ಎಚ್.ಡಿ.ಕೋಟೆ ಪಟ್ಟಣದ ವಿಶ್ವ ಭಾರತಿ ಪ್ರೌಢಶಾಲಾ ಆವರಣದಲ್ಲಿ ಮೈಸೂರಿನ ಹಾರ್ಟ್ ಆಫ್ ಲಿವಿಂಗ್ ಆಶ್ರಮದ ವತಿಯಿಂದ ಸಾವಿರ ವರ್ಷಗಳ ಸೋಮನಾಥ ಜೋತಿರ್ಲಿಂಗ ದರ್ಶನ ನೀಡಲಾಯಿತು. 
ಮೈಸೂರು

ಸೋಮನಾಥ ಜೋತಿರ್ಲೀಂಗ ದರ್ಶನ ಮತ್ತು ರುದ್ರಪೂಜೆ

ಎ. ಆರ್. ರಘುರಾಮ

ಎಚ್.ಡಿ.ಕೋಟೆ: ಗುರುವಿಗೆ ಶ್ರೇಷ್ಠ ಸ್ಥಾನವನ್ನು ನೀಡಲಾಗಿದೆ ನಮ್ಮ ಸಂಪ್ರದಾಯದಲ್ಲಿ ಅದಕ್ಕಾಗಿ ಹೇಳುತ್ತೇವೆ ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವು ಮಹೇಶ್ವರ ಎಂದು ಹಾರ್ಟ್ ಆಫ್ ಲಿವಿಂಗ್ ಮೈಸೂರು ಆಶ್ರಮದ ದಿವ್ಯಪಾದ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಶ್ರೀ ವಿಶ್ವ ಭಾರತಿ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಆರ್ಟ್ ಆಫ್ ಲಿವಿಂಗ್ ಆಶ್ರಮದ ವತಿಯಿಂದ ಹಮ್ಮಿಕೊಂಡಿದ್ದ 1000 ವರ್ಷ ಪುರಾತನ ಸೋಮನಾಥ ಜೋತಿರ್ಲೀಂಗ ದರ್ಶನ ಮತ್ತು ರುದ್ರಪೂಜೆ ಕಾರ್ಯಕ್ರಮದಲ್ಲಿ ಆಶೀರ್ವಾಚನ ನೀಡಿ ಮಾತನಾಡಿದರು.
ಗುರು ಪೂಜೆ ಆದ ನಂತರ ಬೇರೆ ಪೂಜೆ ಗಳನ್ನು ಮಾಡುತ್ತೇವೆ ಹಾಗಾಗಿ ಗುರುವಿಗೆ ಶ್ರೇಷ್ಠವಾದ ಸ್ಥಾನವನ್ನು ನೀಡಲಾಗಿದೆ ಎಂದರು.
ನಮ್ಮಲ್ಲಿ ಏನೂ ನೋವ ಇದೆಯೋ, ಅಣುಕು ಇದೆಯೋ, ತೊಂದರೆ ತಾಪ ತ್ರಯ ಎಲ್ಲವೂ ಪರಿವರ್ತನೆ ಆಗಿ ಸುಖಾ ಶಾಂತಿ ನೆಲೆಸಲು ರುದ್ರಾಕ್ಷಿ ಪೂಜೆ ಮಾಡುತ್ತೇವೆ ಎಂದರು.
ಇನ್ನೂ ಸಂಕಲ್ಪ ಎಂದರೆ ನಮ್ಮ ಭವಿಷ್ಯದಲ್ಲಿ ಆರೋಗ್ಯ ಪರಿಸ್ಥಿತಿ. ಆರ್ಥಿಕ ಪರಿಸ್ಥಿತಿ, ವಿದ್ಯಾಭ್ಯಾಸ, ಸಂಬಂದ ಗಳು ಚೆನ್ನಾಗಿ ಆಗಿ ನಮಗೂ ಒಳ್ಳೆಯದು ಆಗಬೇಕು ಬೇರೆಯವರಿಗೂ ಒಳ್ಳೆಯದು ಆಗಬೇಕು ಎಂಬ ಯೋಚನೆ ಇದೆಯಲ್ಲಾ ಅದೇ ಸಂಕಲ್ಪ ಎಂದರು.
ನಮ್ಮ ಮನಸ್ಸು ಆ ಕಡೆ ಈ ಕಡೆ ಹೋಗುತ್ತಾ ಇರುತ್ತದೆ, ಮನಸ್ಸು ವರ್ತಮಾನಕ್ಕೆ ಬರುವುದೇ ಇಲ್ಲಾ. ಯಾವಾಗ ಮನಸ್ಸು ಈ ಕ್ಷಣಕ್ಕೆ ಬರುತ್ತದೋ ಅದು ಬಲಿಷ್ಠ ಆಗುತ್ತದೆ. ಯಾವಾಗ ಮನಸ್ಸು ಬಲಿಷ್ಠ ಆಗುತ್ತದೋ ನಾವು ತೆಗೆದುಕೊಂಡ ಸಂಕಲ್ಪ ಈಡೇರುತ್ತದೆ ಎಂದು ತಿಳಿಸಿದರು.
ಮನಸ್ಸಿಗೆ ಒಬ್ಬ ನಾಥ ಬೇಕು ಅವನೇ ಸೋಮನಾಥ. ಹನ್ನೆರಡು ಜೋತಿರ್ಲಿಂಗ ಗಳಲ್ಲಿ ಮೊಟ್ಟಮೊದಲ ಮೂಲ ಜೋತಿರ್ಲಿಂಗ ಗುಜರಾತಿನ ಸೋಮನಾಥ ಜೋತಿರ್ಲಿಂಗ. ಇದು ಸತ್ಯಯುಗ ಕಾಲದಲ್ಲಿ ನಿರ್ಮಾಣ ಆಗಿದ್ದು, ಶ್ರೀ ಕೃಷ್ಣ ದೇವನು ಖುದ್ದಾಗಿ ಇದನ್ನು ಪ್ರಾರ್ಥನೆ ಮಾಡಿಕೊಂಡು ಬಂದ.
ಸಾವಿರ ವರ್ಷಗಳ ಹಿಂದೆ ಮಹಮದ್ ಘಜ್ನಿ ಈ ಜೋತಿರ್ಲಿಂಗ ವನ್ನು ದ್ವಂಶ ಮಾಡಿದನಂತೆ. ಇದರ ವಿಶೇಷತೆ ಏನೂ ಎಂದರೆ ಇದು ಭೂಮಿಯ ಮೇಲೆ ಇರಲಿಲ್ಲ ಆಕಾಶದಲ್ಲಿ ತೇಲಾಡುತ್ತಾ ಇತ್ತಂತೆ ಅಷ್ಟು ಪ್ರಭಲವಾದ ಜೋತಿರ್ಲಿಂಗ ಎಂದರು.
ಮಹಮದ್ ಘಜ್ನಿ ಧ್ವಂಸ ಮಾಡಿದ ನಂತರ ಉಳಿದ ಅವಶೇಷಗಳನ್ನು ತಮಿಳುನಾಡಿನ ಅಗ್ನಿಹೋತ್ರ ಪುರೋಹಿತರು ಸಾವಿರ ವರ್ಷಗಳ ಕಾಲ ಶೇಖರಣೆ ಮಾಡುತ್ತಾ ಬಂದರು. 1924 ರಲ್ಲಿ ಕಾಂಚಿಶ್ರೀ ಶಂಕರ ಚಾರ್ಯರರು ಮಾರ್ಗದರ್ಶನದಲ್ಲಿ ನೂರು ವರ್ಷಗಳ ಕಾಲ ಇದನ್ನು ಸಂರಕ್ಷಣೆ ಮಾಡಿ 2024 ರಲ್ಲಿ ರವಿಶಂಕರ್ ಗುರೂಜಿ ನೇತೃತ್ವದಲ್ಲಿ ಅಯೋದ್ಯದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಆದ ನಂತರ ಜೋತಿರ್ಲಿಂಗ ಗಳನ್ನು ರವಿಶಂಕರ್ ಗುರೂಜಿ ಅವರಿಗೆ ಹಸ್ತಾಂತರ ಮಾಡಲಾಯಿತು ಎಂದು ತಿಳಿಸಿದರು.
ಈಗ ಬೆಂಗಳೂರಿನ ಆಶ್ರಮದಲ್ಲಿ ಜೋತಿರ್ಲಿಂಗ ಗಳು ಇದ್ದು ಗುರುಗಳ ಮಾರ್ಗದರ್ಶನದಲ್ಲಿ ರಾಜ್ಯದ ಎಲ್ಲಾ ಗ್ರಾಮ ಗಳಿಗೂ ತೆರಳಿ ಜನರಿಗೆ ಇದರ ದರ್ಶನ ನೀಡುತ್ತಾ ಇದ್ದೇವೆ. ಇದರ ಮುಂದೆ ನೀವು ಏನೂ ಸಂಕಲ್ಪ ಮಾಡುತ್ತೀರೋ ಅದು ನೆರವೇರುತ್ತದೆ ಎಂದು ತಿಳಿಸಿದರು.
ನೂರಾರು ಜನರು ಸಂಕಲ್ಪ ಮಾಡಿ ಜೋತಿರ್ಲಿಂಗ ಗಳ ದರ್ಶನ ಪಡೆದರು.
ಇದೇ ಸಂದರ್ಭದಲ್ಲಿ ಸಮಾಜ ರಕ್ಷಣಾ ಸೇನಾ ರಾಜ್ಯ ಅಧ್ಯಕ್ಷ ಹನುಮಂತ ರಾಜು, ನಾಗರಾಜು, ಅನಿತಾ ಶ್ರೀ, ಮಂಜು, ವಿಶ್ವನಾಥ್ ಶೇಷಚಲ, ವೀಣಾ, ಜವರೇಗೌಡ, ಕನ್ನಡ ಪ್ರಮೋದ್, ಭಾಸ್ಕರ್ ಇದ್ದರು.