ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಡಾ.ಎಂ.ಬಿ.ಬೋರಲಿಂಗಯ್ಯ, ಎನ್.ವಿಷ್ಣುವರ್ಧನ, ಎಸ್.ಎಲ್.ಚನ್ನಬಸವಣ್ಣ ಇದ್ದರು. 
ಮೈಸೂರು

ಪೊಲೀಸ್ ಅಧಿಕಾರಿಗಳಿಗೆ ತನಿಖೆ ಕೌಶಲ ಅರಿವು

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕ ಡಾ.ಎಂ.ಬಿ.ಬೋರಲಿಂಗಯ್ಯ ಮಾರ್ಗದರ್ಶನ
 ಮೈಸೂರು: ನಜರ್‌ಬಾದ್‌ನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಪೊಲೀಸ್ ತನಿಖಾಧಿಕಾರಿಗಳ ಕೌಶಲಾಭಿವೃದ್ಧಿಗಾಗಿ ಎರಡು ದಿನಗಳ ಕಾಲ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. 
ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕ ಡಾ.ಎಂ.ಬಿ.ಬೋರಲಿಂಗಯ್ಯ ಮಾತನಾಡಿ, ತನಿಖಾಧಿಕಾರಿಗಳಿಗೆ ತನಿಖೆ ಕೈಗೊಳ್ಳುವ ಹಲವು ಮಾರ್ಗೋಪಾಯ ತಿಳಿಸಿಕೊಟ್ಟರು.
ನಿವೃತ್ತ ನ್ಯಾಯಾಧೀಶ ಸತೀಶ್ ಸಿಂಗ್, ನಿವೃತ್ತ ಅಭಿಯೋಜನ ಉಪನಿರ್ದೇಶಕ ರುದ್ರಯ್ಯ ಗಂಜಿಗಟ್ಟಿ, ನಿವೃತ್ತ ಪಬ್ಲಿಕ್ ಪ್ರಾಸಿಕ್ಯೂಟರ್  ಚಿನ್ನಪ್ಪ, ಮಂಗಳೂರು ವಿಭಾಗದ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ, ವಿಧಿ ವಿಜ್ಞಾನ ಪ್ರಯೋಗಾಲಯದ ಉಪ ನಿರ್ದೇಶಕ ಡಾ. ಚಂದ್ರಶೇಖರ್, ಜೆ.ಎಸ್.ಎಸ್. ಕಾನೂನು ವಿದ್ಯಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ.ಸುರೇಶ್, ನಿವೃತ್ತ ಡಿವೈಎಸ್ಪಿ ಅಶೋಕನ್, ನಿವೃತ್ತ ವಿಧಿವಿಜ್ಞಾನ ಅಧಿಕಾರಿ  ರವೀಂದ್ರ ಇತರರು ಉಪನ್ಯಾಸ ನೀಡಿದರು.
ಪರಸ್ಪರ ಗುಂಪು ಚರ್ಚೆ, ವಿಚಾರ ವಿನಿಮಯ, ಪ್ರಾತ್ಯಕ್ಷಿಕೆ ಪಾತ್ರ ನಿರ್ವಹಣೆ ನೀಡಿ ಕಾರ್ಯಾಗಾರ ನಡೆಸಲಾಯಿತು. ತನಿಖೆಯಲ್ಲಿನ ಲೋಪದೋಷಗಳನ್ನು ಹೋಗಲಾಡಿಸಿ, ತನಿಖಾ ಕೌಶಲವನ್ನು ಹೆಚ್ಚಿಸಿಕೊಂಡು ಗುಣಮಟ್ಟವನ್ನು ಸುಧಾರಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ನಿರ್ಣಯಿಸಲಾಯಿತು.
 ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ಎನ್.ವಿಷ್ಣುವರ್ಧನ, ಉಪನಿರ್ದೇಶಕ ಎಸ್.ಎಲ್.ಚೆನ್ನಬಸವಣ್ಣ, ಸಹಾಯಕ ನಿರ್ದೇಶಕ ಎಸ್.ಎನ್ ಸಂದೇಶ ಕುಮಾರ್ ಇದ್ದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 57 ಅಧಿಕಾರಿಗಳು, ಅಕಾಡೆಮಿಯಲ್ಲಿ ಬುನಾದಿ ತರಬೇತಿ ಪಡೆಯುತ್ತಿರುವ 150 ಪಿ.ಎಸ್.ಐ. (ಸಿವಿಲ್) ಪ್ರಶಿಕ್ಷಣಾರ್ಥಿಗಳು ಸೇರಿದಂತೆ 207 ಅಧಿಕಾರಿಗಳು ಭಾಗವಹಿಸಿದ್ದರು.