ತಿ.ನರಸೀಪುರ ಪಟ್ಟಣದ ಶ್ರೀರಾಮಪುರದಲ್ಲಿರುವ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಮಗ್ರ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳೊಂದಿಗೆ ಪ್ರಾಂಶುಪಾಲೆ ಮಮತಾ, ನಿಲಯಪಾಲಕ ಶಿವಪ್ರಕಾಶ್, ಶಿಕ್ಷಕರಾದ ಶಶಿಕಲಾ, ಶಿವಪ್ರಸಾದ್, ಕಾವ್ಯಾ ಇದ್ದರು. 
ಮೈಸೂರು

ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಸಮಗ್ರ ಪ್ರಶಸ್ತಿ

ತಿ.ನರಸೀಪುರ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಸಮಗ್ರ ಪ್ರಶಸ್ತಿ ಲಭಿಸಿದೆ.
ಪಟ್ಟಣದ ಪಿಎಂಶ್ರೀ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಅಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪಟ್ಟಣದ ಶ್ರೀರಾಮ ಪುರದಲ್ಲಿರುವ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆಗೈದಿದ್ದಾರೆ. 
ವಿದ್ಯಾರ್ಥಿಗಳಾದ ಗಾನ್ಯ ಅಭಿನಯ ಗೀತೆಯಲ್ಲಿ ಪ್ರಥಮ ಸ್ಥಾನ, ಪ್ರೀತಮ್ ಮಿಮಿಕ್ರಿಯಲ್ಲಿ ಪ್ರಥಮ, ಕೃಪಾಕರ ಕ್ಲೆ ಮಾಡೆಲಿಂಗ್ ದ್ವಿತೀಯ, ಸೋಮನಿಂಗ ಹಿಂದಿ ಕಂಠಪಾಠದಲ್ಲಿ ದ್ವಿತೀಯ ಸ್ಥಾನ, ಗಗನ್ ಆರ್.ಕವನ ವಾಚನದಲ್ಲಿ ತೃತೀಯ, ಕೌಶಿಕ್ ಇಂಗ್ಲಿಷ್ ಕಂಠಪಾಠದಲ್ಲಿ ತೃತೀಯ, ಮಿಥುನ್, ರವಿಕುಮಾರ್, ಪೂಜಾರ್ ಭಕ್ತಿಗೀತೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಶನಿವಾರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಮಮತಾ, ನಿಲಯಪಾಲಕ ಶಿವಪ್ರಕಾಶ್, ಶಿಕ್ಷಕರಾದ ಶಶಿಕಲಾ, ಶಿವಪ್ರಸಾದ್, ಕಾವ್ಯಾ, ನಿಂಗರಾಜಮ್ಮ, ಭರತ್ ಗೌತಮರಾಜ್, ಗುರುಪ್ರಸಾದ್, ರಾಜು ಇದ್ದರು.