ಸರಗೂರು: ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಹೊರ ತರುವಲ್ಲಿ ಶಿಕ್ಷಕರು ಹಿಂದೇಟು ಹಾಕುತ್ತಿದ್ದು, ನಿಜವಾದ ಪ್ರತಿಭೆಯನ್ನು ತಯಾರಿಸುವ ಮನಃಸ್ಥಿತಿಯೂ ಕಡಿಮೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್.ರಾಜು ಬೇಸರವ್ಯಕ್ತಪಡಿಸಿದರು.
ಪಟ್ಟಣದ ಜೆಎಸ್ಎಸ್ ಶಾಲೆಯಲ್ಲಿ ಶುಕ್ರವಾರ ನಡೆದ ಸರಗೂರು ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
೨೦೦೭ರಲ್ಲಿ ಶಾಲಾ ಹಂತದಲ್ಲಿ ಪ್ರತಿಭೆ ಕಾರಂಜಿಗಳು ಎರಡು ದಿನ ೪೭ ಚಟುವಟಿಕೆಗಳು ನಡೆಯುತ್ತಿದ್ದವು. ಪ್ರತಿಭೆ ಪ್ರದರ್ಶನಕ್ಕೆ ಅವಕಾಶವೇ ಸಿಗುತ್ತಿರಲಿಲ್ಲ. ಆದರೆ, ಈಗ ಎಲ್ಲವೂ ಬದಲಾಗಿದೆ. ಅದೇ ರೀತಿ ಈಗಲೂ ಮಕ್ಕಳಲ್ಲಿ ಕಲಿಯುವ ಆಸಕ್ತಿ ಇದೆ. ಶಿಕ್ಷಕರಲ್ಲಿ ತಯಾರಿಕೆಯ ಮನೋಭಾವ ಇಲ್ಲದಾಗಿದೆ. ಒಂದೊಂದು ಮಗುವಿನಲ್ಲಿಯೂ ಒಂದೊಂದು ಪ್ರತಿಭೆ ಇದೆ. ನಿಜವಾದ ಪ್ರತಿಭೆಯನ್ನು ಗುರುತಿಸಬೇಕಿದೆ ಎಂದು ಸಲಹೆ ನೀಡಿದರು.
ಶಾಲೆಯಲ್ಲಿನ ಕೆಲಸದ ಒತ್ತಡದ ನೆಪವೊಡ್ಡಿ ಓದಿನಲ್ಲಿ ಮುಂದಿರುವ ಮಕ್ಕಳನ್ನೆ ಪ್ರತಿಭಾ ಕಾರಂಜಿ, ಕ್ರೀಡೆ ಸೇರಿದಂತೆ ಇನ್ನಿತರ ಎಲ್ಲಾ ಚಟುವಟಿಕೆಗಳಿಗೂ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಪ್ರತಿ ಮಕ್ಕಳನ್ನು ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಶಿಕ್ಷಕರು ತಯಾರು ಮಾಡಬೇಕು. ಇದರಿಂದ ಮಕ್ಕಳಲ್ಲಿನ ವಿಶೇಷ ಪ್ರತಿಭೆ ಅನಾವರಣಗೊಳ್ಳಲಿದೆ. ಇದಲ್ಲದೆ ವೇಷಭೂಷಣ ಧರಿಸುವ ಮಕ್ಕಳಿಗೆ ವೇಷಭೂಷಣದ ಪೂರ್ವ ಪರ ಪರಿಚಯದ ಬಗ್ಗೆ ಅರಿವು ಮೂಡಿಸಬೇಕು ಎಂದು ಸೂಚನೆ ನೀಡಿದರು.
ಸಿಅರ್ ಪಿ ಮಂಜುನಾಥ್ ಮಾತನಾಡಿ, ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಮಕ್ಕಳ ಪ್ರತಿಭೆ ಹೊರತರಲು ಸಾಧ್ಯ. ತೀರ್ಪುಗಾರರು ಮೊಸ ಮಾಡದೇ ನಿಜವಾದ ಪ್ರತಿಭೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ಟಿಪಿಇಒ ಅಜ್ಮಾತ್ ಉಲ್ಲಾ ಬೇಗಂ,
ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ, ಸಿದ್ದರಾಜು, ಶಿಕ್ಷಕರಾದ ರವೀಂದ್ರ ಬಾಬು, ತಿಪ್ಪೇಸ್ವಾಮಿ, ರೇಖಾ, ನಾಗರತ್ನ, ಲೋಕೇಶ್, ಸೇರಿದಂತೆ ಶಿಕ್ಷಕರು ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಶಾಲಾ ಮಕ್ಕಳು ಪ್ರತಿಭೆ ಪ್ರದರ್ಶಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸ