ಮೈಸೂರಿನಲ್ಲಿ ಜ.8 ರಂದು ವಿದ್ಯುತ್ ವ್ಯತ್ಯಯವಾಗಲಿದೆ
ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಜ.8 ರಂದು ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಯಾದವಗಿರಿ, ವಿವೇಕಾನಂದ ಮುಖ್ಯರಸ್ತೆ, ಜಾವ ಸರ್ಕಲ್, ಸಂಕಲ್ಪ ಸೆಂಟ್ರಲ್ ಪಾರ್ಕ್, ವೈಷ್ಣವಿ ಸರೋವರ ಅಪಾರ್ಟ್ಮೆಂಟ್, ಜಯಲಕ್ಷ್ಮೀಪುರಂ, ಬಿಎಸ್‌ಎನ್‌ಎಲ್ ಕಚೇರಿ, ಮಹಾಜನ ಕಾಲೇಜು, ಬಿಎಂಎಚ್ ಆಸ್ಪತ್ರೆ, ರಾಘವೇಂದ್ರಸ್ವಾಮಿ ಮಠ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.