ಮೈಸೂರು ನಗರದಲ್ಲಿ ಜ.3 ರಂದು ವಿದ್ಯುತ್ ವ್ಯತ್ಯಯವಾಗಲಿದೆ 
ಮೈಸೂರು

ಮೈಸೂರಿನಲ್ಲಿ ಜನವರಿ 3 ರಂದು ವಿದ್ಯುತ್ ವ್ಯತ್ಯಯ

ಸದೇಶ್ ಕಾರ್ಮಾಡ್
ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವತಿಯಿಂದ ವಿ.ವಿ.ಮೊಹಲ್ಲಾ ಉಪವಿಭಾಗ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಅಳವಡಿಸುವ ಕೆಲಸದ ನಿಮಿತ್ತ ಜ.3 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಮುಡಾ ಗ್ರೌಂಡ 11 ಕೆ.ವಿ. ಮಾರ್ಗದ ವ್ಯಾಪ್ತಿಯಲ್ಲಿ ಬರುವ ವಿಜಯನಗರ 2ನೇ ಹಂತದಲ್ಲಿ ವಿದ್ಯಾವರ್ಧಕ ಕಾಲೇಜು ಹಿಂಭಾಗ, ಸಪ್ತಪದಿ ಚೌಲ್ಟ್ರಿ ಮತ್ತು ಆಯಿಸ್ಟರ್ ಬೇ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಗೋಕುಲಂ 11 ಕೆ.ವಿ. ವಿದ್ಯುತ್ ಮಾರ್ಗ ವ್ಯಾಪ್ತಿಯಲ್ಲಿ ಬರುವ ಗೋಕುಲಂ 3ನೇ ಹಂತ, ಡಾಕ್ಟರ್ಸ್ ಕಾರ್ನರ್, ಮೈಸೂರು ಒನ್ ಗ್ರೌಂಡ್, ಮತ್ತು ಇಎಸ್‌ಐ ಕ್ವಾರ್ಟಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಅದೇ ರೀತಿ ಬೃಂದಾವನ 11 ಕೆ.ವಿ. ವಿದ್ಯುತ್ ಮಾರ್ಗ ವ್ಯಾಪ್ತಿಯಲ್ಲಿ ಬರುವ ಜಯದೇವನಗರ, ಲೋಕನಾಯಕನಗರ, ಮಥುರಾನಗರ, ಲಿಂಗಯ್ಯನಕೆರೆ ಸುತ್ತಮುತ್ತ ಮತ್ತು ಪೋಸ್ಟ್ ಆಫೀಸ್ ಸುತ್ತಮುತ್ತ ಮತ್ತು ಹೆಬ್ಬಾಳ್ ಮುಖ್ಯರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.