಿಯಲ್ಲಿ ಕಲ್ಪಿಸಬೇಕು. ಮಹಿಳೆಯರಿಗೆ ಸ್ಥಾನ ಮಾಡಲು ಜಾಗದ ವ್ಯವಸ್ಥೆ ಇಲ್ಲ, ದೇವಸ್ಥಾನದ ನಾಲ್ಕು ಕಡೆ ಶೌಚಗೃಹ ವ್ಯವಸ್ಥೆ ಮಾಡಬೇಕು. ದೇವಸ್ಥಾನದ ಆವರಣದ ಸುತ್ತ ಮುತ್ತಲಿನ ಸ್ವಚ್ಚತೆ ಹಾಗೂ ಗಿಡಗಂಟಿಗಳು ಬೆಳೆದುಕೊಂಡಿವೆ. ಅದನ್ನು ತೆರವುಗೊಳಿಸಬೇಕು, ರಸ್ತೆಗಳು ಕಿರಿದಾಗಿದ್ದು, ಗುಂಡಿಬಿದ್ದಿವೆ. ಇವುಗಳ ದುರಸ್ತಿ ಕಾರ್ಯ ಆಗಬೇಕು ಎಂದು ಒತ್ತಾಯಿಸಿದರು.
ಮುಜರಾಯಿ ಇಲಾಖೆ ಇಒ ರಘು, ಪಾರುಪತ್ತೇದಾರ ಮಹದೇವಸ್ವಾಮಿ, ಯಜಮಾನರಾದ ಪುಟ್ಟಮಾದೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್, ಚಿನ್ನಸ್ವಾಮಿ, ಮುಖಂಡರಾದ ಗುತ್ತಿಗೆದಾರ ಕುಂದೂರು ಮೂರ್ತಿ, ಶಂಭುಲಿಂಗನಾಯಕ, ನಿಂಗನಾಯಕ, ದೇವಣ್ಣಉಪ್ಪಿ, ಶಿವಕುಮಾರ್, ದಡದಹಳ್ಳಿ ಮೂರ್ತಿ, ಮಹೇಶ್, ಬೀರೇಗೌಡ, ಕಲ್ಲಂಬಾಳು ಶಿವಪ್ಪ, ನಾಗರಾಜಪ್ಪ, ಆರ್‌ಐ ರವಿಚಂದ್ರ, ವಿಎ ಸತ್ಯನಾರಾಯಣ, ಬೆಟ್ಟದಕೃಷ್ಣ, ಸಾರ್ವಜನಿಕರು ಗ್ರಾಮಸ್ಥರು ಇದ್ದರು.