ರಂಜಾನ್ ಅಂಗವಾಗಿ ಸರಗೂರು ಪಟ್ಟಣದ ಖಾದ್ರಿಯಲ್ಲಿ ಮುಸ್ಲಿಮರು ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿ ಶುಭಾಶಯ ಕೋರಿದರು. ಇದಾಯತ್ ಉಲ್ಲಾ ಷರೀಫ್, ಮಜೀದ ನೂರ್ ಅಬ್ದುಲ್ ಜಲೀಲ್, ಅಮೀರ್ ಸುಹೇಲ್, ಅನಸ್, ಯೂನೂಸ್, ಜಲೀಲ್, ಜಾವೀದ್ ಇತರರು ಇದ್ದರು.
ಸರಗೂರು: ಮಾನವಕುಲದ ಒಳಿತಿಗಾಗಿ ಸರ್ವರೂ ಪ್ರಾರ್ಥಿಸುವುದು ಅತ್ಯಂತ ಅವಶ್ಯ. ಮಾನವೀಯತೆಯಿಂದ ಪರಸ್ಪರ ಪ್ರೀತಿ- ವಿಶ್ವಾಸದಿಂದ ಬಾಳುವುದು ಮುಖ್ಯ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕಿನ ಪಟ್ಟಣದ ಪವಿತ್ರ ರಂಜಾನ್ ಪ್ರಯುಕ್ತ ಖಾದ್ರಿಯಾದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮುಸ್ಲಿಮರಿಗೆ ಈದ್ ಉಲ್ ಫಿತ್ರ್ ಹಬ್ಬದ ಶುಭ ಹಾರೈಸಿದ ನಂತರ ಮಾತನಾಡಿದರು.
ಎಚ್.ಡಿ.ಕೋಟೆ ತಾಲೂಕಲ್ಲಿ ಶಾದಿ ಮಹಲ್ ಇದೆ. ಅದೇ ರೀತಿಯಲ್ಲಿ ಸರಗೂರು ಪಟ್ಟಣದಲ್ಲಿ ಶಾದಿ ಮಹಲ್ ಭವನಕ್ಕೆ ಮುಸ್ಲಿಮರು ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಜಾಗವನ್ನು ಗುರುತಿಸಿ ಖಂಡಿತವಾಗಿ ಶಾದಿ ಮಹಲ್ ನಿರ್ಮಾಣ ಮಾಡುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಅದೇ ರೀತಿ ಖಾದ್ರಿಯ ಸುತ್ತ ಕಾಂಪೌಂಡ್ ಹಾಗೂ ಸಮುದಾಯ ಭವನಕ್ಕೆ ಸರ್ಕಾರದ ವತಿಯಿಂದ ಅನುದಾನ ಬಿಡುಗಡೆ ಮಾಡಿಸಿ ಭವನ ನಿರ್ಮಾಣವನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು ತಿಳಿಸಿದರು.
ಭಾರತ ದೇಶ ವಿವಿಧ ಜಾತಿ ಸಂಸ್ಕೃತಿಗಳಿಂದ ಕೂಡಿದೆ. ವಿವಿಧತೆಯಲ್ಲಿ ಏಕತೆಯಿರುವ ನಮ್ಮ ದೇಶದಲ್ಲಿ ಎಲ್ಲರೂ ಒಟ್ಟಾಗಿ ಬಾಳಬೇಕು. ಯಾವುದೇ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಎಲ್ಲ ಧರ್ಮಗಳೂ ಪ್ರೀತಿಯನ್ನು ಬೋಧಿಸುತ್ತವೆ. ಇದನ್ನು ಅರಿತು ಬಾಳಿದರೆ ಸಮಾಜದಲ್ಲಿ ಶಾಂತಿ - ಸೌಹಾರ್ದತೆ ನೆಲೆಸಲು ಸಾಧ್ಯ ಎಂದು ತಿಳಿಸಿದರು.
ಸರಗೂರು ಮುಸ್ಲಿಂ ಸಮಾಜದ ಜಾಮಿಯಾ ಮಸೀದಿ ಗುರುಗಳು ಅಬ್ದುಲ್ ರಷೀದ್, ಯಜಮಾನರಾದ ಇದಾಯತ್ ಉಲ್ಲಾ ಷರೀಫ್, ಮಜೀದ ನೂರ್ ಅಬ್ದುಲ್ ಜಲೀಲ್, ಅಮೀರ್ ಸುಹೇಲ್, ಅನಸ್, ಯೂನೂಸ್, ಜಲೀಲ್, ಜಾವೀದ್, ಸುಭಾನ್, ಇಬ್ರಾಹಿಂ, ಅಬ್ದುಲ್ ವಾಜಿದ್, ಮಪ್ತಿರುಲ್ಲಾ, ಯಾಸೀನ್, ಬಾಷಾ, ಮಹಮದ್ ಅಲಿ, ಮುಖಂಡರು. ಪಪಂ ಸದಸ್ಯ ಶ್ರೀನಿವಾಸ, ಜಿಪಂ ಸದಸ್ಯ ಪಿ. ರವಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಶಿವಶಂಕರ್, ಟೌನ್ ಅಧ್ಯಕ್ಷ ಎಸ್.ಎನ್. ನಾಗರಾಜು, ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಮುಖಂಡರಾದ ಆರ್ಯ ಮಹೇಶ್, ಶಿವನಂಜು, ಶಾಸಕರ ಆಪ್ತ ಸಹಾಯಕ ಸುದರ್ಶನ್, ಗನ್‌ಮನ್ ಸಿದ್ದು ಇದ್ದರು.